ಬೆಂಗಳೂರು(ಅ.04): ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಮುಂದುವರೆದಿದೆ. ಶನಿವಾರ 9,886 ಮಂದಿಗೆ ಸೋಂಕು ದೃಢಪಟ್ಟು, 100 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6.30 ಲಕ್ಷಕ್ಕೆ ಹಾಗೂ ಸಾವಿನ ಸಂಖ್ಯೆ 9,219ಕ್ಕೆ ಏರಿಕೆಯಾಗಿದೆ.

ಇದರ ನಡುವೆ ಸಮಾ​ಧಾ​ನದ ಸಂಗತಿ ಎಂದರೆ ಶನಿವಾರ 8,989 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 5 ಲಕ್ಷ ಗಡಿ ದಾಟಿದೆ. 6,30,516 ಮಂದಿ ಒಟ್ಟು ಸೋಂಕಿತರ ಪೈಕಿ 5,08,495 ಮಂದಿ ಗುಣಮುಖರಾಗುವ ಮೂಲಕ ರಾಜ್ಯದ ಒಟ್ಟು ಸೋಂಕಿತರಲ್ಲಿ ಶೇ.80.64 ಮಂದಿ ಚೇತರಿಕೆ ಕಂಡಂತಾಗಿದೆ. ಉಳಿದಂತೆ 1,12,783 (ಶೇ.17.99) ಮಂದಿ ಸಕ್ರಿಯ ಸೋಂಕಿತರಿದ್ದು ಶೇ.1.46 ರಷ್ಟು(9219) ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಶನಿವಾರ ಒಟ್ಟು 84,922 ಪರೀಕ್ಷೆ ನಡೆಸಿದ್ದು ಈ ಪೈಕಿ 9,886 ಮಂದಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ 100 ಮಂದಿ ಮೃತಪಟ್ಟಿದ್ದಾರೆ. ಉಳಿದ 1.12 ಲಕ್ಷ ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 841 ಮಂದಿ ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರಲ್ಲಿ 53 ಸಾವಿರಕ್ಕೇರಿದ ಕೊರೋನಾ ಸಕ್ರಿಯ ಪ್ರಕರಣ: ಆತಂಕದಲ್ಲಿ ಜನತೆ

ಬರೋಬ್ಬರಿ 100 ಸಾವು:

ಶನಿವಾರ ಒಟ್ಟು 100 ಮಂದಿ ಸಾವನ್ನಪ್ಪಿದ್ದು ಬೆಂಗಳೂರು ನಗರದಲ್ಲಿ 21, ಮೈಸೂರು 18, ದಕ್ಷಿಣ ಕನ್ನಡ 9, ತುಮಕೂರು, ಹಾಸನ ತಲಾ 6, ಧಾರವಾಡ 5, ಬಳ್ಳಾರಿ, ಉತ್ತರ ಕನ್ನಡ ತಲಾ 4, ಶಿವಮೊಗ್ಗ, ಉಡುಪಿ, ಬೆಳಗಾವಿ ತಲಾ 3, ಹಾವೇರಿ, ಕಲಬುರಗಿ, ಕೊಪ್ಪಳ, ಮಂಡ್ಯ, ಬೀದರ್‌ ತಲಾ 2, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಗದಗ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ತಲಾ ಒಬ್ಬರು ಸೇರಿ 100 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ 3,925 ಮಂದಿಗೆ ಸೋಂಕು:

ಶನಿವಾರ ಬೆಂಗಳೂರು ನಗರದಲ್ಲಿ 3,925 ಸೋಂಕು ದೃಢಪಟ್ಟಿದೆ. ಉಳಿದಂತೆ ಮೈಸೂರು 1,514, ಶಿವಮೊಗ್ಗ 337, ತುಮಕೂರು 302, ಬೆಂಗಳೂರು ಗ್ರಾಮಾಂತರ 283, ಬೆಳಗಾವಿ 258, ಬಳ್ಳಾರಿ 253, ಬಾಗಲಕೋಟೆ 88, ಬೀದರ್‌ 14, ಚಾಮರಾಜನಗರ 179, ಚಿಕ್ಕಬಳ್ಳಾಪುರ 234, ಚಿಕ್ಕಮಗಳೂರು 175, ಚಿತ್ರದುರ್ಗ 76, ದಕ್ಷಿಣ ಕನ್ನಡ 258, ದಾವಣಗೆರೆ 129, ಧಾರವಾಡ 98, ಗದಗ 32, ಹಾಸನ 460, ಹಾವೇರಿ 71, ಕಲಬುರಗಿ 107, ಕೊಡಗು 37, ಕೋಲಾರ 20, ಕೊಪ್ಪಳ 98, ಮಂಡ್ಯ 206, ರಾಯಚೂರು 199, ರಾಮನಗರ 58, ಉಡುಪಿ 158, ಉತ್ತರ ಕನ್ನಡ 92, ವಿಜಯಪುರ 97, ಯಾದಗಿರಿ ಜಿಲ್ಲೆಯಲ್ಲಿ 128 ಮಂದಿಗೆ ಸೋಂಕು ದೃಢಪಟ್ಟಿದೆ.