Asianet Suvarna News Asianet Suvarna News

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ: ರಾಜ್ಯದ 30 ಜಿಲ್ಲೆಗೂ ತಲಾ ಒಂದೊಂದು ಅವಾರ್ಡ್

ಕರ್ನಾಟಕ ಜಾನಪದ ಅಕಾಡೆಮಿಯ 2019ನೇ ಸಾಲಿನ ಗೌರವ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, 30 ಮಂದಿ ಕಲಾವಿದರು ರಾಜ್ಯ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರ ಹೆಸರುಗಳು  ಈ ಕೆಳಗಿನಂತಿದೆ.

2019 karnataka janapada academy annual award list
Author
Bengaluru, First Published Feb 26, 2020, 6:37 PM IST

ಉಡುಪಿ,(ಫೆ.26): ಕರ್ನಾಟಕ ಜಾನಪದ ಅಕಾಡೆಮಿಯ 2019ನೇ ಸಾಲಿನ ಗೌರವ ವಾರ್ಷಿಕ ಪ್ರಶಸ್ತಿ ಪ್ರಕಟಿಸಸಲಾಗಿದೆ.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿಯವರು ಇಂದು (ಬುಧವಾರ) ಪಟ್ಟಿ ಬಿಡುಗಡೆಗೊಳಿಸಿದ್ದು,  30 ಮಂದಿ ಕಲಾವಿದರು 2019ನೇ ಸಾಲಿನ ರಾಜ್ಯ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಚರಿತ್ರೆ ಸೃಷ್ಟಿಸೋ ಹರಿಪ್ರಿಯಾ ಅವತಾರ, ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಖಾರ; ಫೆ.26ರ ಟಾಪ್ 10 ಸುದ್ದಿ!

ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಒಬ್ಬೊಬ್ಬ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ.

ಪ್ರಶಸ್ತಿ ಪುರಸ್ಕೃತರು

*. ಬೆಂಗಳೂರು ನಗರ- ಗೌರಮ್ಮ (ಜಾನಪದ ಗಾಯಕಿ) 
*. ಬೆಂಗಳೂರು ಗ್ರಾಮಾಂತರ- ಲಕ್ಷ್ಮಮ್ಮ (ಭಜನೆ ಪದಗಳು) 
*. ರಾಮನಗರ- ಅಂಕನಹಳ್ಳಿ ಶಿವಣ್ಣ (ಪೂಜಾ ಕುಣಿತ) 
*. ಕೋಲಾರ- ಅಂಗಡಿ ವೆಂಕಟೇಶಪ್ಪ (ತತ್ವಪದ ) 
*. ತುಮಕೂರು-ರಂಗಯ್ಯ (ಜಾನಪದ ಗೀತೆ)
 *. ದಾವಣಗೆರೆ- ಪಿ ಜಿ ಪರಮೇಶ್ವರಪ್ಪ (ವೀರಗಾಸೆ) 
*. ಚಿತ್ರದುರ್ಗ- ತಿಪ್ಪಣ್ಣ (ಗೊರವರ ಕುಣಿತ) 
*. ಚಿಕ್ಕಬಳ್ಳಾಪುರ- ಮುನಿರೆಡ್ಡಿ (ಜಾನಪದ ಗಾಯನ ) 
*. ಶಿವಮೊಗ್ಗ -ಜಿಸಿ ಮಂಜಪ್ಪ (ಡೊಳ್ಳುಕುಣಿತ )
*. ಮೈಸೂರು- ಮಾದಶೆಟ್ಟಿ (ಕಂಸಾಳೆ ಕುಣಿತ ) 
*. ಮಂಡ್ಯ- ಸ್ವಾಮಿಗೌಡ (ಬೀಸುವ ಪದಗಳು ) 
*. ಚಾಮರಾಜನಗರ ಗೌರಮ್ಮ (ಸೋಬಾನೆ ಪದ ) 
*. ಕೊಡಗು -ಜಿಕೆ ರಾಮು (ಕೊಡವರ ಕುಣಿತ )
*. ಹಾಸನ - ಕಪಿನಿ ಗೌಡ ಕೆ (ಕೋಲಾಟ ) 
*. ಚಿಕ್ಕಮಗಳೂರು- ಡಾಕ್ಟರ್ ಎಚ್ ಸಿ ಈಶ್ವರ ನಾಯಕ (ನಾಟಿವೈದ್ಯ ) 
*. ಉಡುಪಿ- ಸಾಧು ಪಾಣಾರ (ಭೂತ ಕೋಲ ) * ದಕ್ಷಿಣ ಕನ್ನಡ -ರುಕ್ಮಯ ಗೌಡ (ಸಿದ್ದವೇಷ ) 
*. ಬೆಳಗಾವಿ -ಸಂಕಮ್ಮ (ಸಂಪ್ರದಾಯದ ಪದ )
*. ಬಾಗಲಕೋಟೆ-ರುಕ್ಮಿಣಿ ಮಲ್ಲಪ್ಪ (ಹರನಾಳ ಮದುವೆ ಹಾಡು ) 
*. ಧಾರವಾಡ-ಮಲ್ಲಯ್ಯ ರಾಚಯ್ಯ (ತೋಟಗಂಟಿ ಜಾನಪದ ಸಂಗೀತ) 
*. ಹಾವೇರಿ-ಹನುಮಂತಪ್ಪ ಧಾರವಾಡ (ಭಜನೆ ಕೋಲಾಟ) 
*. ಗದಗ-ನಾಗರಾಜ ನೀ ಜಕ್ಕಮ್ಮ (ನವರ್ ಗೀಗಿ ಪದ) 
*. ವಿಜಯಪುರ- ನಿಮ್ಮವ್ವ ಕೆಂಚಪ್ಪ ಗುಬ್ಬಿ (ಸೋಬಾನೆ ಪದ ) 
*. ಉತ್ತರಕನ್ನಡ ಶ್ರೀಮತಿ ಹುಸೇನಬಿ ಬುಡನ್ ಸಾಬ್ ಸಿದ್ದಿ ಸಿದ್ದಿ ಡಮಾಮಿ ನೃತ್ಯ 
*. ಕಲಬುರ್ಗಿ-ಗಂಗಾಧರಯ್ಯ ಅಗ್ಗಿಮಠ (ಪುರುವಂತಿಕೆ ) 
*. ಬೀದರ್ - ತುಳಸಿ ರಾಮ ಭೀಮರಾವ್ ಸುತಾರ್ (ಆಲದ ಎಲೆಯಿಂದ ಸಂಗೀತ) 
*. ಕೊಪ್ಪಳ- ಶಾಂತವ್ವ ಲಕ್ಷ್ಮಪ್ಪ ಲಮಾಣಿ (ಲಮಾಣಿ ನೃತ್ಯ) 
*. ರಾಯಚೂರು- ಶ್ರೀ ಸೂಗಪ್ಪ ನಾಗಪ್ಪ (ತತ್ವಪದ ) 
*. ಬಳ್ಳಾರಿ -ವೇಷಗಾರ ಮೋತಿ ರಾಮಣ್ಣ (ಹಗಲುವೇಷ) 
*. ಯಾದಗಿರಿ - ಶಿವಮೂರ್ತಿ ತನಿಖೆದಾರ (ಗೀಗಿ ಪದ) ಈ ಬಾರಿಯ ಜನಪದ ತಜ್ಞ ಪ್ರಶಸ್ತಿ 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

 

Follow Us:
Download App:
  • android
  • ios