ನವದೆಹಲಿ[ಫೆ.14]: ಲ್ಯಾಂಡಿಂಗ್‌ ವೇಳೆ ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಬದಿಯ ಲೈಟ್‌ಗಳಿಗೆ ಹಾನಿ ಮಾಡಿದ್ದಕ್ಕೆ ಸ್ಪೈಸ್‌ ಜೆಟ್‌ ಸಂಸ್ಥೆಗೆ ಸೇರಿದ ಇಬ್ಬರು ಪೈಲಟ್‌ಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ನಾಲ್ಕೂವರೆ ತಿಂಗಳುಗಳ ಕಾಲ ಅಮಾನತುಗೊಳಿಸಿದೆ.

ಮಂಗ ಓಡಿಸಲು ಕರಡಿಯಾದ ವಿಮಾನ ನಿಲ್ದಾಣ ಸಿಬ್ಬಂದಿ!

2019ರ ಅಕ್ಟೋಬರ್‌ 31ರಂದು ದುಬೈನಿಂದ ಬಂದಿದ್ದ ಬೋಯಿಂಗ್‌ 737 ವಿಮಾನವನ್ನು ಲ್ಯಾಂಡ್‌ ಮಾಡುವ ವೇಳೆ, ರನ್‌ವೇ ಬದಿಯ ಮೂರು ಲೈಟ್‌ಗಳು ಹಾನಿಗೀಡಾಗಿದ್ದವು. ಪ್ರಕರಣ ಸಂಬಂದ ಪೈಲಟ್‌ಗಳಿಗೆ ಶೋಕಾಸ್‌ ನೊಟೀಸು ಜಾರಿ ಮಾಡಲಾಗಿತ್ತು. ಆದರೆ ಉತ್ತರ ಕೊಡಲು ವಿಫಲರಾಗಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ.

ಘಟನೆ ನಡೆದ ದಿನದಿಂದಲೇ ಜಾರಿಗೆ ಬರುವಂತೆ ಅವರ ಪರವಾನಿಗೆಯನ್ನು ನಾಲ್ಕುವರೆ ತಿಂಗಳುಗಳ ಕಾಲ ರದ್ದು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅರ್ನಬ್ ಆಯ್ತು, ಈಗ ಪೋಸ್ಟ್‌ ಕಾರ್ಡ್ ಸಂಪಾದಕನಿಗೆ ಅವಮಾನ