ಬೆಂಗಳೂರು, [ಮಾ.21]: ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಹೊರಗಡೆ ಬರಲು ಹೆದರಿ ಮನೆಯೊಳಗೆ ಸೇರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಜಾಗೃತಾ ಕ್ರಮ ವಹಿಸಿದ್ದು, ಒಟ್ಟಿಗೆ ತಿಂಗಳ ಆಹಾರ ಧಾನ್ಯ ವಿತರಣೆ ಮಾಡಲು ತೀರ್ಮಾನಿಸಿದೆ.

ಈ ಬಗ್ಗೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಹಾರ ಕೊರತೆ ಬಗ್ಗೆ ಬಹಳ ಜನ ನನಗೆ ಕರೆ ಬಂದಿದೆ. ಇದರಿಂದ 2 ತಿಂಗಳ ಆಹಾರ ಧಾನ್ಯ ನೀಡಲು ತಿರ್ಮಾನಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜನತಾ ಕರ್ಫ್ಯೂ ಬಗ್ಗೆ ಯಡಿಯೂರಪ್ಪ ವಿಶೇಷ ಮನವಿ: ಏನು ಹೇಳಿದ್ದಾರೆ ನೊಡಿ..!

ರಾಜ್ಯದಲ್ಲಿ ಹೆಚ್ಚಿನ ಜನರು ಪಡಿತರ ಮೇಲೆ ಅವಲಂಬನೆಯಾಗಿದೆ. ಅವರಿಗೆ ಕಷ್ಟವಾಗಬಾರದು ಎನ್ನುವ ದೃಷ್ಟಿಯಿಂದ ಏಪ್ರಿಲ್ ಮತ್ತು ಮೇ ತಿಂಗಳ ಆಹಾರ ಧಾನ್ಯ ನೀಡಲಾಗುವುದು ಎಂದರು.

 ಮಾರ್ಚ್ 23ರಿಂದ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ವಿತರಣೆ ಮಾಡೋದಾಗಿ ಸಚಿವ ಗೋಪಾಲಯ್ಯ ಹೇಳಿದ್ದಾರೆ. ಈ ಹಿಂದೆ ಬಿಪಿಎಸ್ ಕಾರ್ಡ್ ಮತ್ತು ಎಪಿಎಲ್‌ಗೆ ಏನೆಲ್ಲಾ ಪಡಿತರ ಸಿಗುತ್ತಿತ್ತೋ, ಅದೇ ಮಾದರಿಯಲ್ಲಿ ಒಟ್ಟಿಗೆ ಎರಡು ತಿಂಗಳ ಪಡಿತರ ದೊರೆಯಲಿದೆ.

ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಈಗಾಗಲೇ 20ಕ್ಕೆ ಏರಿಕೆಯಾಗಿದ್ದು,  ಪರಿಸ್ಥಿತಿ ಬಿಗಡಾಯಿಸವು ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇದರಿಂದ ಜನರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಪರಿಣಾಮ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಒಳ್ಳೆಯ ಸಂಗತಿ.