Asianet Suvarna News Asianet Suvarna News

ಕರ್ನಾಟಕದಲ್ಲಿ ಮಳೆ ಜತೆ ಕೊರೋನಾ ಅಬ್ಬರ: ಇಲ್ಲಿದೆ ಭಾನುವಾರದ ಅಂಕಿ-ಅಂಶ

ಭಾನುವಾರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ದಾಳಿ ನಡೆಸಿದೆ.  ಹಾಗಾದ್ರೆ ಯಾವ ಜಿಲ್ಲೆಯಲ್ಲಿ ಎಷ್ಟು ಎನ್ನುವ ಅಂಕಿ-ಅಂಶ ಈ ಕೆಳಗಿನಂತಿದೆ.

5985 new COVID19 positive cases and 107 death in Karnataka on August 9th
Author
Bengaluru, First Published Aug 9, 2020, 8:54 PM IST

ಬೆಂಗಳೂರು, (ಆ.09): ರಾಜ್ಯದಲ್ಲಿ ಇವತ್ತು (ಭಾನುವಾರ) ಒಂದೇ ದಿನ 5985 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಶನಿವಾರ 7,178 ಹೊಸ ಪ್ರಕರಣಗಳು ಪತ್ತೆಯಾಗಿ ದಾಖಲೆ ಸೃಷ್ಟಿಸಿತ್ತು. ಇಂದು (ಶನಿವಾರ) 5,985 ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಮೂಲಕ  ಒಟ್ಟು ಸೋಂಕಿತರ ಸಂಖ್ಯೆ 1,78,087 ಕ್ಕೆ ಏರಿಕೆಯಾಗಿದೆ.

ರೈತರಿಗೆ ಮೋದಿ ಆಫರ್, ಕನ್ನಡದಲ್ಲಿ ವಿದ್ಯಾ ಬಾಲನ್ ಆನ್ಸರ್: ಆ.9ರ ಟಾಪ್ 10 ಸುದ್ದಿ! 

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 4670 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 107 ಮಂದಿ ಮೃತಪಟ್ಟಿದ್ದಾರೆ.

ಇದುವರೆಗೆ 93,908 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, ಒಟ್ಟು 3198 ಜನ ಸಾವನ್ನಪ್ಪಿದ್ದಾರೆ. 80,973 ಸಕ್ರಿಯ ಪ್ರಕರಣಗಳಿದ್ದು, 678 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾವಾರು ಅಂಕಿ-ಅಂಶ
ಬೆಂಗಳೂರು 1948, ಮೈಸೂರು 455, ಬಳ್ಳಾರಿ 380, ಉಡುಪಿ 282, ಬೆಳಗಾವಿ 235, ರಾಯಚೂರು 202, ಧಾರವಾಡ 196, ಕಲಬುರಗಿ 194, ಹಾಸನ 168, ದಾವಣಗೆರೆ 158, ಬಾಗಲಕೋಟೆ 149, ಶಿವಮೊಗ್ಗ 149, ದಕ್ಷಿಣ ಕನ್ನಡ 132, ವಿಜಯಪುರ 129, ಗದಗ 114, ಚಿಕ್ಕಮಗಳೂರು 113, ಕೊಪ್ಪಳ 106, ಚಿತ್ರದುರ್ಗ 98, ಬೆಂಗಳೂರು ಗ್ರಾಮಾಂತರ 95, ಯಾದಗಿರಿ 91, ಕೋಲಾರ 87, ಹಾವೇರಿ 80, ತುಮಕೂರು 78, ಬೀದರ್ 70, ಮಂಡ್ಯ 63, ಉತ್ತರ ಕನ್ನಡ 59, ಚಿಕ್ಕಳ್ಳಾಪುರ 47, ಚಾಮರಾಜನಗರ, 47, ರಾಮನಗರ 38 ಕೊಡಗು 22 ಪ್ರಕರಣಗಳು ಪತ್ತೆಯಾಗಿವೆ. 

Follow Us:
Download App:
  • android
  • ios