Corona Update ಕರ್ನಾಟಕದಲ್ಲಿ ಕೊರೋನಾ ಕೇಸ್ ಇಳಿಕೆ, ಸಾವಿನ ಸಂಖ್ಯೆ ಏರಿಕೆ

* ಕರ್ನಾಟಕದಲ್ಲಿ ಕೊರೋನಾ ಕೇಸ್ ಇಳಿಕೆ
*  ಸಾವಿನ ಸಂಖ್ಯೆ ಏರಿಕೆ
* ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ

20505 New Coronavirus and 81 deaths In Karnataka on Feb 2 rbj

ಬೆಂಗಳೂರು, (ಫೆ.02): ಕರ್ನಾಟಕದಲ್ಲಿ (Karnataka) ಕೊರೋನಾ ಸೋಂಕಿತರ (Coronavirus) ಸಂಖ್ಯೆ ಇಳಿಕೆ ಆಗುತ್ತಿದ್ದರೂ ಸಾವಿನ ಸಂಖ್ಯೆ ಕಡಿಮೆ ಅಗುತ್ತಿಲ್ಲ. ಕಳೆದ 10 ದಿನದಲ್ಲಿ ಕೊರೋನಾ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ.

 ಇಂದು(ಬುಧವಾರ) 20,505 ಕೊರೋನಾ ಪಾಸಿಟಿವ್‌ ಕೇಸ್ ಪತ್ತೆಯಾಗಿದ್ದು, ಬರೋಬ್ಬರಿ 81 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

Covid Crisis: ಬೆಂಗ್ಳೂರಲ್ಲಿ ಕುಸಿದ ಕೊರೋನಾ ಸೋಂಕು ಕೇಸ್‌

ಈ ಮೂಲಕ ಸೋಂಕಿತರ ಸಂಖ್ಯೆ 3844338ಕ್ಕೆ ಏರಿಕೆಯಾಗಿದೆ. ಈ ಪೈಕಿ ಇಂದು 40903 ಸೇರಿದಂತೆ 3627925 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಪ್ರಸ್ತುತ 1,77,244 ಕೊರೋನಾ ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ ಒಟ್ಟು 8,850 ಹೊಸ ಕೇಸ್ ಪತ್ತೆಯಾಗಿದ್ದು, 13 ಮರಣ ಪ್ರಕರಣ ವರದಿಯಾಗಿದೆ.   ರಾಜ್ಯದಲ್ಲಿ  ಪಾಸಿಟಿವಿಟಿ ರೇಟ್ 12.55%ಕ್ಕೆ ಇಳಿಕೆ ಕಂಡಿದ್ದು, ಕೋವಿಡ್-19 ಮರಣ ಪ್ರಮಾಣ ಶೇ.0.39% ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Coronavirus: 19 ದಿನಗಳ ಬಳಿಕ 2 ಲಕ್ಷಕ್ಕಿಂತ ಕಡಿಮೆ ಕೇಸು, ಎಚ್ಚರಿಕೆ ಹೆಜ್ಜೆ ಇರಲಿ

ಜಿಲ್ಲಾವಾರು ಕೊರೋನಾ ಕೇಸ್
ಬೆಂಗಳೂರನ್ನು ಹೊರತು ಪಡಿಸಿ ಮೈಸೂರಲ್ಲಿ ಅತೀ ಹೆಚ್ಚು, 1,209 ಕೇಸ್ ದಾಖಲಾಗಿದೆ. ಮರಣ ಪ್ರಕರಣದಲ್ಲಿ ಬೆಂಗಳೂರಿನ ಬಳಿಕ ದಕ್ಷಿಣ ಕನ್ನಡದಲ್ಲಿ 10 ಮರಣ ಪ್ರಕರಣ ದಾಖಲಾಗಿದೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 303, ಬಳ್ಳಾರಿ 390, ಬೆಳಗಾವಿ 1,060, ಬೆಂಗಳೂರು ಗ್ರಾಮಾಂತರ 195, ಬೆಂಗಳೂರು ನಗರ 8,850, ಬೀದರ್ 190, ಚಾಮರಾಜನಗರ 364, ಚಿಕ್ಕಬಳ್ಳಾಪುರ 311, ಚಿಕ್ಕಮಗಳೂರು 89, ಚಿತ್ರದುರ್ಗ 208, ದಕ್ಷಿಣ ಕನ್ನಡ 412, ದಾವಣಗೆರೆ 160, ಧಾರವಾಡ 633, ಗದಗ 131, ಹಾಸನ 590, ಹಾವೇರಿ 411, ಕಲಬುರಗಿ 337, ಕೊಡಗು 543, ಕೋಲಾರ 300, ಕೊಪ್ಪಳ 220, ಮಂಡ್ಯ 579, ಮೈಸೂರು 1,209, ರಾಯಚೂರು 165, ರಾಮನಗರ 79, ಶಿವಮೊಗ್ಗ 715, ತುಮಕೂರು 762, ಉಡುಪಿ 542, ಉತ್ತರ ಕನ್ನಡ 595, ವಿಜಯಪುರ 92 ಮತ್ತು ಯಾದಗಿರಿಯಲ್ಲಿ 70 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿನಿಂದಾಗಿ ವಿಜಯಪುರ, ರಾಮನಗರ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ತಲಾ ಒಬ್ಬರು, ದಾವಣಗೆರೆ ಮತ್ತು ಹಾವೇರಿಯಲ್ಲಿ ತಲಾ ಇಬ್ಬರು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತಲಾ ಮೂವರು, ಬಳ್ಳಾರಿ, ಬೀದರ್, ಕಲಬುರಗಿ ಜಿಲ್ಲೆಯಲ್ಲಿ ತಲಾ ನಾಲ್ವರು ಸಾವನ್ನಪ್ಪಿದ್ದಾರೆ.

ಕಳೆದ 10 ದಿನದಲ್ಲಿ 461 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜ.22ರಿಂದ 31ರವರೆಗೆ 461 ಮಂದಿ ಕೊರೋನಾಗೆ ಮರಣಹೊಂದಿದ್ದು, ಇದರಲ್ಲಿ 39 ಮಂದಿ ಚಿಕಿತ್ಸೆಗೆ ಮುನ್ನವೇ ಸಾವನ್ನಪ್ಪಿದ್ದಾರೆ. 39 ಸಾವಿನ ಪೈಕಿ, 32 ಮಂದಿ ಮನೆಯಲ್ಲೇ ಸಾವನ್ನಪ್ಪಿದ್ದು, 7 ಮಂದಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಬಲಿ ಆಗಿದ್ದಾರೆ. ಅಂಕಿ ಅಂಶದ ಪ್ರಕಾರ 100 ಕೊರೊನಾ ಸಾವಿನ ಪೈಕಿ 8 ಮಂದಿ ಮನೆಯಲ್ಲೇ ನಿಧನ ಹೊಂದಿದ್ದಾರೆ.

ರಾಜ್ಯದಲ್ಲಿ ಇಂದು ಒಟ್ಟು 3,37,947 ಮಂದಿಗೆ ಕೊರ)ನಾ ಲಸಿಕೆ ನೀಡಲಾಗಿದೆ. ಒಟ್ಟು 1,63,320 ಸ್ಯಾಂಪಲ್ (ಆರ್‌ಟಿಪಿಸಿಆರ್ 1,25,442 + 37,878 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

Latest Videos
Follow Us:
Download App:
  • android
  • ios