Corona Update ಕರ್ನಾಟಕದಲ್ಲಿ ತಗ್ಗಿದ ಕೊರೋನಾತಂಕ, ಒಂದೇ ದಿನ 10 ಸಾವಿರ ಪ್ರಕರಣಗಳು ಇಳಿಕೆ

* ಕರ್ನಾಟಕದಲ್ಲಿ ತಗ್ಗಿದ ಕೊರೋನಾತಂಕ
* ಒಂದೇ ದಿನದಲ್ಲಿ 10 ಸಾವಿರ ಪ್ರಕರಣಗಳು ಕಡಿಮೆ 
* ಶೇ. 17.11ರಷ್ಟಿದ್ದ ಪಾಸಿಟಿವಿಟಿ ದರ ಇವತ್ತು ಶೇ. 13.44ಕ್ಕೆ ಇಳಿಕೆ

24172 New Coronavirus Cases and 58 deaths In Karnataka On Feb 1st rbj

ಬೆಂಗಳೂರು, (ಫೆ.01): ಕರ್ನಾಟಕದಲ್ಲಿ(Karnataka) ಕೊರೋನಾತಂಕ ತಗ್ಗಿದ್ದು, ಒಂದೇ ದಿನದಲ್ಲಿ 10 ಸಾವಿರ ಪ್ರಕರಣಗಳು ಕಡಿಮೆ ಆಗಿವೆ.

ಹೌದು..ನಿನ್ನೆ(ಜ.31) ರಾಜ್ಯದಲ್ಲಿ 24,172 ಕೊರೋನಾ ಪಾಸಿಟಿವ್(Coronavirus) ಕೇಸ್ ಪತ್ತೆಯಾಗಿದ್ದು, ಇಂದು(ಫೆ.01) ಬರೀ 14,366 ಪ್ರಕರಣಗಳಷ್ಟೇ ಪತ್ತೆಯಾಗಿವೆ.  60,914 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ.  ಶೇ. 17.11ರಷ್ಟಿದ್ದ ಪಾಸಿಟಿವಿಟಿ ದರ ಇವತ್ತು ಶೇ. 13.44ಕ್ಕೆ ಇಳಿದಿದೆ.

Covid 3rd Wave: ಕೊರೋನಾ ಕ್ರಮೇಣ ಇಳಿಕೆ, ಮತ್ತೆ ಹೆಚ್ಚಾಗಲ್ಲ: ಸುಧಾಕರ್‌

ಅಲ್ಲದೆ ರಾಜ್ಯದಲ್ಲಿನ ಕೊರೊನಾ ಸಕ್ರಿಯ ಪ್ರಕರಣಗಳಲ್ಲೂ ವ್ಯಾಪಕ ಇಳಿಕೆ ಕಂಡುಬಂದಿದೆ. ಜ.31ರಂದು ರಾಜ್ಯದಲ್ಲಿ 2,44,331 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು ಎರಡು ಲಕ್ಷಕ್ಕಿಂತಲೂ ಕಡಿಮೆ ಎಂದರೆ 1,97,725ಕ್ಕೆ ಇಳಿದಿದೆ.

ಸೋಂಕಿತರ ಪೈಕಿ 35,87,022 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಈವರೆಗೆ ಕೊರೋನಾದಿಂದ 39,056 ಜನ ಸಾವನ್ನಪ್ಪಿದ್ದಾರೆ. 

ಬೆಂಗಳೂರಿನಲ್ಲಿ ಇಂದು ಒಂದೇ ದಿನ 6,685 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರ)ನಾ ಪೀಡಿತರ ಸಂಖ್ಯೆ 17,27,575 ಕ್ಕೆ ಏರಿಕೆಯಾಗಿದೆ. 17,27,575 ಸೋಂಕಿತರ ಪೈಕಿ 16,05,847 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 9 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೋನಾದಿಂದ ಈವರೆಗೆ 16,602 ಜನ ಬಲಿಯಾಗಿದ್ದಾರೆ. ಬೆಂಗಳೂರಲ್ಲಿ 1,05,125 ಕೊರೋನಾ ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಕೊರೋನಾ ಕೇಸ್
ಬಾಗಲಕೋಟೆ 165, ಬಳ್ಳಾರಿ 437, ಬೆಳಗಾವಿ 1081, ಬೆಂಗಳೂರು ಗ್ರಾಮಾಂತರ 117, ಬೆಂಗಳೂರು ನಗರ 6685, ಬೀದರ್ 115, ಚಾಮರಾಜನಗರ 87, ಚಿಕ್ಕಬಳ್ಳಾಪುರ 126, ಚಿಕ್ಕಮಗಳೂರು 154, ಚಿತ್ರದುರ್ಗ 252, ದಕ್ಷಿಣ ಕನ್ನಡ 322, ದಾವಣಗೆರೆ 126, ಧಾರವಾಡ 633, ಗದಗ 73, ಹಾಸನ 337, ಹಾವೇರಿ 130, ಕಲಬುರಗಿ 135, ಕೊಡಗು 205, ಕೋಲಾರ 169, ಕೊಪ್ಪಳ 99, ಮಂಡ್ಯ 211, ಮೈಸೂರು 777, ರಾಯಚೂರು 38, ರಾಮನಗರ 58, ಶಿವಮೊಗ್ಗ 325, ತುಮಕೂರು 573, ಉಡುಪಿ 230, ಉತ್ತರ ಕನ್ನಡ 551, ವಿಜಯಪುರ 81, ಯಾದಗಿರಿ ಜಿಲ್ಲೆಯಲ್ಲಿ 74 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಕೊರೋನಾದಿಂದ ಮೃತಪಟ್ಟವರು
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ 9 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಯಲ್ಲಿ 7, ಮಂಡ್ಯ ಜಿಲ್ಲೆಯಲ್ಲಿ 5, ಉಡುಪಿ ಜಿಲ್ಲೆಯಲ್ಲಿ 4, ಶಿವಮೊಗ್ಗ ಜಿಲ್ಲೆಯಲ್ಲಿ 3, ಬಾಗಲಕೋಟೆ, ದಾವಣಗೆರೆ, ಹಾಸನ, ಕಲಬುರಗಿ, ಕೋಲಾರ, ರಾಯಚೂರು, ರಾಮನಗರ ಜಿಲ್ಲೆಯಲ್ಲಿ 2, ಬಳ್ಳಾರಿ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ಕೊಪ್ಪಳ, ತುಮಕೂರು ಹಾಗೂ ವಿಜಯಪುರ ಜಿಲ್ಲೆಯಲ್ಲಿ 1 ಮಂದಿ ಮೃತಪಟ್ಟಿದ್ದಾರೆ.

ಕೊರೋನಾ(Coronavirus) ಲಸಿಕೆ ಎರಡನೇ ಡೋಸ್‌(Second Dose) ವಿತರಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ(Bengaluru Rural District) ಶೇ.100 ರಷ್ಟು ಗುರಿತಲುಪಿದ್ದು, ಈ ಸಾಧನೆ ಮಾಡಿದ ರಾಜ್ಯ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕುರಿತು ಸೋಮವಾರ ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌(Dr K Sudhakar), ರಾಜ್ಯದಲ್ಲೇ(Karnataka) ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಎರಡನೇ ಡೋಸ್‌ ವಿತರಣೆಯಲ್ಲಿ ಶೇ.100 ಗುರಿ ಸಾಧನೆ ಮಾಡಿದೆ. 10 ಜಿಲ್ಲೆಗಳು ಶೇ.90ರಷ್ಟುಮಂದಿಗೆ ಲಸಿಕೆ ನೀಡಿವೆ. ಈ ಸಾಧನೆ ಮಾಡಿ ಜಿಲ್ಲಾಡಳಿತ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ 8.19 ಲಕ್ಷ ಮಂದಿಯನ್ನು ಲಸಿಕೆಗೆಂದು ಗುರುತಿಸಲಾಗಿದ್ದು, ಎಲ್ಲರಿಗೂ ಎರಡೂ ಡೋಸ್‌ ನೀಡಲಾಗಿದೆ. ಕಳೆದ ವಾರವೇ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟು ಕೊರೋನಾ ಲಸಿಕೆ ಅಭಿಯಾನದ ಮೊದಲ ಡೋಸ್‌ ವಿತರಣೆಯಲ್ಲಿ ಶೇ.100 ರಷ್ಟು ಪೂರ್ಣಗೊಂಡಿದೆ. ಸದ್ಯ ಎರಡನೇ ಡೋಸ್‌ ವಿತರಣೆಯಲ್ಲಿ ಶೇ.87 ರಷ್ಟುಗುರಿಸಾಧನೆಯಾಗಿದೆ. ಅರ್ಹದ ಪೈಕಿ 7.55 ಲಕ್ಷ ಮಂದಿ ಮುನ್ನೆಚ್ಚರಿಕಾ ಡೋಸ್‌, 15 ರಿಂದ 17 ವರ್ಷದವರಲ್ಲಿ 22.7 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಮೊದಲ, ಎರಡನೇ ಹಾಗೂ ಮೂರನೇ ಡೋಸ್‌ ಸೇರಿ ಒಟ್ಟಾರೆ 9.54 ಕೋಟಿ ಡೋಸ್‌ನಷ್ಟು ಕೊರೋನಾ ಲಸಿಕೆಯನ್ನು(Vaccine) ರಾಜ್ಯದಲ್ಲಿ ನೀಡಲಾಗಿದೆ.

Latest Videos
Follow Us:
Download App:
  • android
  • ios