ಒಟ್ಟು 4.25 ಕೋಟಿ ರು. ಆದಾಯ ಬಂದಿದೆ. ಅದರಲ್ಲಿ ವಿರಾಜಪೇಟೆ ಮಾರ್ಗದಿಂದ ಅತಿಹೆಚ್ಚು 1.32 ಕೋಟಿ ರು., ಮಡಿಕೇರಿ ಮಾರ್ಗದಿಂದ 1.26 ಕೋಟಿ ರು., ದಾವಣಗೆರೆ ಮಾರ್ಗದಿಂದ 96.88 ಲಕ್ಷ ರು. ಹಾಗೂ ಚಿಕ್ಕಮಗಳೂರು ಮಾರ್ಗದಿಂದ 70 ಲಕ್ಷ ರು. ಆದಾಯ ಬಂದಿದೆ.

ಬೆಂಗಳೂರು(ಜೂ.24):  ಪರಿಸರ ಸಂರಕ್ಷಣೆ, ಡೀಸೆಲ್‌ ಬಳಕೆ ತಗ್ಗಿಸುವ ಸಲುವಾಗಿ ಕೆಎಸ್‌ಆರ್‌ಟಿಸಿ ಆರಂಭಿಸಿದ ಎಲೆಕ್ಟ್ರಿಕ್‌ ಬಸ್‌ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ತಿಂಗಳಲ್ಲಿಯೇ ಕೆಎಸ್ಸಾರ್ಟಿಸಿಗೆ ನಾಲ್ಕು ಮಾರ್ಗಗಳಿಂದ 4.25 ಕೋಟಿ ರು. ಆದಾಯ ಬಂದಿದೆ. 

ಕೇಂದ್ರ ಸರ್ಕಾರದ ಫೇಮ್‌ ಯೋಜನೆ ಅಡಿಯಲ್ಲಿ ಕೆಎಸ್‌ಆರ್‌ಟಿಸಿಗೆ ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲಾಗಿದೆ. ಕಳೆದ ಮಾರ್ಚ್‌ 24ರಿಂದ ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ಆರಂಭಿಸಲಾಗಿದೆ. ಸದ್ಯ ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದಿಂದ ದಾವಣಗೆರೆ, ವಿರಾಜಪೇಟೆ, ಮಡಿಕೇರಿ ಹಾಗೂ ಚಿಕ್ಕಮಗಳೂರಿಗೆ ಬಸ್‌ ಸೇವೆ ನೀಡಲಾಗುತ್ತಿದೆ. ಕಳೆದ ಮೂರು ತಿಂಗಳಿನಿಂದ ಈ ನಾಲ್ಕು ಮಾರ್ಗಗಳಲ್ಲಿ 95,174 ಪ್ರಯಾಣಿಕರು ಸಂಚರಿಸಿದ್ದಾರೆ. 

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 6 ಎಲೆಕ್ಟ್ರಿಕ್ ಬಸ್ ಆರಂಭ

ಒಟ್ಟು 4.25 ಕೋಟಿ ರು. ಆದಾಯ ಬಂದಿದೆ. ಅದರಲ್ಲಿ ವಿರಾಜಪೇಟೆ ಮಾರ್ಗದಿಂದ ಅತಿಹೆಚ್ಚು 1.32 ಕೋಟಿ ರು., ಮಡಿಕೇರಿ ಮಾರ್ಗದಿಂದ 1.26 ಕೋಟಿ ರು., ದಾವಣಗೆರೆ ಮಾರ್ಗದಿಂದ 96.88 ಲಕ್ಷ ರು. ಹಾಗೂ ಚಿಕ್ಕಮಗಳೂರು ಮಾರ್ಗದಿಂದ 70 ಲಕ್ಷ ರು. ಆದಾಯ ಬಂದಿದೆ.

ಎಲೆಕ್ಟ್ರಿಕ್‌ ಬಸ್‌ಗಳು ಈವರೆಗೆ 6 ಲಕ್ಷ ಕಿಮೀ ಸಂಚರಿಸಿದ್ದು, ಪ್ರತಿ ಕಿಮೀಗೆ ಕೆಎಸ್ಸಾರ್ಟಿಸಿ 71 ರು. ಆದಾಯ ತಂದುಕೊಟ್ಟಿವೆ. ಅದರ ಜತೆಗೆ ಡೀಸೆಲ್‌ಗೆ ಮಾಡಲಾಗುತ್ತಿದ್ದ ವೆಚ್ಚವು ಉಳಿತಾಯವಾಗಿದೆ.