ಸೆಪ್ಟೆಂಬರ್‌ವರೆಗೆ 101 ಟಿಎಂಸಿ ನೀರು ಹರಿಸಬೇಕಿತ್ತು, ಈಗಾಗಲೇ 416 ಟಿಎಂಸಿ ಹೋಗಿದೆ: ಸಚಿವ ಗೋವಿಂದ ಕಾರಜೋಳ

ವಿಧಾನ ಪರಿಷತ್‌(ಸೆ.16): ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನಂತೆ ತಮಿಳುನಾಡಿಗೆ ರಾಜ್ಯದಿಂದ ಜೂನ್‌ನಿಂದ ಸೆಪ್ಟೆಂಬರ್‌ 12ರವರೆಗೆ 101.08 ಟಿಎಂಸಿ ನೀರು ಹರಿಸಬೇಕಿದ್ದರೂ, ಹೆಚ್ಚಿನ ಮಳೆ ಸುರಿದ ಪರಿಣಾಮ 416.65 ಟಿಎಂಸಿ ನೀರು ಹರಿಸಲಾಗಿದೆ. 

ಕಾಂಗ್ರೆಸ್‌ನ ದಿನೇಶ್‌ ಗೂಳಿಗೌಡ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜೂನ್‌ ತಿಂಗಳಲ್ಲಿ 9.19 ಟಿಎಂಸಿ ಬದಲು 16.46 ಟಿಎಂಸಿ, ಜುಲೈನಲ್ಲಿ 31.24ರ ಬದಲು 106.93 ಟಿಎಂಸಿ, ಆಗಸ್ಟ್‌ನಲ್ಲಿ 45.95 ಟಿಎಂಸಿ ಬದಲು 223.57 ಟಿಎಂಸಿ ಹಾಗೂ ಸೆಪ್ಟೆಂಬರ್‌ 12ರವರೆಗೆ 14.70 ಟಿಎಂಸಿ ಬದಲು 69.69 ಟಿಎಂಸಿ ನೀರು ಹರಿಸಲಾಗಿದೆ. ಜಲ ವರ್ಷವಾದ ಜೂನ್‌ ತಿಂಗಳಿಂದ ಮೇ ವರೆಗೆ 177. 25 ಟಿಎಂಸಿ ನೀರು ಹರಿಸಬೇಕಾಗುತ್ತದೆ. ಆದರೆ ಈ ವರ್ಷ ನಿಗದಿಗಿಂತ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗಿದೆ ಎಂದಿದ್ದಾರೆ.

ಮಲೆನಾಡಲ್ಲಿ ಭಾರೀ ಮಳೆ: ಟಿಬಿ, ಕೆಆರ್‌ಎಸ್‌ ಡ್ಯಾಂನಿಂದ 1 ಲಕ್ಷ ಕ್ಯುಸೆಕ್‌ ಹೊರಕ್ಕೆ

ರಾಜ್ಯದಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದ್ದರೂ ತಮಿಳುನಾಡು ಈ ಎಲ್ಲ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಆಗದೆ ಸಮುದ್ರ ಸೇರುತ್ತಿದೆ ಎಂದು ದಿನೇಶ್‌ ಹೇಳಿದರು.

ಜೂನ್‌ ತಿಂಗಳಲ್ಲಿ 9.19 ಟಿಎಂಸಿ ಬದಲು 16.46 ಟಿಎಂಸಿ, ಜುಲೈನಲ್ಲಿ 31.24ರ ಬದಲು 106.93 ಟಿಎಂಸಿ, ಆಗಸ್ಟ್‌ನಲ್ಲಿ 45.95 ಟಿಎಂಸಿ ಬದಲು 223.57 ಟಿಎಂಸಿ ಹಾಗೂ ಸೆಪ್ಟೆಂಬರ್‌ 12ರವರೆಗೆ 14.70 ಟಿಎಂಸಿ ಬದಲು 69.69 ಟಿಎಂಸಿ ನೀರು ಹರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿದುಹೋಗುತ್ತಿದ್ದರೂ ತಮಿಳುನಾಡು ಈ ಎಲ್ಲ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಆಗದೆ ಸಮುದ್ರ ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆ ಆರಂಭಿಸುವ ಮೂಲಕ ವ್ಯರ್ಥವಾಗುವ ನೀರನ್ನು ಕುಡಿಯುವ ನೀರು ಹಾಗೂ ವಿದ್ಯುತ್‌ ಉತ್ಪಾದನೆಗೆ ಬಳಸಬೇಕೆಂದು ದಿನೇಶ್‌ ಗೂಳಿಗೌಡ ಸಲಹೆ ನೀಡಿದ್ದಾರೆ.