ಬೆಂಗಳೂರು, (ಆ.03): ಕರ್ನಾಟಕದ ಇಂದಿನ (ಸೋಮವಾರ) ಕೊರೋನಾ ಅಂಕಿ ಸಂಖ್ಯೆ ನೋಡಿದ್ರೆ, ಹೊಸ ಆಶಾ ಭಾವನೆ ಮೂಡಿಸಿದೆ.

ಹೌದು...ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಸೋಮವಾರದ ಕೊರೋನಾ ಹೆಲ್ತ್‌ ಬುಲೆಟಿ‌ನ್ ಪ್ರಕಾರ ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ಸೊಂಕಿನ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ.

ಇಂದು (ಸೋಮವಾರ) ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆದ್ರೆ, ಖುಷಿಯ ವಿಚಾರ ಅಂದ್ರೆ ಸೋಮವಾರವೇ 4776 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  

ಗುಡ್‌ ನ್ಯೂಸ್: ರಾಜ್ಯದಲ್ಲಿ ಕೊರೋನಾ ಸೋಂಕಿತರ ಚೇತರಿಕೆಯ ಪ್ರಮಾಣ ಹೆಚ್ಚಳ

ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಚೇತರಿಕೆಯ ಪ್ರಮಾಣ ಹೆಚ್ಚಳವಾದಂತಾಗಿದೆ. ಇನ್ನೊಂದು ನೆಮ್ಮ ವಿಚಾರ ಏನಂದ್ರೆ ಕಳೆದೊಂದು ವಾರದಿಂದ ಪ್ರತಿದಿನ ಕೊರೋನಾ ಸೊಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟುತ್ತಿತ್ತು. ಆದ್ರೆ, ಇಂದು  4752 ಕೇಸ್‌ಗಳು ಪತ್ತೆಯಾಗಿವೆ.

ಮೂಲಕ ಒಟ್ಟ ಸೋಂಕಿತರ ಸಂಖ್ಯೆ 1,39,571ಕ್ಕೇರಿದ್ದು, ಈ ಪೈಕಿ ಒಟ್ಟು 62,500 ಸೊಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಸದ್ಯ 74,469 ಸಕ್ರಿಯ ಕೇಸ್‌ಗಳಿವೆ.

ಇನ್ನು ಸಫಮವಾರ 98 ಸೋಂಕಿತರು ಮೃತಪಟ್ಟಿದ್ದು, ಒಟ್ಟು 2594 ಸಾವಿನ ಪ್ರಕರಣಗಳು ದಾಖಲಾಗಿವೆ. 629 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಜಿಲ್ಲಾವಾರು ಅಂಕಿ-ಅಂಶ
 ಬೆಂಗಳೂರು ನಗರ 1497, ಮೈಸೂರು 372, ಬಳ್ಳಾರಿ 305, ಬಾಗಲಕೋಟೆ 209, ಧಾರವಾಡ 191, ಕಲಬುರಗಿ 170, ಕೊಪ್ಪಳ 157, ಶಿವಮೊಗ್ಗ 155, ದಕ್ಷಿಣ ಕನ್ನಡ 153, ಮಂಡ್ಯ 152, ಹಾಸನ 131, ಉಡುಪಿ 126, ತುಮಕೂರು 122, ರಾಯಚೂರು 115, ಗದಗ 100, ಹಾವೇರಿ 99, ವಿಜಯಪುರ 92, ಯಾದಗಿರಿ 86, ರಾಮನಗರ 68, ಬೆಳಗಾವಿ 60, ಚಿಕ್ಕಬಳ್ಳಾಪುರ 58, ಚಾಮರಾಜನಗರ 52, ಬೀದರ್ 50, ಚಿಕ್ಕಮಗಳೂರು 46, ದಾವಣಗೆರೆ 41, ಕೋಲಾರ 40, ಕೊಡಗು 39, ಚಿತ್ರದುರ್ಗ 33, ಉತ್ತರ ಕನ್ನಡ 31 ಮತ್ತು ಬೆಂಗಳೂರು ಗ್ರಾಮಾಂತರ 02.