Asianet Suvarna News Asianet Suvarna News

ರಾಜ್ಯದಲ್ಲಿ 1.1 ಲಕ್ಷ ಕೊರೋನಾ ಪರೀಕ್ಷೆ: 2960 ಜನರಿಗೆ ಸೋಂಕು

ಶುಕ್ರವಾರ 2,960 ಜನರಲ್ಲಿ ಸೋಂಕು, 2701 ಜನ ಗುಣಮುಖ, 35 ಮಂದಿ ಸಾವು| ಒಂದು ಲಕ್ಷದ ಮೇಲಿದ್ದ ಸಕ್ರಿಯ ಪ್ರಕಣಗಳ ಸಂಖ್ಯೆ ಸದ್ಯ 33,319ಕ್ಕೆ ಇಳಿಕೆ| 

2960 New Coronavirus Case in Karnataka Yesterday grg
Author
Bengaluru, First Published Nov 7, 2020, 9:43 AM IST

ಬೆಂಗಳೂರು(ನ.07): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ನಿತ್ಯ ಮೂರು ಸಾವಿರದ ಆಜುಬಾಜಿನಲ್ಲಿ ವರದಿಯಾಗುತ್ತಿದೆ. ಶುಕ್ರವಾರ 2,960 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ 2,701 ಮಂದಿ ಗುಣಮುಖರಾಗಿದ್ದಾರೆ, 35 ಮಂದಿ ಮೃತರಾಗಿದ್ದಾರೆ.

ಅಕ್ಟೋಬರ್‌ 15ರಿಂದ ನಿತ್ಯ ಗುಣಮುಖರ ಸಂಖ್ಯೆ ಹೆಚ್ಚಾದ ಪರಿಣಾಮ ಒಂದು ಲಕ್ಷದ ಮೇಲಿದ್ದ ಸಕ್ರಿಯ ಪ್ರಕಣಗಳ ಸಂಖ್ಯೆ ಸದ್ಯ 33,319ಕ್ಕೆ ಇಳಿದಿದೆ. ಪ್ರಸ್ತುತ 901 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 1.10 ಲಕ್ಷ ಪರೀಕ್ಷೆ ನಡೆಸಲಾಗಿದೆ ಈವರೆಗೆ ಒಟ್ಟು 8.41 ಲಕ್ಷ ಮಂದಿ ಸೋಂಕಿನಿಂದ ಬಾಧಿತರಾಗಿದ್ದಾರೆ. ಈ ಪೈಕಿ 7.97 ಲಕ್ಷ ಜನರು ಗುಣಮುಖರಾಗಿದ್ದಾರೆ. ಒಟ್ಟು 11,347 ಮಂದಿ ಮರಣವನ್ನಪ್ಪಿದ್ದಾರೆ. ರಾಜ್ಯದ ಪ್ರಸಕ್ತ ಮರಣ ದರ ಶೇ.1.35 ರಷ್ಟಿದೆ. ಈವರೆಗೆ ಒಟ್ಟು 85 ಲಕ್ಷ ಪರೀಕ್ಷೆ ನಡೆದಿದೆ.

ನೌಕರರು ಕ್ವಾರಂಟೈನ್‌ನಲ್ಲಿದ್ದರೆ ರಜೆ ಪರಿಗಣಿಸಲು ಸರ್ಕಾರದ ಆದೇಶ

ಬೆಂಗಳೂರು ನಗರದಲ್ಲಿ 12 ಮಂದಿ ಸೋಂಕಿನಿಂದ ಮೃತರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1,568 ಮಂದಿಯಲ್ಲಿ ಸೋಂಕು ದೃಢವಾಗಿದೆ. ಉಳಿದಂತೆ ತುಮಕೂರು 3, ಮೈಸೂರು, ಕೊಪ್ಪಳ, ಕೋಲಾರ, ದಕ್ಷಿಣ ಕನ್ನಡ, ಬಳ್ಳಾರಿ ಜಿಲ್ಲೆಯಲ್ಲಿ ತಲಾ 2, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಧಾರವಾಡ, ದಾವಣಗೆರೆ, ಕಲಬುರಗಿ, ಮಂಡ್ಯ, ರಾಯಚೂರು, ಉಡುಪಿ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಉಳಿದಂತೆ ಬಾಗಲಕೋಟೆ 25, ಬಳ್ಳಾರಿ 66, ಬೆಳಗಾವಿ 32, ಬೆಂಗಳೂರು ಗ್ರಾಮಾಂತರ 69, ಬೀದರ್‌ 1, ಚಾಮರಾಜ ನಗರ 18, ಚಿಕ್ಕಬಳ್ಳಾಪುರ 32, ಚಿಕ್ಕಮಗಳೂರು 42, ಚಿತ್ರದುರ್ಗ 36, ದಕ್ಷಿಣ ಕನ್ನಡ 79, ದಾವಣಗೆರೆ 44, ಧಾರವಾಡ 33, ಗದಗ 5, ಹಾಸನ 97, ಹಾವೇರಿ 6, ಕಲಬುರಗಿ 32, ಕೊಡಗು 28, ಕೋಲಾರ 48, ಕೊಪ್ಪಳ 16, ಮಂಡ್ಯ 119, ಮೈಸೂರು 148, ರಾಯಚೂರು 17, ರಾಮನಗರ 32, ಶಿವಮೊಗ್ಗ 57, ತುಮಕೂರು 161, ಉಡುಪಿ 61, ಉತ್ತರ ಕನ್ನಡ 17, ವಿಜಯಪುರ 53 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 18 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ.
 

Follow Us:
Download App:
  • android
  • ios