Asianet Suvarna News Asianet Suvarna News

BBMP: ಅನಧಿಕೃತ ಫ್ಲೆಕ್ಸ್‌ ಕಂಡರೆ 50000 ದಂಡ; ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ಆಯುಕ್ತರ ಆದೇಶ

ರಾಜಧಾನಿ ಬೆಂಗಳೂರಿನಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಮತ್ತು ಧ್ವಜಗಳನ್ನು ತೆರವುಗೊಳಿಸಲು ವಿಫಲವಾದರೆ, ಸಂಬಂಧಪಟ್ಟವಲಯದ ಅಧಿಕಾರಿಯಿಂದ ತಲಾ .50 ಸಾವಿರ ವಸೂಲಿ ಮಾಡುವ ಆದೇಶವನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೊರಡಿಸಿದ್ದಾರೆ.

50000 fine for unauthorized flex  BBMP Chief Commissioner order at bengaluru rav
Author
First Published Aug 15, 2023, 5:57 AM IST

ಬೆಂಗಳೂರು (ಆ.15) :  ರಾಜಧಾನಿ ಬೆಂಗಳೂರಿನಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಮತ್ತು ಧ್ವಜಗಳನ್ನು ತೆರವುಗೊಳಿಸಲು ವಿಫಲವಾದರೆ, ಸಂಬಂಧಪಟ್ಟವಲಯದ ಅಧಿಕಾರಿಯಿಂದ ತಲಾ .50 ಸಾವಿರ ವಸೂಲಿ ಮಾಡುವ ಆದೇಶವನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೊರಡಿಸಿದ್ದಾರೆ.

ಬಿಬಿಎಂಪಿ(BBMP) ಹಾಗೂ ರಾಜ್ಯ ಸರ್ಕಾರ(Karnataka government)ಕ್ಕೆ ಹೈಕೋರ್ಟ್(Karnataka highcourt) ಛೀಮಾರಿ ಹಾಕಿ ಅನಧಿಕೃತ ಫ್ಲೆಕ್ಸ್‌ ಬ್ಯಾನರ್‌(Flex and banner)ಗಳನ್ನು ಮೂರು ವಾರದಲ್ಲಿ ತೆರವಿಗೆ ಸೂಚಿಸಿ ಆದೇಶಿಸಿದೆ. ತೆರವುಗೊಳಿಸುವಲ್ಲಿ ವಿಫಲರಾದ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ರನ್ನೇ ಹೊಣೆ ಮಾಡಿ ತಲಾ .50 ಸಾವಿರ ಠೇವಣಿಯನ್ನು ಅವರಿಂದ ವಸೂಲಿ ಮಾಡಿ ನ್ಯಾಯಾಲಯದಲ್ಲಿ ಇಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

BBMP: ಪಾಲಿಕೆ ಲ್ಯಾಬ್‌ಗೆ ಬೆಂಕಿ: ದೂರು ಕೊಟ್ಟಅಧಿಕಾರಿಗೇ ಪೊಲೀಸರಿಂದ ನೋಟಿಸ್‌!

ಅಕ್ರಮ ಫ್ಲೆಕ್ಸ್‌ಗಳು, ಬಂಟಿಂಗ್ಸ್ ಧ್ವಜಗಳು ಮತ್ತು ಬ್ಯಾನರ್‌ಗಳನ್ನು ತೆರವು ಮಾಡಿರುವ ಕುರಿತು ದಾಖಲೆಗಳ ಸಮೇತ ಆಗಸ್ಟ್‌ 16ರ ಒಳಗೆ ಕಡ್ಡಾಯವಾಗಿ ಸಲ್ಲಿಸಬೇಕು. ತಪ್ಪಿದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಎದುರಿಸಬೇಕಾಗುತ್ತದೆ. ಆದ್ದರಿಂದ ಎಲ್ಲ ವಲಯ ಆಯುಕ್ತರು ತಮ್ಮ ವಲಯ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು ತೆರವು ಮಾಡಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.

 

ಅಗ್ನಿದುರಂತವಾದ್ರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ!

Follow Us:
Download App:
  • android
  • ios