Asianet Suvarna News Asianet Suvarna News

ಕೊರೋನಾ ಕಾಟ: ರಾಜ್ಯದಲ್ಲಿ ಮಹಾರಾಷ್ಟ್ರದಿಂದಲೇ 2561 ಸೋಂಕು!

ಮಹಾರಾಷ್ಟ್ರ 2,561, ದೆಹಲಿ 77, ಗುಜರಾತ್‌ 61, ತಮಿಳುನಾಡು 58, ರಾಜಸ್ತಾನ 44, ಜಾರ್ಖಂಡ್‌ 14, ತೆಲಂಗಾಣ 15, ಆಂಧ್ರಪ್ರದೇಶ 12, ಕೇರಳ 6, ಗೋವಾದಿಂದ 5, ಉತ್ತರ ಪ್ರದೇಶ 3, ಮಧ್ಯಪ್ರದೇಶ ಹಾಗೂ ಒರಿಸ್ಸಾ ತಲಾ 2, ಉತ್ತರಾಖಂಡ ಹಾಗೂ ಛತ್ತೀಸ್‌ಗಢದಿಂದ ತಲಾ ಒಬ್ಬರಿಗೆ ರಾಜ್ಯದಲ್ಲಿ ಸೋಂಕು 

2561 Coronavirus infection from Maharashtra in Karnataka
Author
Bengaluru, First Published Jun 5, 2020, 8:15 AM IST

ಬೆಂಗಳೂರು(ಜೂ.05): ರಾಜ್ಯದಲ್ಲಿ ವರದಿಯಾಗಿರುವ ಒಟ್ಟು 4,320 ಕೊರೋನಾ ಸೋಂಕಿನ ಪ್ರಕರಣಗಳ ಪೈಕಿ ‘ಮಹಾರಾಷ್ಟ್ರ’ದ ಸೋಂಕಿನ ಪಾಲೇ ಹೆಚ್ಚಾಗಿದ್ದು ಬರೋಬ್ಬರಿ 2,561 (ಶೇ.59.28) ಪ್ರಕರಣ ಮಹಾರಾಷ್ಟ್ರದಿಂದ ವಾಪಸ್‌ ಬಂದದವರಿಂದಲೇ ದಾಖಲಾಗಿದೆ. 

ರಾಜ್ಯದಲ್ಲಿ ಸ್ಥಳೀಯವಾಗಿ ಹರಡಿರುವುದಕ್ಕಿಂತ ಬಹುಪಾಲು ಅಂತರ್‌ರಾಜ್ಯ ಪ್ರಯಾಣಿಕರಿಂದಲೇ ಹೆಚ್ಚು ಸೋಂಕು ಹರಡಿದೆ. ಒಟ್ಟು ಪ್ರಕರಣಗಳ ಪೈಕಿ 2,914 ಮಂದಿ ಅಂತರ್‌ರಾಜ್ಯ ಪ್ರಯಾಣಿಕರಾಗಿದ್ದಾರೆ. ಉಳಿದಂತೆ ಸೋಂಕಿತರ ಸಂಪರ್ಕದಿಂದ 992, ವಿದೇಶ ಪ್ರಯಾಣಿಕರಿಂದ 131 ಹಾಗೂ ಸಾರಿ (ತೀವ್ರ ಉಸಿರಾಟ ತೊಂದರೆ) ಹಿನ್ನೆಲೆಯವರಿಂದ 70, ಐಎಲ್‌ಐ (ವಿಷಮಶೀತ ಜ್ವರ ಮಾದರಿ ಕಾಯಿಲೆ) ಹಿನ್ನೆಲೆಯ 46 ಮಂದಿಗೆ ಸೋಂಕು ಹರಡಿದೆ. ಉಳಿದಂತೆ 167 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ರಾಜ್ಯದಲ್ಲಿ ಮತ್ತೆ 257 ಕೊರೋನಾ ಕೇಸ್‌: ಒಂದೇ ದಿನ ನಾಲ್ವರ ಸಾವು

ಅಂತರ್‌ರಾಜ್ಯ ಪ್ರಯಾಣಿಕರ ಪೈಕಿ ಮಹಾರಾಷ್ಟ್ರ 2,561, ದೆಹಲಿ 77, ಗುಜರಾತ್‌ 61, ತಮಿಳುನಾಡು 58, ರಾಜಸ್ತಾನ 44, ಜಾರ್ಖಂಡ್‌ 14, ತೆಲಂಗಾಣ 15, ಆಂಧ್ರಪ್ರದೇಶ 12, ಕೇರಳ 6, ಗೋವಾದಿಂದ 5, ಉತ್ತರ ಪ್ರದೇಶ 3, ಮಧ್ಯಪ್ರದೇಶ ಹಾಗೂ ಒರಿಸ್ಸಾ ತಲಾ 2, ಉತ್ತರಾಖಂಡ ಹಾಗೂ ಛತ್ತೀಸ್‌ಗಢದಿಂದ ತಲಾ ಒಬ್ಬರಿಗೆ ರಾಜ್ಯದಲ್ಲಿ ಸೋಂಕು ವರದಿಯಾಗಿದೆ.
 

Follow Us:
Download App:
  • android
  • ios