Asianet Suvarna News Asianet Suvarna News

ಚರ್ಮಗಂಟು ರೋಗ: ಕರ್ನಾಟಕದಲ್ಲಿ 30,397 ಜಾನುವಾರು ಸಾವು

ಉತ್ತರಿಸಿ ಫೆ. 7ರವರೆಗೆ 10.11 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಬಹುತೇಕ ಎಲ್ಲ ಅರ್ಹ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, ರೋಗ ನಿಯಂತ್ರಣಕ್ಕೆ ಬರುತ್ತಿದೆ ಎಂದರು. ರೋಗದಿಂದ ಸಾವನ್ನಪ್ಪಿದ ಜಾನುವಾರುಗಳ ಮಾಲಿಕರಿಗೆ ಪ್ರತಿ ಕರುವಿಗೆ 5000 ರು., ಪ್ರತಿ ಹಸುವಿಗೆ 20 ಸಾವಿರ ರು. ಪ್ರತಿ ಎಮ್ಮೆಗೆ 30 ಸಾವಿರ ರು. ಪರಿಹಾರ ಘೋಷಿಸಲಾಗಿದೆ. ಈ ಸಂಬಂಧ ಈಗಾಗಲೇ 37 ಕೋಟಿ ರು. ಪರಿಹಾರ ಧನ ಬಿಡುಗಡೆ ಮಾಡಲಾಗಿದೆ; ಸಚಿವ ಪ್ರಭು ಚವ್ಹಾಣ್‌ 

30397 Cattle Died in Karnataka Due to Lumpy Skin Disease Says Prabhu Chauhan grg
Author
First Published Feb 23, 2023, 3:00 AM IST

ವಿಧಾನಪರಿಷತ್‌(ಫೆ.23): ರಾಜ್ಯದಲ್ಲಿ ಚರ್ಮಗಂಟು ರೋಗಕ್ಕೆ ಫೆ. 7ರವರೆಗೆ 3.25 ಲಕ್ಷ ಜಾನುವಾರುಗಳು ತುತ್ತಾಗಿವೆ. 2.57 ಲಕ್ಷ ಜಾನುವಾರು ಗುಣಮುಖವಾಗಿದ್ದು, 30,397 ಜಾನುವಾರುಗಳು ಮೃತಪಟ್ಟಿವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ. 

ಪರಿಷತ್‌ನಲ್ಲಿ ಉತ್ತರಿಸಿ ಫೆ. 7ರವರೆಗೆ 10.11 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಬಹುತೇಕ ಎಲ್ಲ ಅರ್ಹ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, ರೋಗ ನಿಯಂತ್ರಣಕ್ಕೆ ಬರುತ್ತಿದೆ ಎಂದರು. ರೋಗದಿಂದ ಸಾವನ್ನಪ್ಪಿದ ಜಾನುವಾರುಗಳ ಮಾಲಿಕರಿಗೆ ಪ್ರತಿ ಕರುವಿಗೆ 5000 ರು., ಪ್ರತಿ ಹಸುವಿಗೆ 20 ಸಾವಿರ ರು. ಪ್ರತಿ ಎಮ್ಮೆಗೆ 30 ಸಾವಿರ ರು. ಪರಿಹಾರ ಘೋಷಿಸಲಾಗಿದೆ. ಈ ಸಂಬಂಧ ಈಗಾಗಲೇ 37 ಕೋಟಿ ರು. ಪರಿಹಾರ ಧನ ಬಿಡುಗಡೆ ಮಾಡಲಾಗಿದೆ. 17,563 ಜಾನುವಾರುಗಳ ಮಾಲಿಕರಿಗೆ ಪರಿಹಾರÜವನ್ನು ನೇರವಾಗಿ ವಿತರಿಸಲಾಗಿದೆ. ತುರ್ತು ಚಿಕಿತ್ಸೆಗೆ ಅವಶ್ಯವಿರುವ ಔಷಧಿಗಳನ್ನು ಪೂರೈಸಲಾಗಿದೆ. ಪ್ರತಿ ತಾಲ್ಲೂಕಿಗೆ ಕನಿಷ್ಠ 5 ಲಕ್ಷ ರು. ಕಾಯ್ದಿರಿಸಲಾಗಿದೆ ಎಂದರು.

Shivamogga: ಜಿಲ್ಲೆ​ಯಲ್ಲಿ ಚರ್ಮಗಂಟು ರೋಗಕ್ಕೆ 1057 ಜಾನು​ವಾರು ಬಲಿ!

ರೋಗ ನಿಯಂತ್ರಿಸಲು ತಾತ್ಕಾಲಿಕವಾಗಿ ಜಾನುವಾರುಗಳ ಸಾಗಾಟ, ಮಾರಾಟ, ಸಂತೆ, ಜಾತ್ರೆಗಳನ್ನು ನಿರ್ಬಂಧಿಸಲಾಗಿದೆ. ರೋಗ ಹಾಗೂ ರೋಗದ ನಿಯಂತ್ರಣದ ಬಗ್ಗೆ ಅರಿವು ಮೂಡಲು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.

Follow Us:
Download App:
  • android
  • ios