*  ಜಾತಿ ಹೆಸರಲ್ಲಿ ಜನರ ದಿಕ್ಕುತಪ್ಪಿಸುತ್ತಿರುವ ಸರ್ಕಾರ*  ಪ್ರಶ್ನಿಸುವವರನ್ನು ಬಂಧಿಸಿ, ಬೆದರಿಸುವ ತಂತ್ರ*  ಬಂಡವಾಳಶಾಹಿಗಳ ಕೈಯಲ್ಲಿ ಪ್ರಜಾಪ್ರಭುತ್ವ: ನ್ಯಾ. ನಾಗಮೋಹನ್‌ ದಾಸ್‌ 

ಬೆಂಗಳೂರು(ಜೂ.26): ದೇಶದ ಸಾರ್ವಭೌಮತೆ ಅಪಾಯದಲ್ಲಿದ್ದು, ಆಡಳಿತ ನಡೆಸುತ್ತಿರುವ ಸರ್ಕಾರವೇ ಜನರನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ದಿಕ್ಕುತಪ್ಪಿಸುತ್ತಿದೆ ಎಂದು ಹೈಕೋರ್ಚ್‌ನ ನಿವೃತ್ತ ನ್ಯಾಯಮೂರ್ತಿ ಡಾ. ಎಚ್‌.ಎನ್‌.ನಾಗಮೋಹನ್‌ ದಾಸ್‌ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಜನ ಸಂಗ್ರಾಮ ಪರಿಷತ್‌-ಜನತಂತ್ರ ಪ್ರಯೋಗಶಾಲಾ, ಜನಾಂದೋಲನಗಳ ಮಹಾಮೈತ್ರಿ, ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ, ಸೊಸೈಟಿ ಫಾರ್‌ ಕಮ್ಯುನಲ್‌ ಹಾರ್ಮನಿ ಸಂಘಟನೆಗಳ ಜಂಟಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಬಿಕ್ಕಟ್ಟು-ನಾಗರಿಕ ಸಮಾಜದ ಪಾತ್ರ ಕುರಿತ ಎರಡು ದಿನಗಳ ದುಂಡು ಮೇಜಿನ ಸಭೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಬೇಕು: ಎಸ್‌.ಆರ್‌.ಹಿರೇಮಠ

ದೇಶದಲ್ಲಿ ಧರ್ಮ ಮತ್ತು ರಾಜಕಾರಣ ಎರಡೂ ಒಂದೇ ಆಗಿವೆ. ಆಳುವ ಸರ್ಕಾರ ಅಥವಾ ರಾಜಕಾರಣಿಗಳು ಧರ್ಮವನ್ನು ಮುಂದಿಟ್ಟು ಜನರನ್ನು ಮಂಕು ಮಾಡುತ್ತಿದ್ದಾರೆ. ಪ್ರಶ್ನಿಸುವವರನ್ನು ಬಂಧಿಸಿ, ಬೆದರಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಬಂಡವಾಶಾಹಿಗಳ ಕೈಗೆ ಕೊಟ್ಟಿದ್ದಾರೆ. ದೇಶದ ಶೇಕಡ 82ರಷ್ಟುಸಂಸದರು ಕೋಟ್ಯಧಿಪತಿಗಳಾಗಿದ್ದಾರೆ. ಶೇ.45ರಷ್ಟುಮಂದಿ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಶೇ.52.5ರಷ್ಟುಮಂದಿ ವಂಶಪಾರಂಪರ್ಯವಾಗಿ ಅಧಿಕಾರಕ್ಕೇರಿದ್ದಾರೆ ಎಂದರು.

ದೇಶದ ಒಳಗೆ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬಿಕ್ಕಟ್ಟುಗಳಿಗೆ ಧೈರ್ಯವಾಗಿ ಪ್ರತಿಕ್ರಿಯಿಸಲಾಗದ ಸ್ಥಿತಿಗೆ ನಮ್ಮ ಕೇಂದ್ರ ಸರ್ಕಾರ ತಲುಪಿದೆ. ಇದಕ್ಕೆ ರಷ್ಯಾ-ಉಕ್ರೇನ್‌ ನಡುವೆ ಯುದ್ಧ ಆರಂಭದ ಒಂದು ತಿಂಗಳವರೆಗೂ ಭಾರತ ಸರ್ಕಾರ ಮೌನ ವಹಿಸಿದ್ದೆ ನೈಜ ಉದಾಹರಣೆಯಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೇ ದೇಶ ಎದುರಿಸುತ್ತಿರುವ ಬಿಕ್ಕಟ್ಟುಗಳೂ ಬಲವಾಗುತ್ತಿರುವುದು ಬೇಸರದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಅರ್ಜಿ ಸಲ್ಲಿಸಿ ಫೀ ಕಟ್ಟದ್ದಕ್ಕೆ ಹೈಕೋರ್ಟ್‌ ಕ್ಷಮೆಯಾಚಿಸಿದ ಎಸ್‌.ಆರ್‌. ಹಿರೇಮಠ

ಜಮಾತೆ ಇಸ್ಲಾಮಿ ಹಿಂದ್‌ ಕರ್ನಾಟಕ ಘಟಕದ ಕಾರ್ಯದರ್ಶಿ ಮೊಹಮ್ಮದ್‌ ಯೂಸುಫ್‌ ಕನ್ನಿ, ಸೊಸೈಟಿ ಫಾರ್‌ ಕಮ್ಯುನಲ್‌ ಹಾರ್ಮನಿಯ ಅಧ್ಯಕ್ಷ ಪ್ರೊ.ಆನಂದ್‌ ಕುಮಾರ್‌, ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿಯ ಪ್ರಧಾನ ಕಾರ್ಯದರ್ಶಿ ಎನ್‌.ಡಿ.ಪಾಂಚೋಲಿ, ಜನ ಸಂಗ್ರಾಮ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ಕಾನ್ಫೆಡರೇಷನ್‌ ಆಫ್‌ ಇಂಡಿಯನ್‌ ಕ್ರಿಶ್ಚಿಯನ್‌ ಕಾರ್ಯದರ್ಶಿ ಆಂಟೋನಿ ಜೋಸೆಫ್‌ ಉಪಸ್ಥಿತರಿದ್ದರು.

ದೇಶದಲ್ಲಿ 20 ಪಟ್ಟು ಹೆಚ್ಚು ತುರ್ತುಸ್ಥಿತಿ: ಹಿರೇಮಠ

ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿಯ ರಾಷ್ಟ್ರೀಯ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಮಾತನಾಡಿ,‘ಬಿಜೆಪಿ ಸರ್ಕಾರವು ತನ್ನ ಆಡಳಿತದಲ್ಲಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ. ಸಂಘಪರಿವಾರಗಳು ಜನರನ್ನು ಧರ್ಮದ ಹೆಸರಿನಲ್ಲಿ ದಿಕ್ಕುತಪ್ಪಿಸುತ್ತಿವೆ. ಅಧಿಕಾರದಲ್ಲಿರುವವರು ದುಡಿಯುವ ವರ್ಗದ ಜನರ ಬದುಕನ್ನು ದುರ್ಭರಗೊಳಿಸುತ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಕೆಡಿಸುವ ಕೆಲಸ ಆಗುತ್ತಿದೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದಾಗ ದೇಶದಾದ್ಯಂತ ಪ್ರಬಲವಾದ ಹೋರಾಟ ನಡೆದಿತ್ತು. ಈಗ ಅದಕ್ಕಿಂತಲೂ 20 ಪಟ್ಟು ಹೆಚ್ಚು ತೀವ್ರ ಸ್ವರೂಪದ ತುರ್ತು ಪರಿಸ್ಥಿತಿ ದೇಶದಲ್ಲಿ ಅಘೋಷಿತವಾಗಿ ಜಾರಿಯಲ್ಲಿದ್ದು, ಜನರನ್ನೂ ಒಗ್ಗೂಡಿಸಿಕೊಂಡು ಹೋರಾಟ ಮಾಡಬೇಕಿದೆ ಎಂದರು.