2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು: 26 ಕೋಟಿಗೂ ಹೆಚ್ಚು ದಂಡ ಸಂಗ್ರಹ
ಸಿಲಿಕಾನ್ ಸಿಟಿಯಲ್ಲಿ 2022ರಲ್ಲಿ ದಾಖಲೆ ಪ್ರಮಾಣದ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣ ದಾಖಲಾಗಿದೆ. ನವೆಂಬರ್ ಅಂತ್ಯದವರೆಗಿನ ಅಂಕಿಅಂಶಗಳ ಪ್ರಕಾರ, ಬರೋಬ್ಬರಿ 26017 ಮಂದಿ ಪಾನಮತ್ತರಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರು (ಡಿ.25): ಸಿಲಿಕಾನ್ ಸಿಟಿಯಲ್ಲಿ 2022ರಲ್ಲಿ ದಾಖಲೆ ಪ್ರಮಾಣದ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣ ದಾಖಲಾಗಿದೆ. ನವೆಂಬರ್ ಅಂತ್ಯದವರೆಗಿನ ಅಂಕಿ ಅಂಶಗಳ ಪ್ರಕಾರ, ಬರೋಬ್ಬರಿ 26017 ಮಂದಿ ಪಾನಮತ್ತರಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈ ಅವಧಿಯಲ್ಲಿ 26 ಕೋಟಿ ರೂ.ಗೂ ಹೆಚ್ಚು ದಂಡ ವಿಧಿಸಲಾಗಿದೆ.
ಕೋವಿಡ್ ಹಿನ್ನಲೆಯಲ್ಲಿ 2020 ಹಾಗೂ 21ರಲ್ಲಿ ಪಾನಮತ್ತ ವಾಹನ ಸವಾರರ ವಿರುದ್ಧ ಡಿಡಿ ತಪಾಸಣೆ ನಡೆದಿರಲಿಲ್ಲ. ಪಾನಮತ್ತ ವಾಹನ ಚಾಲಕರು ಪದೇ ಪದೆ ಅಪಘಾತಕ್ಕೆ ಕಾರಣವಾಗುತ್ತಿರುವುದರಿಂದ ಈ ವರ್ಷದ ಆರಂಭದಲ್ಲಿಯೇ ದಂಡ ವಿಧಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿತ್ತು. 2020 ರಲ್ಲಿ 5343 ಡ್ರಿಂಕ್ ಅಂಡ್ ಡ್ರೈವ್ ಕೇಸ್‌ಗಳು ದಾಖಲಾಗಿದ್ದವು. 2021ರಲ್ಲಿ 4144 ಡಿಡಿ ಕೇಸ್‌ಗಳು ದಾಖಲಾಗಿದ್ದವು. ಆದರೆ ಈ ಬಾರಿ ಸಾಕಷ್ಟು ಜನ ಕುಡಿದು ಗಾಡಿ ಓಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇನ್ನು ವರ್ಷಾಂತ್ಯಕ್ಕೆ ಈ ಪ್ರಮಾಣ ಇನ್ನೂ ಹೆಚ್ಚಾಗಲಿದೆ.
ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಮೇಲೆ ಅಟ್ಯಾಕ್ ಮಾಡಲು ಯತ್ನ?: ಮೂವರ ಬಂಧನ
ಜ.1ರ ವರೆಗೂ ಕಾರ್ಯಾಚರಣೆ: ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸರು ‘ಡ್ರಂಕ್ ಆ್ಯಂಡ್ ಡ್ರೈವ್’ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಶುಕ್ರವಾರ ರಾತ್ರಿ 146 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಗರದಲ್ಲಿ ಹೆಚ್ಚಾಗುತ್ತಿರುವ ಮರಣಾಂತಿಕ ಅಪಘಾತಗಳಿಗೆ ಕಾರಣಗಳನ್ನು ವಿಶ್ಲೇಷಣೆ ಮಾಡಿದಾಗ, ವಾಹನ ಸವಾರ/ಚಾಲಕರು ಕುಡಿದು ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಗಣನೀಯ ವಾಗಿ ಹೆಚ್ಚಾಗಿದೆ. ಈ ಪಿಡುಗನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವ ಅಗತ್ಯವಿದೆ. ಅಪಘಾತಗಳನ್ನು ತಡೆಯುವುದು ಹಾಗೂ ರಸ್ತೆ ಬಳಕೆದಾರರ ಸುರಕ್ಷತೆಯನ್ನು ಕಾಪಾಡುವುದು ಸಂಚಾರ ಪೊಲೀಸರ ಮೂಲಭೂತ ಕರ್ತವ್ಯ ಹಾಗೂ ಮೊದಲ ಆದ್ಯತೆಯಾಗಿದೆ.
ಜಲೀಲ್ ಹತ್ಯೆ ಪ್ರಕರಣ: ಸುರತ್ಕಲ್ ಸುತ್ತಾಮುತ್ತಾ 144 ಸೆಕ್ಷನ್ ಜಾರಿ
ನಗರದ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಯುವ ಮೂಲಕ ಅಮಾಯಕರ ಪ್ರಾಣಹಾನಿಯನ್ನು ತಡೆಗಟ್ಟುವ ಹೊಣೆಗಾರಿಕೆ ಸಂಚಾರ ಪೊಲೀಸರಾದ ನೆಮ್ಮಲ್ಲರ ಮೇಲಿದೆ. ಹೀಗಾಗಿ ಅಪಘಾತಗಳನ್ನು ತಡೆಯನ್ನು ಬದ್ಧತೆ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸ್ ವಿಭಾಗದಿಂದ ರಾತ್ರಿ ವೇಳೆ ಕುಡಿದು ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದು, 2023ರ ಜ.1ರವರೆಗೂ ನಗರದಲ್ಲಿ ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.