ಬೆಂಗಳೂರು, (ಜೂನ್.11): ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿದ ಬಿಬಿಎಂಪಿ ಕಾರ್ಪೊರೇಟರ್ ಸೇರಿದಂತೆ ಆತನ ಬೆಂಬಲಿಗರಿಗೆ 5ನೇ ಎಪಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಬೆಂಗಳೂರಿನ ಪಾದರಾಯನಪುರ ಕಾರ್ಪೊರೇಟರ್  ಇಮ್ರಾನ್ ಪಾಷಾ ಹೈಡ್ರಾಮಾ ಸೃಷ್ಟಿಸಿ ಆಸ್ಪತ್ರೆ ಸೇರಿದ್ದರು. ಬಳಿಕ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರನ್ನು ಅದ್ದೂರಿಯಾಗಿ ಬೆಂಬಲಿಗರು ಸ್ವಾಗತ ಮಾಡಿಕೊಂಡಿದ್ದರು. 

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಇಮ್ರಾನ್ ಪಾಷಾ ಅರೆಸ್ಟ್: ಪಾದರಾಯನಪುರದಲ್ಲಿ 144 ಸೆಕ್ಷನ್ 

ಈ ಸಂಬಂಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಲಾಕ್‌ಡೌನ್‌ ನಿಮಯ ಉಲ್ಲಂಘಿಸಿದ ಇಮ್ರಾನ್ ಪಾಷಾ ಸೇರಿ 22 ಜನರನ್ನು ಪೊಲೀಸರು ಮುಂಜಾಗ್ರತಾ ಕ್ರಮಕೈಗೊಂಡು ಬಂಧಿಸಿದ್ದರು.

ಇಂದು (ಗುರುವಾರ) 23 ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ 5ನೇ ಎಪಿಎಂಎಂ ನ್ಯಾಯಾಲಯ  ವಿಚಾರಣೆ ನಡೆಸಿತು. ಬಳಿಕ ಜೂನ್ 22ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಇನ್ನುಳಿದ ನಾಲ್ವರಲ್ಲಿ ಒಬ್ಬನಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ ಚಿಕಿತ್ಸೆ ಒಳಪಡಿಸಲಾಗಿದ್ದು, ಮೂವರು ಆರೋಪಿಗಳ ವರದಿ ಬರುತ್ತಿದ್ದಂತೆ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.