ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ: ಇಲ್ಲಿದೆ ಮೇ.09ರ ಅಂಕಿ-ಸಂಖ್ಯೆ
* ಕರ್ನಾಟಕದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ
* ಮೇ.09ರಂದು ರಾಜ್ಯದಲ್ಲಿ ಏರುತ್ತಿದೆ ಸೋಂಕಿನ ಸಂಖ್ಯೆ, ಮರಣ ಮೃದಂಗ
* ಇಲ್ಲಿದೆ ಭಾನುವಾರದ ಕೊರೋನಾ ಅಂಕಿ-ಸಂಖ್ಯೆ
ಬೆಂಗಳೂರು, (ಮೇ.09): ರಾಜ್ಯದಲ್ಲಿ ಇಂದು (ಭಾನುವಾರ) 47930 ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, 490 ಸೋಂಕಿತರು ಸಾವನ್ನಪ್ಪಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1934378ಕ್ಕೇರಿದರೆ, ಒಟ್ಟು ಸಾವಿನ ಸಂಖ್ಯೆ 18776ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಗುಡ್‌ನ್ಯೂಸ್: ಚಿತ್ರದುರ್ಗದಲ್ಲಿ ಒಮ್ಮೆಲೆ ಕುಸಿದ ಕೊರೋನಾ ಸೋಂಕಿತರ ಸಂಖ್ಯೆ
ಇನ್ನು ಭಾನುವಾರ ರಾಜ್ಯಾದ್ಯಂತ 31796 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 1351097 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.
ಬೆಂಗಳೂರಿನ ಅಂಕಿ-ಸಂಖ್ಯೆ
ಬೆಂಗಳೂರಿನಲ್ಲಿ ಕೊರೋನಾ ಮಾಹಾಸ್ಪೋಟವಾಗಿದ್ದು 20897 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 281 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸಿಲಿಕಾನ್ ಸಿಟಿಯೊಂದರಲ್ಲೇ ಇದುವರೆಗೆ ಒಟ್ಟು 950893 ಮಂದಿಗೆ ಕೊರೋನಾ ತಗುಲಿದ್ದು, ಈವರೆಗೆ ಒಟ್ಟು 8057 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.