Asianet Suvarna News Asianet Suvarna News

ಎಚ್‌1ಎನ್‌1 : ರಾಜ್ಯದಲ್ಲಿ ಹೆಚ್ಚುತ್ತಿರುವ ಸಾವಿನ ಸಂಖ್ಯೆ

ಶಂಕಿತ ಎಚ್‌1ಎನ್‌1 ಸೋಂಕಿಗೆ ರಾಜ್ಯದಲ್ಲಿ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಶಂಕಿತ ಎಚ್‌1ಎನ್‌1 ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. 

2 More Swine Flu Death In Karnataka
Author
Bengaluru, First Published Oct 10, 2018, 7:57 AM IST
  • Facebook
  • Twitter
  • Whatsapp

ಬೀದರ್‌/ಮಂಡ್ಯ :  ಶಂಕಿತ ಎಚ್‌1ಎನ್‌1 ಸೋಂಕಿಗೆ ರಾಜ್ಯದಲ್ಲಿ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಶಂಕಿತ ಎಚ್‌1ಎನ್‌1 ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬೀದರ್‌ ಜಿಲ್ಲೆಯ ಔರಾದ್‌ನ ಹೊರಂಡಿ ಗ್ರಾಮದ ಕೃಷಿ ಕಾರ್ಮಿಕ ವಿಜಯಕುಮಾರ ಶಿಂಧೆ, ಮಂಡ್ಯದ ಸಾವಿತ್ರಮ್ಮ(45) ಮೃತರು. 

ಬೀದರ್‌ನಲ್ಲಿ ಇತ್ತೀಚೆಗಷ್ಟೇ ಶಂಕಿತ ಎಚ್‌1ಎನ್‌1 ಸೋಂಕಿಗೆ ಇಬ್ಬರು ಬಲಿಯಾಗಿದ್ದರು. ಇದರ ಬೆನ್ನಲ್ಲೇ ಈಗ ವಿಜಯ ಕುಮಾರ್‌ ಮೃತಪಟ್ಟಿದ್ದಾರೆ. ಕೆಲದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವಿಜಯಕುಮಾರ್‌ ಅವರು ಮಹಾರಾಷ್ಟ್ರದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಇನ್ನು ಶಂಕಿತ ಎಚ್‌1ಎನ್‌1ರಿಂದ ಬಳಲುತ್ತಿದ್ದ ಸಾವಿತ್ರಮ್ಮ ಅವರನ್ನು ಮಂಡ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿರಲಿಲ್ಲ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು ಈಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Follow Us:
Download App:
  • android
  • ios