ಮತ್ತೆ 464 ಮಂದಿಗೆ ಕೊರೋನಾ ಸೋಂಕು

ಮತ್ತೆ 464 ಮಂದಿಗೆ ಕೊರೋನಾ ಸೋಂಕು | ಒಟ್ಟು ಸೋಂಕಿತರ ಸಂಖ್ಯೆ 3,89,657 ಏರಿಕೆ

 

464 people tested positive in Bengaluru on January 3rd dpl

ಬೆಂಗಳೂರು(ಜ.04): ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 464 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, 302 ಮಂದಿ ಗುಣಮುಖರಾಗಿದ್ದಾರೆ. ನಾಲ್ಕು ಮಂದಿ ಮೃತಪಟ್ಟವರದಿಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,89,657 ಏರಿಕೆಯಾಗಿದ್ದು, ಗುಣಮುಖರ ಸಂಖ್ಯೆ 3,78,208 ತಲುಪಿದೆ.

ಇನ್ನು 7,122 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 81 ಮಂದಿ ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹಂದಿ ಮಾಂಸದ ಕೊಬ್ಬಿದ್ದರೂ ಲಸಿಕೆ ಸ್ವೀಕಾರಾರ್ಹ: ಮುಸ್ಲಿಂ ಧರ್ಮಗುರುಗಳು!

ಭಾನುವಾರ ನಾಲ್ಕು ಮಂದಿ ಮೃತಪಟ್ಟವರದಿಯಾಗಿದೆ. ಮೃತಪಟ್ಟನಾಲ್ವರ ಪೈಕಿ ಮೂವರು ಪುರುಷ ಸೋಂಕಿತರಾಗಿದ್ದು, ಮತ್ತೊಬ್ಬರು ಮಹಿಳೆ ಸೋಂಕಿತೆಯಾಗಿದ್ದಾರೆ. ಒಟ್ಟು ಮೃತರ ಸಂಖ್ಯೆ 4,326 ಏರಿಕೆಯಾಗಿದೆ.

ಲಸಿಕೆ ಹೆಸರಲ್ಲಿ ರಾಜಕೀಯ ಕೆಲವರಿಗೆ ಅಂಟಿರುವ ಜಾಡ್ಯ

 ಕೋವಿಡ್‌-19 ಲಸಿಕೆ ನೀಡುವ ವಿಚಾರದಲ್ಲಿ ಯಾರು ರಾಜಕಾರಣ ಮಾಡಬಾರದು. ಪ್ರತಿಯೊಂದರಲ್ಲೂ ರಾಜಕೀಯ ಹುಡುಕುವುದು ಕೆಲವರಿಗೆ ಅಂಟಿರುವ ಜಾಡ್ಯ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದರಲ್ಲಿಯೂ ‘ರಾಜಕೀಯ ಹುಡುಕುವುದು ಕೆಲವರಿಗೆ ಅಂಟಿರುವ ಜಾಡ್ಯ. ಅದಕ್ಕೇನು ಮಾಡಲು ಸಾಧ್ಯ? ಸಹಕಾರ ಕೊಡಿ ಎಂದಷ್ಟೇ ಸರ್ಕಾರ ಮನವಿ ಮಾಡಬಹುದು. ಈ ವಿಷಯದಲ್ಲಿ ಪ್ರತಿಪಕ್ಷಗಳು ಸರ್ಕಾರಕ್ಕೆ ರಚನಾತ್ಮಕ, ಮೌಲ್ಯಯುತ ಸಲಹೆಗಳನ್ನು ನೀಡಬೇಕು’ ಎಂದು ಕೋರಿದ್ದಾರೆ. ‘ದೇಶದಲ್ಲಿ ಕೋವಿಡ್‌ ಲಸಿಕೆ ನೀಡಲು ಭಾರತ್‌ ಬಯೋಟೆಕ್‌ಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸ್ವಾಗತಾರ್ಹ. ಮೊದಲ ಹಂತದಲ್ಲಿ ಕೋವಿಡ್‌ ವಾರಿಯರ್ಸ್‌ಗೆ ಹಾಗೂ ಈ ವೈರಸ್‌ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವವರಿಗೆ ಲಸಿಕೆ ನೀಡಲಾಗುವುದು’ ಎಂದಿದ್ದಾರೆ.

Latest Videos
Follow Us:
Download App:
  • android
  • ios