ಬೆಂಗಳೂರು, (ಫೆ.26): ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಕಡಿಮೆಯಾಗಿದ್ದ ಕೊರೋನಾ ಸೋಂಕಿತರ ಸಂಖ್ಯೆ ಇಂದು (ಶುಕ್ರವಾರ) ಕೊಂಚ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 571 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ 12320 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

2 ನೇ ಅಲೆ ಅಲ್ಲ, ಸುನಾಮಿ...ಭೀತಿ ಹುಟ್ಟಿದ್ದೇಕೆ..?

ಇನ್ನು ಶುಕ್ರವಾರ ಒಂದೇ ದಿನ 642 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಈ ಮೂಲಕ ಇಲ್ಲಿಯವರೆಗೆ 932367 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 

ಒಟ್ಟು 950207 ಪ್ರಕರಣಗಳಿವೆ. 121 ಮಂದಿ ಐಸಿಯುನಲ್ಲಿದ್ದು,  ಪ್ರಸ್ತುತ 5501 ಸಕ್ರಿಯ ಪ್ರಕರಣಗಳಿವೆ. ಎರಡನೇ ಅಲೆ ಭೀತಿ ಶುರುವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಗಡಿಭಾಗಗಳಲ್ಲಿ ಹದ್ದಿನ ಕಣ್ಣಿಟ್ಟಿದೆ. ಅಲ್ಲದೇ ಮದುವೆ, ಜಾತ್ರೆಗಳ ಮೇಲೆ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದೆ.