ಗುರುವಾರವೂ ಕೊರೋನಾ ಡಬಲ್ ಸೆಂಚೂರಿ: ಇಲ್ಲಿದೆ ಜಿಲ್ಲಾವಾರು ಮಾಹಿತಿ
ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಗುರುವಾರ ಸಹ ಕೊರೋನಾ ಡಬ್ಬಲ್ ಸೆಂಚೂರಿ ಬಾರಿಸಿದೆ. ಹಾಗಾದ್ರೆ ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು(ಜೂ.11): ಕರ್ನಾಟಕದಲ್ಲಿ ಇಂದು (ಗುರುವಾರ) 204 ಮಂದಿಗೆ ಕೋವಿಡ್-19 ಸೋಂಕು ತಗಲುಲಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ.
ಕೊರೋನಾ ಅಟ್ಟಹಾಸಕ್ಕೆ ಬೆಂಗಳೂರಿನಲ್ಲಿಂದು 4 ಬಲಿ..!
ಸದ್ಯ 6,245 ಮಂದಿ ಸೋಂಕಿತರ ಪೈಕಿ 2976 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪ್ರಸ್ತುತ 3,195 ಸಕ್ರಿಯ ಕೇಸುಗಳಿವೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಿಂದ ತಿಳಿದು ಬಂದಿದೆ.
ಯಾದಗಿರಿ 66, ಉಡುಪಿ 22, ಬೆಂಗಳೂರು ನಗರ 17, ಕಲಬುರಗಿ 16, ರಾಯಚೂರು 15, ಬೀದರ್ 14, ಶಿವಮೊಗ್ಗ 10, ದಾವಣೆಗೆರೆ 9, ಕೋಲಾರ 6, ಮೈಸೂರು 5, ರಾಮನಗರ 5, ವಿಜಯಪುರ 4, ಬಾಗಲಕೋಟೆ 3, ಉತ್ತರಕನ್ನಡ 3, ದಕ್ಷಿಣ ಕನ್ನಡ 2, ಹಾಸನ 2, ಧಾರವಾಡದಲ್ಲಿ 2 ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಪ್ಪಳದಲ್ಲಿ ತಲಾ ಒಂದೊಂದು ಕೊರೋನಾ ಕೇಸ್ ಪತ್ತೆಯಾಗಿದೆ.
ಇನ್ನು ಮಾರಕ ಕೊರೋನಾ ವೈರಸ್ಗೆ ಗುರುವಾರ ಮೂವರು ಅಸುನೀಗಿದ್ದಾರೆ. ಈ ಮೂಲಕ ರಾಜ್ಯದ ಮೃತರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.