ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾನುವಾರ ಮತ್ತೆ ಐದು ಸಾವಿರ ಗಡಿದಾಟಿದೆ. ಹಾಗಾದ್ರೆ ಇವತ್ತು ಎಷ್ಟು ಕೇಸ್?ಎಷ್ಟು ಸಾವು? ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು ಪತ್ತೆ? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ

ಬೆಂಗಳೂರು, (ಆ.2):  ಕರ್ನಾಟಕದಲ್ಲಿ ಇಂದು (ಭಾನುವಾರ) 5,532 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿಕೆಯಾಗಿದೆ.

ಇನ್ನು, 84 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 2,496 ಮಂದಿ ಸಾವನ್ನಪ್ಪಿದ್ದಾರೆ.

BSY ಪರ ಮಠಾಧೀಶರ ಬ್ಯಾಟಿಂಗ್, ತೆರೆ ಮೇಲೆ ಮತ್ತೆ ಮೇಘನಾ ಮಿಂಚಿಂಗ್? ಆ. 2ರ ಟಾಪ್ 10 ಸುದ್ದಿ

ಇದುವರಗೆ ರಾಜ್ಯದಲ್ಲಿ 57,725 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 74,590 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು 2105, ಬಳ್ಳಾರಿ 377, ಕಲಬುರಗಿ ಮತ್ತು ಮೈಸೂರು ತಲಾ 238, ರಾಯಚೂರು 212, ಉಡುಪಿ 182, ಧಾರವಾಡ 181, ದಾವಣಗೆರೆ 178, ಬೆಳಗಾವಿ 172, ದಕ್ಷಿಣ ಕನ್ನಡ 163, ಹಾವೇರಿ 146, ಹಾಸನ 142, ಬೀದರ್ 135, ಬಾಗಲಕೋಟೆ 131, ವಿಜಯಪುರ 113, ಶಿವಮೊಗ್ಗ 99, ಮಂಡ್ಯ 97, ಗದಗ 88, ಕೊಪ್ಪಳ 87, ರಾಮನಗರ 71, ಚಿಕ್ಕಬಳ್ಳಾಪುರ 55, ಕೋಲಾರ 51, ಚಿತ್ರದುರ್ಗ 46, ಚಿಕ್ಕಮಗಳೂರು 40, ಯಾದಗಿರಿ 39, ಬೆಂಗಳೂರು ಗ್ರಾಮಾಂತರ 38, ತುಮಕೂರು 35, ಚಾಮರಾಜನಗರ 31, ಉತ್ತರ ಕನ್ನಡ 26 ಮತ್ತು ಕೊಡಗು 16 ಕೇಸ್ ಪತ್ತೆಯಾಗಿವೆ.

Scroll to load tweet…