ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಜಿಲ್ಲೆಗಳಲ್ಲೂ ಕೂಡ ಈ ಕೊರೋನಾ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿದೆ.

ಬೆಂಗಳೂರು, (ಮೇ.01): ಕರ್ನಾಟಕದಲ್ಲಿ ಎರಡನೇ ಅಲೆ ತೀವ್ರಗೊಳ್ಳುತ್ತಿದ್ದು, ಸತತ ಎರಡನೇ ದಿನವೂ ಕೋವಿಡ್ ಪ್ರಕರಣಗಳ ಸಂಖ್ಯೆ 40 ಸಾವಿರ ಗಡಿ ದಾಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು...ಇಂದು (ಶನಿವಾರ) ರಾಜ್ಯದಲ್ಲಿ ಬರೋಬ್ಬರಿ 40990 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 405068ಕ್ಕೆ ಏರಿಕೆಯಾಗಿದೆ.

ಬೆಡ್, ಆಕ್ಸಿಜನ್‌ನಿಂದ ಅಲ್ಲ, ​ಫೋನ್‌ನಿಂದ ಸೋಂಕಿತರು ಸಾಯುತ್ತಿದ್ದಾರೆ ಎಂದ ಬಿಜೆಪಿ ಶಾಸಕ

 ಕಳೆದ 24 ಗಂಟೆಗಳಲ್ಲಿ 271 ಜನರು ಕೋವಿಡ್ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಮೃತ ಪಟ್ಟವರ ಸಂಖ್ಯೆ 15794ಕ್ಕೆ ತಲುಪಿದೆ. 

ಇನ್ನು ಶನಿವಾರ ಒಂದೇ ದಿನ 18341 ಸೋಂಕಿತರು ಸೇರಿದಂತೆ ಇದುವರೆಗೆ 11,43,250 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಪಾಸಿಟಿವ್ ಕೇಸ್‌ಗಳ ಸಂಖ್ಯೆ:
ಬಾಗಲಕೋಟೆ-319, ಬಳ್ಲಾರಿ-1163, ಬೆಳಗಾವಿ-532, ಬೆಂಗಳೂರು ಗ್ರಾಮಾಂತರ-940, ಬೆಂಗಳೂರು ನಗರ-19353, ಬೀದರ್-360, ಚಾಮರಾಜನಗರ-548, ಚಿಕ್ಕಬಳ್ಳಾಪುರ-820, ಚಿಕ್ಕಮಗಳೂರು-500, ಚಿತ್ರದುರ್ಗ-103, ದಕ್ಷಿಣ ಕನ್ನಡ-933, ದಾವಣಗೆರೆ-386, ಧಾರವಾಡ-540, ಗದಗ-205, ಹಾಸನ-790, ಹಾವೇರಿ-168, ಕಲಬುರಗಿ-1407, ಕೊಡಗು-590, ಕೋಲಾರ-440, ಕೊಪ್ಪಳ-1019, ಮಂಡ್ಯ-1235, ಮೈಸೂರು-2529, ರಾಯಚೂರು-601, ರಾಮನಗರ-577, ಶಿವಮೊಗ್ಗ-661, ತುಮಕೂರು-2308, ಉಡುಪಿ-670, ಉತ್ತರ ಕನ್ನಡ-687, ವಿಜಯಪುರ-340, ಯಾದಗಿರಿ-266.