ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ತೀವ್ರ ಆತಂಕ ಮೂಡಿಸಿದೆ. ಭಾನುವಾರ ಅಂಕಿ-ಅಂಶ ಈ ಕೆಳಗಿನಂತಿದೆ.
ಬೆಂಗಳೂರು, (ಜೂನ್.07): ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಇಂದು (ಭಾನುವಾರ) ಸಹ ಬರೋಬ್ಬರಿ 239 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.
239 ಪ್ರಕರಣಗಳ ಪೈಕಿ 183 ಅಂತಾರಾಜ್ಯ ಮತ್ತು 9 ವಿದೇಶಿದಿಂದ ಬಂದವರಿಗೆ ಕೊರೋನಾ ಅಟ್ಯಾಕ್ ಆಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5452ಕ್ಕೆ ಏರಿಕೆಯಾಗಿದೆ.
ಕೊರೋನಾ ಹಾಗೂ ಮಾಲಿನ್ಯ ತಡೆಯುವ ಸ್ವದೇಶಿ ಮಾಸ್ಕ್ ನಿರ್ಮಿಸಿದ ವಿದ್ಯಾರ್ಥಿಗಳು!
ರಾಜ್ಯದಲ್ಲಿ ಕೊರೋನಾದಿಂದ ಇದುವರೆಗೆ 61 ಮಂದಿ ಮೃತಪಟ್ಟಿದ್ದು, 2132 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ.
ಇನ್ನು 3,257 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಪ್ರಕಟಿಸಿದ ಹೆಲ್ತ್ ಬುಲೆಟಿನಲ್ಲಿ ಉಲ್ಲೇಖಿಸಲಾಗಿದೆ.
ಶನಿವಾರದ ಜಿಲ್ಲಾವಾರು ಮಾಹಿತಿ
ಕಲಬುರಗಿ-39
ಯಾದಗಿರಿ-39
ಬೆಳಗಾವಿ-38
ಬೆಂಗಳೂರು ನಗರ-23
ದಕ್ಷಿಣ ಕನ್ನಡ-17
ದಾವಣಗೆರೆ-17
ಉಡುಪಿ-13
ಶಿವಮೊಗ್ಗ-12
ವಿಜಯಪುರ-09
ಬೀದರ್--07
ಬಳ್ಳಾರಿ-06
ಬೆಂಗಳೂರು ಗ್ರಾಮಾಂತರ-05
ಹಾಸನ-05
ಧಾರವಾಡ-03
ಗದಗ-02
ಉತ್ತರ ಕನ್ನಡ-02
ಮಂಡ್ಯ- 01
ರಾಯಚೂರು-01
