Asianet Suvarna News Asianet Suvarna News

Mekedatu Padayatra: ಕಾಂಗ್ರೆಸ್ ನಾಯಕರ ವಿರುದ್ಧ 3ನೇ FIR ದಾಖಲು

*  ಡಿ.ಕೆ.ಶಿವಕುಮಾರ್‌ ಸೇರಿದಂತೆ 64 ಜನರ ವಿರುದ್ಧ ಎಫ್​ಐಆರ್
*  ಈಗಲ್ ಟನ್, ವಂಡರ್ ಲಾದಲ್ಲಿ ಕೈ ನಾಯಕರ ವಾಸ್ತವ್ಯ
*  ಚಿತ್ರ​ನ​ಟ​ರಾದ ದುನಿಯಾ ವಿಜಯ್‌, ಸಾಧು​ಕೋ​ಕಿ​ಲವೂ FIR 

3rd FIR Filed Against Congress Leaders Due to Violation of Covid Rules grg
Author
Bengaluru, First Published Jan 12, 2022, 12:51 PM IST

ರಾಮನಗರ(ಜ.12):  ಮೇಕೆದಾಟು ಯೋಜನೆ(Mekedatu Project) ಸಂಬಂಧ ಕಾಂಗ್ರೆಸ್(Congress) ನಾಯಕರು ನಡೆಸುತ್ತಿರುವ ಪಾದಯಾತ್ರೆಯ(Padayatra) ವಿರುದ್ಧ 3ನೇ ಎಫ್ಐಆರ್(FIR) ದಾಖಲಾಗಿದೆ. ಜಿಲ್ಲೆಯ ಕನಕಪುರ ಪೊಲೀಸ್ ಠಾಣೆಯಲ್ಲಿ 3ನೇ ಎಫ್​ಐಆರ್ ದಾಖಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ 64 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ.  ಎ1 ಡಿ.ಕೆ.ಶಿವಕುಮಾರ್(DK Shivakumar), ಎ2 ಡಿ.ಕೆ.ಸುರೇಶ್(DK Suresh), ಎ3 ಸಿದ್ದರಾಮಯ್ಯ(Siddaramaiah), ಎ4 S.ರವಿ, ಎ5 ಧ್ರುವನಾರಾಯಣ, ಎ6 ಪ್ರಿಯಾಂಕ್ ಖರ್ಗೆ, ಎ7 ಈಶ್ವರ ಖಂಡ್ರೆ, ಎ8 ತನ್ವೀರ್ ಸೇಠ್, ಎ9 ಅನಿಲ್ ಚಿಕ್ಕಮಾಧು ಸೇರಿದಂತೆ 64 ಜನರ ವಿರುದ್ಧ ಕನಕಪುರ(Kanakapura) ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಈಗಲ್ ಟನ್, ವಂಡರ್ ಲಾದಲ್ಲಿ ಕೈ ನಾಯಕರ ವಾಸ್ತವ್ಯ

ನಾಲ್ಕನೆ ದಿನದ ಪಾದಯಾತ್ರೆ ಬುಧವಾರ ರಾತ್ರಿ ರಾಮನಗರ(Ramanagara) ಪ್ರವೇಶಿಸಲಿದೆ. ಹೀಗಾಗಿ, ಪ್ರಮುಖ ನಾಯಕರ ವಾಸ್ತವ್ಯಕ್ಕಾಗಿ ನಗರದ ಈಗಲ್ ಟನ್ ರೆಸಾರ್ಟ್‌(Eagleton Resort), ವಂಡರ್ ಲಾಗಳಲ್ಲಿ(Wonderla)‌ ರೂಂ ಬುಕ್ ಮಾಡಲಾಗಿದೆ. ಬಿಡದಿಯಲ್ಲಿನ ಡಿ.ಕೆ.ಶಿವಕುಮಾರ್‌ ಅವರು ಒಡೆತನದಲ್ಲಿರುವ ಐಕಾನ್ ಕಾಲೇಜು, ವಿಧಾನ ಪರಿಷತ್ ಸದಸ್ಯ ಲಿಂಗಪ್ಪ ಅವರಿಗೆ ಸೇರಿದ ಜ್ಞಾನ ವಿಕಾಸ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಹ ಎರಡನೇ ಹಂತದ ನಾಯಕರಿಗಾಗಿ ಹಾಸಿಗೆಗಳನ್ನು ಸಿದ್ದಪಡಿಸಲಾಗಿದೆ. ಇನ್ನು ರಾಮನಗರದ ಲಾಡ್ಜ್‌ಗಳೆಲ್ಲವೂ ಬಹುತೇಕ ಬುಕ್ ಆಗಿವೆ ಎಂದು ತಿಳಿದು ಬಂದಿದೆ. 

Mekedatu Padayatre: ಮೇಕೆದಾಟು ಯೋಜನೆಗೆ ಪಟ್ಟು ಹಿಡಿದಿದ್ಯಾಕೆ ಡಿಕೆಶಿ.?

ಕಾಂಗ್ರೆಸ್‌ ನಾಯಕರು ಸೇರಿ 31 ಜನರ ಮೇಲೆ ಎಫ್‌ಐಆರ್‌

ಕೋವಿಡ್‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರ(Govenment of Karnataka) ವೀಕೆಂಡ್‌ ಕರ್ಫ್ಯೂ(Weekend Curfew) ಜಾರಿಗೊಳಿಸಿ, ಎಲ್ಲಾ ರೀತಿಯ ರಾರ‍ಯಲಿಗಳನ್ನು ನಿಷೇಧಿಸಿದ ಮೇಲೂ ಕ್ಯಾರೇ ಎನ್ನದೆ ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್‌(Congress) ಮುಖಂಡರ ಮೇಲೆ ಇದೀಗ ಆಡಳಿತ ಯಂತ್ರ ಕಾನೂನು ಸಮರಕ್ಕೆ ಮುಂದಾಗಿದೆ. 
ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಭೆ, ಪಾದ​ಯಾತ್ರೆ ನಡೆ​ಸಿದ ಆರೋಪದ ಹಿನ್ನೆಲೆಯಲ್ಲಿ ರಾ​ಜ್ಯ​ಸಭಾ ವಿರೋಧ ಪಕ್ಷದ ನಾಯಕ ಮಲ್ಲಿ​ಕಾ​ರ್ಜುನ ಖರ್ಗೆ(Mallikarjun Kharge), ವಿರೋಧ ಪಕ್ಷದ ನಾಯಕ ಸಿದ್ದ​ರಾ​ಮಯ್ಯ, ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌, ಚಿತ್ರ​ನ​ಟ​ರಾದ ದುನಿಯಾ ವಿಜಯ್‌, ಸಾಧು​ಕೋ​ಕಿ​ಲ ಸೇರಿ​ದಂತೆ 31 ಜನರ ವಿರುದ್ಧ ಸಾತ​ನೂರು ಪೊಲೀಸ್‌ ಠಾಣೆ​ಯಲ್ಲಿ ಎಫ್‌ಐಆರ್‌ ಆ​ಗಿತ್ತು. 

ಕನ​ಕ​ಪುರ ತಹ​ಸೀ​ಲ್ದಾರ್‌ ವಿಶ್ವ​ನಾಥ್‌ ನೀಡಿದ ದೂರಿನ ಅನ್ವಯ ಕನ​ಕ​ಪುರ ತಾಲೂ​ಕಿನ ಸಾತ​ನೂರು ಠಾಣೆ ಪೊಲೀ​ಸರು ಕರ್ನಾ​ಟಕ ಸಾಂಕ್ರಾಮಿಕ ರೋಗ​ಗಳ ಅಧಿ​ನಿ​ಯಮ 2020ರಡಿ​ಯಲ್ಲಿ 30 ಮಂದಿ ಕಾಂಗ್ರೆಸ್‌ ನಾಯ​ಕರ ವಿರುದ್ಧ ಐಪಿಸಿ ಸೆಕ್ಷನ್‌ 141, 143, 290, 336 ಮತ್ತು 149ರಡಿ ಮತ್ತು ಕರ್ನಾ​ಟಕ ಸಾಂಕ್ರ​ಮಿಕ ರೋಗ​ಗಳ ಅಧಿ​ನಿ​ಯಮ 2020ರಡಿ​ಯಲ್ಲಿ ಎ​ಫ್‌​ಐ​ಆ​ರ್‌ (ಸಂಖ್ಯೆ: 01/2022) ದಾಖ​ಲಿ​ಸಿ​ಕೊಂಡಿ​ದ್ದರು.

FIR ದಾಖಲಿಸಿದ್ದಕ್ಕೆ ಸಿದ್ದರಾಮಯ್ಯ ಆಕ್ರೋಶ, ಸರ್ಕಾರಕ್ಕೊಂದು ಸವಾಲು

ಪಾದಯಾತ್ರೆ ವೇಳೆ ಶಾಲಾ ಮಕ್ಕಳ ಜತೆ ಬೆರೆತ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್ ಬುಕ್ 

ಮೇಕೆದಾಟು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಬೆಂಗಳೂರಿಗೆ ಮಾದಯಾತ್ರೆ ಮಾಡುತ್ತಿದೆ. ಪಾದಯಾತ್ರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶಾಲೆಗೆ ಭೇಟಿ ನೀಡಿದ್ದು, ಇದೀಗ ಅವರಿಗೆ ಅದು ಮುಳುವಾಗಿದೆ.

ಹೌದು... ಪಾದಯಾತ್ರೆ ವೇಳೆ ಶಾಲೆಗೆ​ ಭೇಟಿ ನೀಡಿದ್ದಕ್ಕೆ ಡಿ.ಕೆ.ಶಿವಕುಮಾರ್ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ(National Commission for Protection of Child Rights) ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು, ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಅಧ್ಯಕ್ಷ ಡಿಜಿ ಪ್ರವೀಣ್ ಸೂದ್​ಗೆ ಪತ್ರ ಬರೆದಿದೆ.

ಡಿಜಿ, ಐಜಿಪಿ ಪ್ರವೀಣ್ ಸೂದ್(Praveen Sood) ಅವರಿಗೆ ಆಯೋಗ ಬರೆದ ಪತ್ರ ಏಷ್ಯಾನೆಟ್​​ ಸುವರ್ಣನ್ಯೂಸ್​ಗೆ ಲಭ್ಯವಾಗಿದ್ದು, ಡಿಕೆ ಶಿವಕುಮಾರ್ ಕೋವಿಡ್ ನಿಯಮ ಪಾಲಿಸದೇ ಮಕ್ಕಳ ಜತೆ ಬೆರೆತಿದ್ದಾರೆ. ಶಾಲಾ ಮಕ್ಕಳ ಜತೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮಾಸ್ಕ್​ ಧರಿಸಿದೇ ಶಾಲಾಮಕ್ಕಳ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಡಿಜಿ ಪ್ರವೀಣ್ ಸೂದ್​ಗೆ ಪತ್ರದಲ್ಲಿ ಹೇಳಿದೆ.
 

Follow Us:
Download App:
  • android
  • ios