ಬೆಂಗಳೂರು (ನ.03): ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕಾರ್ಯದರ್ಶಿಯಾಗಿ ಲೇಖಕ ಕೆ.ರಾಜಕುಮಾರ್‌ ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ ನೃಪತುಂಗ ಕನ್ನಡ ಬಳದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅವರನ್ನು ನೇಮಕ ಮಾಡಲಾಗಿದೆ. 

ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿ ಶೇಖರಗೌಡ ಮಾಲಿ ಪಾಟೀಲ್‌ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ತೆರವಾದ ಸ್ಥಾನಗಳಿಗೆ ಕಾರ್ಯಕಾರಿ ಸಮಿತಿ ನಿರ್ಣಯದಂತೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಅವರು ಕೆ.ರಾಜಕುಮಾರ್‌ ಮತ್ತು ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅವರಿಗೆ ಕನ್ನಡ ಬಾವುಟ ನೀಡುವ ಮೂಲಕ ನೇಮಕ ಮಾಡಿದರು.

'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನಿ ಕನ್ನಡವಾಗಿರು'ಎಂಬಂತಿದ್ದರು ಡಾ. ರಾಜ್ ...

ಚುನಾವಣೆಗೆ ಸಿದ್ಧತೆ: ಬರುವ 2021ರ ಮಾರ್ಚ್ ತಿಂಗಳ ಬಳಿಕ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕಸಾಪ ಕೇಂದ್ರ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಚುನಾವಣಾ ಪ್ರಚಾರ ಚುರುಕುಗೊಳಿಸಿದ್ದಾರೆ.

ಹಾಲಿ ಕಾರ್ಯಕಾರಿ ಸಮಿತಿಯ ಗೌರವ ಕಾರ್ಯದರ್ಶಿಯಾಗಿದ್ದ ವ.ಚ.ಚನ್ನೇಗೌಡ ಮತ್ತು ಸಂಘ-ಸಂಸ್ಥೆಗಳ ಪ್ರತಿನಿಧಿ ಶೇಖರಗೌಡ ಮಾಲಿ ಪಾಟೀಲ್‌ ಅವರು ಕೂಡಾ ಅಧ್ಯಕ್ಷ ಗಾದಿ ಆಕಾಂಕ್ಷಿಗಳಾಗಿದ್ದಾರೆ. 

ಚುನಾವಣಾ ಕೆಲಸದಲ್ಲಿ ಪರಿಷತ್‌ ಕೆಲಸಗಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆಯಾಗಿ ರಾಜೀನಾಮೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಚುನಾವಣಾ ಪ್ರಚಾರವನ್ನು ಮತ್ತಷ್ಟುಚುರುಕುಗೊಳಿಸುವುದಾಗಿ ಕನ್ನಡಪ್ರಭಕ್ಕೆ ಅಧ್ಯಕ್ಷಗಾದಿ ಆಕಾಂಕ್ಷಿ ವ.ಚ.ಚನ್ನೇಗೌಡ ತಿಳಿಸಿದ್ದಾರೆ.