ಕರ್ನಾಟಕದಲ್ಲಿ ಕೊರೋನಾ ಕೇಸ್ ಹಾಗೂ ಸಾವಿನ ಸಂಖ್ಯೆಯಲ್ಲೂ ಗಣನೀಯವಾಗಿ ಏರುತ್ತಲೇ ಇದೆ. 

ಬೆಂಗಳೂರು, (ಮೇ.03): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಮುಂದುವರೆದಿದ್ದು ಇಂದು (ಸೋಮವಾರ) ದಾಖಲೆಯ 44,438 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 16,46,303ಕ್ಕೆ ಏರಿಕೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 239 ಮಂದಿ ಸೋಂಕಿಗೆ ಬಲಿಯಾಗಿದ್ದು ಇದರೊಂದಿಗೆ ಸಾವಿನ ಸಂಖ್ಯೆ 16,250ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಸೋಮವಾರ 22,112 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 8,19,404ಕ್ಕೆ ಏರಿಕೆಯಾಗಿದ್ರೆ, ನಗರದಲ್ಲಿ ಸೋಂಕಿಗೆ 115 ಮಂದಿ ಬಲಿಯಾಗಿದ್ದಾರೆ.

ಇನ್ನು ರಾಜ್ಯದಲ್ಲಿ ಇಂದು 20,901 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 11,85,299ಕ್ಕೆ ಏರಿಕೆಯಾಗಿದ್ದು, ಸದ್ಯ 4,44,734 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಕೇಸ್‌ ಸಂಖ್ಯೆ
ಬಾಗಲಕೋಟೆ 569, ಬಳ್ಳಾರಿ 990, ಬೆಳಗಾವಿ 559, ಬೆಂಗಳೂರು ಗ್ರಾಮಾಂತರ 815, ಬೆಂಗಳೂರು ನಗರ 22,112, ಬೀದರ್ 396, ಚಾಮರಾಜನಗರ 724, ಚಿಕ್ಕಬಳ್ಳಾಪುರ 886, ಚಿಕ್ಕಮಗಳೂರು 206, ಚಿತ್ರದುರ್ಗ 151, ದಕ್ಷಿಣಕನ್ನಡ 793, ದಾವಣಗೆರೆ 104, ಧಾರವಾಡ 1021, ಗದಗ 191, ಹಾಸನ 1673, ಹಾವೇರಿ 330, ಕಲಬುರ್ಗಿ 1083, ಕೊಡಗು 628, ಕೋಲಾರ 656, ಕೊಪ್ಪಳ 617, ಮಂಡ್ಯ 1367, ಮೈಸೂರು 2685, ರಾಯಚೂರು 529, ರಾಮನಗರ 492, ಶಿವಮೊಗ್ಗ 584, ತುಮಕೂರು 2361, ಉಡುಪಿ 529, ಉತ್ತರಕನ್ನಡ 776, ವಿಜಯಪುರ 274, ಯಾದಗಿರಿ 337 ಜನರಿಗೆ ಸೋಂಕು ತಗುಲಿರುವ ವರದಿ ಬಂದಿದೆ.