Asianet Suvarna News Asianet Suvarna News

3 ಕೋಟಿ ಮನೆಗೆ ‘ಸೋಲಾರ್‌ ಸ್ಟವ್‌’: ಪ್ರಧಾನಿ ಮೋದಿ

ದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಮೂರು ಕೋಟಿಗೂ ಹೆಚ್ಚು ಮನೆಗಳಲ್ಲಿ ಸೌರ ಅಡುಗೆ ವ್ಯವಸ್ಥೆ ಪ್ರೋತ್ಸಾಹಿಸಲು ‘ಸೋಲಾರ್‌ ಕುಕ್‌ ಟಾಪ್‌’ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಇದರಿಂದ ಭವಿಷ್ಯದಲ್ಲಿ ಭಾರತದ ಅಡುಗೆ ಮನೆಗಳಲ್ಲಿ ಕ್ರಾಂತಿ (ಕಿಚನ್‌ ಕ್ರಾಂತಿ) ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

3 Crore Houses for Solar Stove Says PM Narendra Modi gvd
Author
First Published Feb 7, 2023, 2:20 AM IST

ಬೆಂಗಳೂರು (ಫೆ.07): ದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಮೂರು ಕೋಟಿಗೂ ಹೆಚ್ಚು ಮನೆಗಳಲ್ಲಿ ಸೌರ ಅಡುಗೆ ವ್ಯವಸ್ಥೆ ಪ್ರೋತ್ಸಾಹಿಸಲು ‘ಸೋಲಾರ್‌ ಕುಕ್‌ ಟಾಪ್‌’ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಇದರಿಂದ ಭವಿಷ್ಯದಲ್ಲಿ ಭಾರತದ ಅಡುಗೆ ಮನೆಗಳಲ್ಲಿ ಕ್ರಾಂತಿ (ಕಿಚನ್‌ ಕ್ರಾಂತಿ) ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಗರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ‘ಭಾರತ ಇಂಧನ ಸಪ್ತಾಹ’ ಕಾರ್ಯಕ್ರಮದಲ್ಲಿ ಸೌರ ಶಕ್ತಿಯಿಂದ ಅಡುಗೆ ತಯಾರಿಸಬಹುದಾದ ‘ಟ್ವಿನ್‌ ಕುಕ್‌ ಟಾಪ್‌ ಇಂಡಿಯನ್‌ ಸೋಲಾರ್‌ ಕುಕ್ಕರ್‌’ ಅನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಳೆದ ಒಂಬತ್ತು ವರ್ಷಗಳಲ್ಲಿ 19 ಕೋಟಿ ಕುಟುಂಬಗಳು ಸ್ವಚ್ಛ ಮತ್ತು ಶುದ್ಧ ಅಡುಗೆ ಇಂಧನ ಬಳಕೆ ಮಾಡುತ್ತಿವೆ. ಪ್ರಸ್ತುತ 22 ಸಾವಿರ ಕಿ.ಮೀ. ಅನಿಲ ಕೊಳವೆ ಮಾರ್ಗ ನಿರ್ಮಿಸಲಾಗಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಈ ಜಾಲವನ್ನು 35 ಸಾವಿರ ಕಿ.ಮೀ.ಗೆ ವಿಸ್ತರಿಸುವ ಗುರಿ ಇದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎರಡು- ಮೂರು ವರ್ಷಗಳಲ್ಲಿ ಮೂರು ಲಕ್ಷ ಕುಟುಂಬಗಳಿಗೆ ಸೋಲಾರ್‌ ಕುಕ್‌ಟಾಪ್‌ಗಳನ್ನು ವಿತರಿಸುವ ಗುರಿ ಇದೆ. ಈ ಕ್ಷೇತ್ರದಲ್ಲೂ ಹೂಡಿಕೆಗೆ ಭಾರತದಲ್ಲಿ ಉತ್ತಮ ಅವಕಾಶವಿದೆ ಎಂದರು.

ಯುವಕರು ನೌಕರಿ ಕೇಳಿದ್ರೆ ಮೋದಿಯವರು ಪಕೋಡಾ ಮಾರಿ ಅಂತಾರೆ: ಸಿದ್ದರಾಮಯ್ಯ

ಬೆಲೆ 15000 ರು: ಇಂಡಿಯನ್‌ ಆಯಿಲ್‌ ಕಂಪನಿಯು ವಿವಿಧ ಕಂಪನಿಗಳ ಸಹಯೋಗದಲ್ಲಿ ಈ ಸೋಲಾರ್‌ ಕುಕ್‌ಟಾಪ್‌ ಉತ್ಪಾದನೆಯ ಉಪಕ್ರಮ ಕೈಗೊಂಡಿದೆ. ಈ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ. ಕಳೆದ ಆರು ತಿಂಗಳಿಂದ ಸೋಲಾರ್‌ ಕುಕ್‌ ಟಾಪ್‌ ಬಳಸಿ ಅಡುಗೆ ತಯಾರಿ ಸಂಬಂಧ ವಿವಿಧ ರಾಜ್ಯಗಳಲ್ಲಿ ಪ್ರಯೋಗ ನಡೆಸಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ದರ 15 ಸಾವಿರ ರು. ಎಂದು ಅಂದಾಜಿಸಲಾಗಿದ್ದು, ಸರ್ಕಾರದಿಂದ 5 ಸಾವಿರ ರು. ಸಬ್ಸಿಡಿ ಸೌಲಭ್ಯದ ಮೂಲಕ 10 ಸಾವಿರ ರು.ಗಳಲ್ಲಿ ಗ್ರಾಹಕರಿಗೆ ಕಂತುಗಳ ಮಾದರಿಯಲ್ಲಿ ಒದಗಿಸುವ ಗುರಿ ಇದೆ. 

ಪ್ರಲ್ಹಾದ್ ಜೋಶಿ ಸಿಎಂ ಹೇಳಿಕೆ, ದಿಕ್ಕು ತಪ್ಪಿಸುವ ತಂತ್ರ: ಸಚಿವ ಶ್ರೀರಾಮುಲು

ಪ್ರಸ್ತುತ ಎಲ್‌ಪಿಜಿ ಸಂಪರ್ಕ ಹೊಂದಿರುವ ಎಲ್ಲ ಗ್ರಾಹಕರೂ ಹೆಚ್ಚುವರಿ ಸೌಲಭ್ಯವಾಗಿ ಈ ಸೋಲಾರ್‌ ಕುಕ್‌ ಟಾಪ್‌ ಖರೀದಿಸುವ ನಿರೀಕ್ಷೆ ಹೊಂದಲಾಗಿದೆ. ಇದರಿಂದ ಮುಂದಿನ 7 ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರು.ನಷ್ಟು ಎಲ್‌ಪಿಜಿ ಖರೀದಿ ವೆಚ್ಚದ ದರ ಉಳಿತಾಯವಾಗಬಹುದು ಹಾಗೂ 50 ಸಾವಿರ ಕೋಟಿ ರು.ನಷ್ಟು ವಿದೇಶಿ ವಿನಿಮಯ ಮತ್ತು 50 ದಶಲಕ್ಷ ಟನ್‌ನಷ್ಟು ಕಾರ್ಬನ್‌ ಡೈ ಆಕ್ಸೈಡ್‌ ಹೊರಸೂಸುವಿಕೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

Follow Us:
Download App:
  • android
  • ios