ಕರ್ನಾಟಕದಲ್ಲಿ ಕೊರೋನಾ ಮಹಾಸ್ಫೋಟ: ಕರುನಾಡನ್ನು ಬೆಚ್ಚಿಬೀಳಿಸಿದ ಏ.28ರ ಅಂಕಿ-ಸಂಖ್ಯೆ
ರಾಜ್ಯದಲ್ಲಿ ಕೊರೋನಾ ಮೊದಲೇ ಅಲೆಗಿಂತ ಎರಡನೇ ಅಲೆ ಅಬ್ಬರ ಜೋರಾಗಿದ್ದು, ಊಹೆಗೂ ಮೀರಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ.
ಬೆಂಗಳೂರು, (ಏ.28): ರಾಜ್ಯದಲ್ಲಿ ಇಂದು ಒಂದೇ ದಿನ 39,047 ಜನರಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 229 ಮಂದಿ ಸೋಂಕಿತರು ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,39,822 ಕ್ಕೆಏರಿಕೆಯಾಗಿದ್ರೆ, ಇದುವರೆಗೆ 15,036 ಸೋಂಕಿತರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜನರಿಗೆ ಅನುಕೂಲ ಕಲ್ಪಿಸಲು ಕೋವಿಶೀಲ್ಡ್ ಲಸಿಕೆ ದರ ಇಳಿಸಿದ ಸೀರಂ ಸಂಸ್ಥೆ!
ಕಳೆದ 24 ಗಂಟೆಗಳಲ್ಲಿ 11,833 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೆ 10,95,883 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇದರೊಂಇದಗೆ ಸದ್ಯ ರಾಜ್ಯದಲ್ಲಿ 3,28,884 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 2192 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 22,596 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಅಲ್ಲದೇ 137 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 2,24,152ಕ್ಕೆ ಏರಿಕೆಯಾಗಿದೆ.