ಬೆಂಗಳೂರು, (ಆ.05): ಕರ್ನಾಟಕದಲ್ಲಿ ಇಂದು (ಬುಧವಾರ) 5,619 ಕೊರೋನಾ ಸೋಂಕು ಪತ್ತೆಯಾಗಿದ್ದು ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,51,449ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು ಬುಧವಾರ 100 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 2,804ಕ್ಕೆ ಏರಿಕೆಯಾಗಿದೆ.

ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ, 370ನೇ ವಿಧಿ ರದ್ದಾಗಿ ಒಂದು ವರ್ಷ: ಆ.5ರ ಟಾಪ್ 10 ಸುದ್ದಿ!

ಒಟ್ಟಾರೆ 1,51,449 ಕೊರೋನಾ ಪ್ರಕರಣಗಳ ಪೈಕಿ 74,679 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 73,958 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯಾದ್ಯಂತ ಸುಮಾರು 633 ಮಂದಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾವಾರು ಪ್ರಕರಣಗಳು
ಬೆಂಗಳೂರು ನಗರ 1848, ಬಳ್ಳಾರಿ 631, ಬೆಳಗಾವಿ 293, ಮೈಸೂರು 261, ದಾವಣಗೆರೆ 224, ಧಾರವಾಡ 199, ಕಲಬುರಗಿ 197, ಉಡುಪಿ 173, ಕೊಪ್ಪಳ 154, ದಕ್ಷಿಣ ಕನ್ನಡ ಮತ್ತು ಬಾಗಲಕೋಟೆ 149, ಹಾಸನ 137, ಚಿಕ್ಕಬಳ್ಳಾಪುರ 129, ಉತ್ತರ ಕನ್ನಡ 125, ಮಂಡ್ಯ 123, ಬೆಂಗಳೂರು ಗ್ರಾಮಾಂತರ 110, ರಾಯಚೂರು 91, ಗದಗ 78, ಯಾದಗಿರಿ 76, ಹಾವೇರಿ 71, ವಿಜಯಪುರ 66, ಬೀದರ್ 52, ಕೋಲಾರ 49, ಚಿಕ್ಕಮಗಳೂರು 48, ರಾಮನಗರ 45, ಚಾಮರಾಜನಗರ 38, ಶಿವಮೊಗ್ಗ 35, ತುಮಕೂರು 34, ಚಿತ್ರದುರ್ಗ 24 ಮತ್ತು ಕೊಡಗು 13