ನವದೆಹಲಿ(ಜೂ.07): ಕೊರೋನಾ ವೈರಸ್‌ ತಗುಲದಂತೆ ಎಚ್ಚರ ವಹಿಸಲು ಮಾಸ್ಕ್, ಸಾಮಾಜಿಕ ಅಂತರ ಅಗತ್ಯ. ಮಾಸ್ಕ್ ಧಾರಣೆ ಹಲವರಿಗೆ ಉಸಿರಾಟದ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಇದೀಗ ಲವ್ಲಿ ಪ್ರೋಫೆಶನಲ್ ಯುನಿವರ್ಸಿಟಿ ವಿದ್ಯಾರ್ಥಿಗಳು ವಿಶೇಷ ಮಾಸ್ಕ್ ತಯಾರಿಸಿದ್ದಾರೆ. ಈ ಮಾಸ್ಕ್ ಧಾರಣೆ ಮಾಡಿದರೆ ಸರಾಗವಾಗಿ ಉಸಿರಾಟ ಮಾಡಬಹುದು. ನೂತನ ಮಾಸ್ಕ್‌ನಿಂದ ಉಸಿರಾಟದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇಷ್ಟೇ ಅಲ್ಲ ನೈಸರ್ಗಿಕ ಮಾಸ್ಕ್ ಇದೀಗ ಎಲ್ಲರ ಗಮನಸೆಳೆದಿದೆ.

ಕೊರೋನಾ ವಿರುದ್ಧ ಹೋರಾಟ: ಮನೆಯಲ್ಲಿಯೇ ಮಾಸ್ಕ್‌ ತಯಾರಿಸಿ ಮಾದರಿಯಾದ ವಿದ್ಯಾರ್ಥಿನಿ

ನೂತನ ಮಾಸ್ಕ್‌ಗೆ ಆಕ್ಸಿಜೆನೋ ಎಂಬ ಹೆಸರಿಡಲಾಗಿದೆ. ಈ ಮಾಸ್ಕ್ ಕೊರೋನಾ ಮಾತ್ರವಲ್ಲ, ವಾಯು ಮಾಲಿನ್ಯದಿಂದಲೂ ಮುಕ್ತಿ ನೀಡಲಿದೆ. ಇದರಲ್ಲಿ ಕಾರ್ಬನ್ ಡೈ ಆಕ್ಸೈಡ್‌ನಿಂದ ಮುಕ್ತಿ ನೀಡುವ ಪಾಚಿಯನ್ನು ಬಳಸಲಾಗಿದೆ. ಇದರಿಂದ ಗಾಳಿಯಲ್ಲಿನ ಕೆಟ್ಟ ಬ್ಯಾಕ್ಟೀರಿಯಾ, ಕಾರ್ಬನ್ ಡೈ ಆಕ್ಸೈಡ್ ಸೇರಿದಂತೆ ಕೆಟ್ಟ ವಾಯವನ್ನು ಶೇಕಡಾ 99.3 ನಿರ್ನಾಮ ಮಾಡಲಿದೆ.

ಈ ಮದುಮಕ್ಕಳು ಧರಿಸಿದ್ದ ಮಾಸ್ಕ್‌ಗೆ ಸೋಶಿಯಲ್ ಮೀಡಿಯಾ ಫಿದಾ

ಆಕ್ಸಿಜೆನೋ ಮಾಸ್ಕ್ ಹಲವು ಲೇಯರ್ ಮೂಲಕ ಗಾಳಿಯನ್ನು ಸೋಸಲಿದೆ. 4 ಹಂತದ  10 ರಿಂದ 0.44 ಮೈಕ್ರೋಮೀಟರ್ ಲೇಯರ್ ಬಳಸಲಾಗಿದೆ. ಕಾರ್ಬನ್ ಫಿಲ್ಟರ್, Nox ಹಾಗೂ Sox ಫಿಲ್ಟರ್ ಬಳಸಲಾಗಿದೆ. ಈ ಮಾಸ್ಕನ್ನು ಪುನರ್ ಬಳಕೆ ಮಾಡಬಹುದಾಗಿದೆ. ಮಾಸ್ಕ್ ಒಳಗಿರುವ ಪಾಚಿಯುಕ್ತ ಕ್ಯಾಟ್ರಿಡ್ಜ್ ಬದಲಾಯಿಸಿ ಮತ್ತೆ ಬಳಸಬಹುದು. 

ಈ ಕ್ಯಾಟ್ರಿಡ್ಜ್ ನಿರಂತರವಾಗಿ 40 ಗಂಟೆ ಅಥವಾ ಸಾಮಾನ್ಯವಾಗಿ ಬಳಸುತ್ತಿದ್ದರೆ 7 ದಿನ ಬಳಕೆ ಮಾಡಬುಹುದು. ಮಾಸ್ಕ ಬಳಕೆ ಮಾಡಿದ 48 ಗಂಟೆಗಳಲ್ಲಿ ಫಿಲ್ಟರ್ ಕೂಡ ಬದಲಾಯಿಸಬೇಕು.