Asianet Suvarna News Asianet Suvarna News

ಇಂದು (ಬುಧವಾರ) ಒಂದೇ ದಿನ ಕರ್ನಾಟಕದಲ್ಲಿ 2 ಸಾವಿರ ಗಡಿದಾಟಿದ ಕೊರೋನಾ...!

ಕೊರೋನಾ ಆರ್ಭಟ ಕರ್ನಾಟಕದಲ್ಲಿ ನಿಲ್ಲುತ್ತಿಲ್ಲ. ಬದಲಿಗೆ   ದಿನದಿಂದ ದಿನಕ್ಕೆ ಮಾರಕ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾದ್ರೆ ಇಂದಿನ (ಜುಲೈ.08) ಅಂಕಿ- ಅಂಶ ಎಷ್ಟು..? ಎನ್ನುವುದನ್ನು ನೋಡಿದುವುದಾದರೆ.

54 deaths and 2,062 new COVID19 cases reported in Karnataka On July 8th
Author
Bengaluru, First Published Jul 8, 2020, 8:26 PM IST

ಬೆಂಗಳೂರು, (ಜುಲೈ.08): ಕರ್ನಾಟಕವನ್ನು ಕೊರೋನಾ ಮಾಹಾಮಾರಿ ಬಿಡದೇ ಕಾಡುತ್ತಿದೆ. ಇಂದು (ಬುಧವಾರ) ಒಂದೇ ದಿನ ಬರೋಬ್ಬರಿ 2,062 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ 1148 ಕೇಸ್‌ಗಳು ವರದಿಯಾಗಿವೆ.

ಇದೀಗ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 28,877ಕ್ಕೇರಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು 54 ಜನರು ಕೊರೋನಾಗೆ ಬಲಿಯಾಗಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿ 13 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 470.

ಕೊರೋನಾ ವೈರಸ್‌ಗೆ ತುತ್ತಾದ ಕರ್ನಾಟಕದ ಪ್ರಮುಖ ರಾಜಕಾರಣಿಗಳಿವರು....

ಬುಧವಾರ ಒಟ್ಟು778 ಜನರು ಗುಣಮುಖರಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 11,87ಕ್ಕೇರಿದೆ. ಸದ್ಯ16,527 ಸಕ್ರಿಯ ಇವೆ.

ಜಿಲ್ಲಾವಾರು ಮಾಹಿತಿ
54 deaths and 2,062 new COVID19 cases reported in Karnataka On July 8th

ಕೊರೋನಾದಿಂದ ಸಾವಿನ ಪ್ರಮಾಣ ರಾಜ್ಯದಲ್ಲಿ 1.3ರಷ್ಟಿದ್ದು, ಬೆಂಗಳೂರಿನಲ್ಲಿ 1.34ರಷ್ಟಿದೆ. ಇನ್ನು ಮಂಗಳವಾರ (ಜುಲೈ.7) ರಾಜ್ಯದಲ್ಲಿ ಒಟ್ಟು 1,498 ಪ್ರಕರಣಗಳು ದಾಖಲಾಗಿದ್ದು, 15 ಮಂದಿ ಸಾವನ್ನಪ್ಪಿದ್ದರು
 

Follow Us:
Download App:
  • android
  • ios