Asianet Suvarna News

ರಾಜ್ಯದಲ್ಲಿ ಮತ್ತಷ್ಟು ತಗ್ಗಿದ ಕೊರೋನಾ, ಶೇ 2.58ಕ್ಕೆ ಇಳಿದ ಪಾಸಿಟಿವಿಟಿ ದರ

* ರಾಜ್ಯದಲ್ಲಿ ಮತ್ತಷ್ಟು ತಗ್ಗಿದ ಕೊರೋನಾ
* ಶೇ 2.58ಕ್ಕೆ ಇಳಿದ ಪಾಸಿಟಿವಿಟಿ ದರ

4517 New Coronavirus Cases and 120 deaths In Karnataka On June 20 rbj
Author
Bengaluru, First Published Jun 20, 2021, 9:42 PM IST
  • Facebook
  • Twitter
  • Whatsapp

ಬೆಂಗಳೂರು, (ಜೂನ್.20): ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆಯಾಗಿದೆ. ಇಂದು (ಭಾನುವಾರ) 4,517 ಜನರಿಗೆ ಸೋಂಕು ದೃಢಪಟ್ಟಿದ್ದು, 120 ಜನರು ಸಾವನ್ನಪ್ಪಿದ್ದಾರೆ. 

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2806453ಕ್ಕೆ ಏರಿಕೆಯಾಗಿದ್ರೆ, ಒಟ್ಟು ಸಾವಿನ ಸಂಖ್ಯೆ 33883ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

1.71 ಲಕ್ಷ ಕೋವಿಡ್‌ ಟೆಸ್ಟ್‌: ಒಂದೂವರೆ ತಿಂಗಳಲ್ಲೇ ಹೆಚ್ಚು

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ  ಒಂದೇ ದಿನ 8,456 ಜನರು ಕೊವಿಡ್​ನಿಂದ ಗುಣಮುಖರಾಗಿದ್ದು, ಈ ವರೆಗೆ 26,45,735 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆದಂತಾಗಿದೆ. ಸದ್ಯ 1,26,813 ಸೋಂಕಿತರು ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಸಿಟಿವಿಟಿ ದರ ಶೇ 2.58ಕ್ಕೆ ಇಳಿದಿದೆ.

ಬೆಂಗಳೂರಿನ ಅಂಕಿ-ಸಂಖ್ಯೆ
 ಬೆಂಗಳೂರಿನಲ್ಲಿ ಭಾನುವಾರ 933 ಜನರಿಗೆ ಕೊರೋನಾ ತಗುಲಿದೆ, ನಗರದಲ್ಲಿ ಇಂದು 12 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 1205259 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ ಒಟ್ಟು 15445 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.
 

Follow Us:
Download App:
  • android
  • ios