Asianet Suvarna News Asianet Suvarna News

Karnataka: ನರೇಗಾದಡಿ 30 ಲಕ್ಷ ಮಹಿಳೆಯರಿಗೆ ಕೆಲಸ: ಸಚಿವ ಈಶ್ವರಪ್ಪ

*  ನರೇಗಾ ಮಾನವ ದಿನಗಳ ಸಂಖ್ಯೆ 16 ಕೋಟಿಗೇರಿಕೆ
*  ದಿನಗಳ ಸಂಖ್ಯೆ ಏರಿಕೆ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ
*  ಉತ್ತಮ ಸಾಧನೆ ತೋರಿದ ಮಹಿಳಾ ಕಾಯಕ ಬಂಧುಗಳಿಗೆ ಸನ್ಮಾನ
 

30 Lakh Women Working Under MNAREGA in Karnataka Says KS Eshwarappa grg
Author
First Published Mar 10, 2022, 6:38 AM IST

ಬೆಂಗಳೂರು(ಮಾ.10):  ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ(MNAREGA) ಯೋಜನೆಯಡಿ ಕೇಂದ್ರ ಸರ್ಕಾರವು(Central Government) ಪ್ರಸಕ್ತ ಸಾಲಿನಲ್ಲಿ 13 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆಯ ಗುರಿಯನ್ನು ರಾಜ್ಯಕ್ಕೆ ನೀಡಿತ್ತು. ಆದರೆ ರಾಜ್ಯ ಸರ್ಕಾರ ಹೆಚ್ಚುವರಿ ಬೇಡಿಕೆ ಸಲ್ಲಿಸಿದ್ದರಿಂದ 16 ಕೋಟಿಗೆ ಹೆಚ್ಚಳ ಮಾಡಲಾಯಿತು. ಇದರಲ್ಲಿ ಈಗಾಗಲೇ 15.27 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಸಂತಸ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ(International Women's Day) ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯ(Karnataka) ಮಟ್ಟದಲ್ಲಿ ನವಭಾರತದ ನಾರಿ ಯೋಜನೆಯಡಿ ಅತ್ಯುತ್ತಮ ಕೆಲಸ ನಿರ್ವಹಿಸಿದ ಮಹಿಳಾ ಕಾಯಕ ಬಂಧುಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

Harsha Murder Case: ಕೆಲವು ಗೂಂಡಾ ಮುಸ್ಲಿಂರ ವಿಕೃತಿ ಕಡಿ​ಮೆ​ಯಾ​ಗಿ​ಲ್ಲ: ಈಶ್ವ​ರಪ್ಪ

ನರೇಗಾ ಯೋಜನೆಯಡಿ ಪ್ರಸ್ತುತ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರ ಮೊದಲು 13 ಕೋಟಿ ಮಾನವ ದಿನಗಳ ಉದ್ಯೋಗ(Job) ಸೃಜನೆ ನೀಡಿತ್ತು. ನಾವು ಇದನ್ನು ಡಿಸೆಂಬರ್‌ನಲ್ಲೇ ಪೂರ್ಣಗೊಳಿಸಿ ಹೆಚ್ಚುವರಿ ಬೇಡಿಕೆ ಸಲ್ಲಿಸಿದೆವು. ಬಳಿಕ ಕೇಂದ್ರವು 1.4 ಕೋಟಿ ದಿನ ನೀಡಿತು. ಅದನ್ನೂ ಜನವರಿಯಲ್ಲೇ ಪೂರ್ಣಗೊಳಿಸಿ ಮತ್ತೆ ಬೇಡಿಕೆ ಇಟ್ಟೆವು. ಆಗ ಪುನಃ 1.6 ಕೋಟಿ ದಿನ ನೀಡಿತು. ಒಟ್ಟಾರೆ 16 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಗುರಿ ನೀಡಿದ್ದು, ಇದರಲ್ಲಿ 15.27 ಕೋಟಿ ಗಡಿ ದಾಟಿದ್ದೇವೆ ಎಂದು ವಿವರಿಸಿದರು.

2400 ಕಾಯಕ ಮಿತ್ರರ ನೇಮಕ:

ಪ್ರಸಕ್ತ ಸಾಲಿನಲ್ಲಿ ನರೇಗಾದಡಿ 30.81 ಲಕ್ಷ ಮಹಿಳೆಯರಿಗೆ(Women) ಉದ್ಯೋಗ ನೀಡಲಾಗಿದೆ. ದೇಶದಲ್ಲಿಯೇ(India) ಪ್ರಥಮ ಪ್ರಯತ್ನವಾಗಿ 2400ಕ್ಕೂ ಅಧಿಕ ಗ್ರಾಮ ಪಂಚಾಯ್ತಿಗಳಿಗೆ ಪೂರ್ಣ ಪ್ರಮಾಣದಲ್ಲಿ ಮಹಿಳೆಯರನ್ನು ಗ್ರಾಮ ಕಾಯಕ ಮಿತ್ರರೆಂದು ನೇಮಕ ಮಾಡಲಾಗಿದೆ. ಈ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ವಿಶೇಷ ಮಹಿಳಾ ಕಾಯಕೋತ್ಸವ(Special Woman's Carnival) ಹಮ್ಮಿಕೊಳ್ಳಲಾಗಿದೆ ಎಂದು ಬಣ್ಣಿಸಿದರು.

ಕೆರೆ-ಕಟ್ಟೆ ತುಂಬಿಸುವುದು, ಏರಿ, ಗೋ ಕಟ್ಟೆ, ಕಲ್ಯಾಣಿ ಸ್ವಚ್ಛತೆ ಹಾಗೂ ಪುನರ್‌ ನಿರ್ಮಾಣ, ಇಂಗು ಗುಂಡಿ ನಿರ್ಮಾಣ, ರೈತರ(Farmers) ಭೂಮಿಯ(Land) ಅಭಿವೃದ್ಧಿಗೆ ಬದು ನಿರ್ಮಾಣ ಸೇರಿದಂತೆ ಮತ್ತಿತರ ಅಭಿವೃದ್ಧಿ ಚಟುವಟಿಕೆಗಳನ್ನು ನರೇಗಾ ಯೋಜನೆಯಡಿ ಕೈಗೊಂಡು, ಉತ್ಪಾದಕತೆ ಹೆಚ್ಚಿಸಲಾಗಿದೆ. ನರೇಗಾಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುವ ಮಹಿಳಾ ಮೇಟ್‌ಗಳು ಇದಕ್ಕೆ ಪ್ರೇರಣೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನರೇಗಾ ಯೋಜನೆಯಡಿ ಕೂಲಿಕಾರರನ್ನು ಸಂಘಟಿಸುವಲ್ಲಿ ಕ್ರಿಯಾಶೀಲವಾಗಿ ಅತ್ಯುತ್ತಮ ಪಾತ್ರ ವಹಿಸಿದ ರಾಜ್ಯದ ಆಯ್ದ 75 ಮಹಿಳಾ ಮೇಟ್‌ಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಶಿಕಾರಿಪುರ ಜನರ ಋಣದ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಬೆಂಕಿಯ ಚೆಂಡು ಎಂದ ಈಶ್ವರಪ್ಪ

ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಆಯುಕ್ತೆ ಶಿಲ್ಪನಾಗ್‌, ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಪ್ರಾಣೇಶ್‌ ರಾವ್‌ ಮತ್ತಿತರರು ಉಪಸ್ಥಿತರಿದ್ದರು.

ನಾನು ವಿಶೇಷಚೇತನೆ ಎಂದು ಎಲ್ಲೂ ಕೆಲಸ ನೀಡುತ್ತಿರಲಿಲ್ಲ. ಈಗ ನರೇಗಾದಲ್ಲಿ 5 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಹೆಮ್ಮೆಯಾಗುತ್ತಿದೆ ಅಂತ ಲಕ್ಷ್ಮೀ ಬಾಗಲಕೋಟೆ(Bagalkot) ತಿಳಿಸಿದ್ದಾರೆ. 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯ ಮಟ್ಟದಲ್ಲಿ ನವಭಾರತದ ನಾರಿ ಯೋಜನೆಯಡಿ ಅತ್ಯುತ್ತಮ ಕೆಲಸ ನಿರ್ವಹಿಸಿದ ಮಹಿಳಾ ಕಾಯಕ ಬಂಧುಗಳನ್ನು ಸನ್ಮಾನಿಸಲಾಯಿತು.
 

Follow Us:
Download App:
  • android
  • ios