ಬೆಂಗಳೂರು, (ಆ.01): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದ್ದು, ಇಂದು (ಶನಿವಾರ) 5,172 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,29,287ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24ಗಂಟೆಗಳಲ್ಲಿ 98 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೀದಿ ಬದಿಯ ವ್ಯಾಪಾರಿಗಳಿಗೆ ಆ್ಯಂಟಿಜನ್ ಟೆಸ್ಟ್‌..!

 ರಾಜ್ಯದಲ್ಲಿ ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು, ದಿನವೊಂದರಲ್ಲಿ 3,860 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ 53,648 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಒಟ್ಟು 2,412 ಮಂದಿ ಸಾವನ್ನಪ್ಪಿದ್ದು, 73,219 ಸಕ್ರಿಯ ಪ್ರಕರಣಗಳಿವೆ. ಶನಿವಾರ ರಾಜ್ಯದಲ್ಲಿ ಒಟ್ಟು 34,760 ರ್ಯಾಪಿಡ್ ಆ್ಯಂಟಿಜನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ರ‍್ಯಾಪಿಡ್ ಆ್ಯಂಟಿಜನ್ ಸೋಂಕು ಪತ್ತೆ ಪರೀಕ್ಷೆಗಳ ಒಟ್ಟು ಸಂಖ್ಯೆ 13,85,552ಕ್ಕೇರಿದೆ. 

ಜಿಲ್ಲಾವಾರು ಅಂಕಿ-ಅಂಶ
ಬೆಂಗಳೂರು ನಗರ 1852, ಮೈಸೂರು 365, ಬಳ್ಳಾರಿ 269, ಕಲಬುರಗಿ ಮತ್ತು ಬೆಳಗಾವಿ ತಲಾ 219, ಧಾರವಾಡ 184, ಹಾಸನ 146, ದಕ್ಷಿಣ ಕನ್ನಡ 139, ಉಡುಪಿ 136, ಬಾಗಲಕೋಟೆ 134, ವಿಜಯಪುರ 129, ಶಿವಮೊಗ್ಗ 119, ರಾಯಚೂರು 109, ದಾವಣಗೆರೆ ಹಾಗೂ ಕೊಪ್ಪಳ 108, ತುಮಕೂರು ಮತ್ತು ಗದಗ  99, ಮಂಡ್ಯ  95, ಬೆಂಗಳೂರು ಗ್ರಾಮಾಂತರ 93, ಚಿಕ್ಕಬಳ್ಳಾಪುರ 72, ಚಿತ್ರದುರ್ಗ 60, ಚಿಕ್ಕಮಗಳೂರು 57, ಬೀದರ್ ಮತ್ತು ಹಾವೇರಿ 52, ಉತ್ತರ ಕನ್ನಡ ಮತ್ತು ರಾಮನಗರ 51, ಚಾಮರಾಜನಗರ 43, ಯಾದಗಿರಿ ಮತ್ತು ಕೋಲಾರ 39, ಕೊಡಗು 35 ಕೇಸ್‌ಗಳು ಪತ್ತೆಯಾಗಿವೆ.