ಬೆಂಗಳೂರು [ಜ.17]:  ರಾಜ್ಯದಲ್ಲಿ ಪ್ರವಾಹ ಸೇರಿದಂತೆ ವಿವಿಧ ನೈಸರ್ಗಿಕ ವಿಕೋಪಗಳಿಂದ ಕಳೆದ ವರ್ಷ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರು.ನಂತೆ ಬಿಡುಗಡೆ ಮಾಡಿರುವ 5.18 ಕೋಟಿ ರು. ಹಣವನ್ನು ಮೃತರ ವಾರಸುದಾರರಿಗೆ ಜಮೆ ಮಾಡುವಂತೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. 

ನೆರೆ ಪರಿಹಾರ ಪಡೆದ ರೈತರಿಗೆ ಸಿಎಂ ಪತ್ರ!...

ಕಳೆದ ಆಗಸ್ಟ್‌ನಲ್ಲಿ ಎದುರಿಸಿದ್ದ ಭೀಕರ ಪ್ರವಾಹ, ಅತಿವೃಷ್ಟಿಹಾಗೂ ಅದಕ್ಕೂ ಮುನ್ನ ಪೂರ್ವ ಮುಂಗಾರಿನಲ್ಲಿ ಉಂಟಾಗಿದ್ದ ಬರ ಸಿಡಿಲು ಮತ್ತಿತರ ನೈಸರ್ಗಿಕ ವಿಕೋಪಗಳಿಂದ ಒಟ್ಟು 247 ಜನರು ರಾಜ್ಯದಲ್ಲಿ ಮೃತಪಟ್ಟಿದ್ದರು.

ರೋಣ: ನೆರೆ ಸಂತ್ರಸ್ತರ ಭರವಸೆ ಮರೆತ ಜಿಲ್ಲಾಧಿಕಾರಿ...

ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದರ ಆಧಾರದಲ್ಲಿ ಕೇಂದ್ರ ಸರ್ಕಾರ ಪ್ರತಿ ಮೃತರ ಕುಟುಂಬಕ್ಕೆ ಎರಡು ಲಕ್ಷ ರು.ನಂತೆ ಒಟ್ಟು 5.18 ಕೋಟಿ ರು. ಬಿಡುಗಡೆ ಮಾಡಿದ್ದು, ಇದನ್ನು ನೇರ ನಗದು ವರ್ಗಾವಣೆ (ಆರ್‌ಟಿಜಿಎಸ್‌) ಮೂಲಕ ಮೃತರ ವಾರಸುದಾರರ ಬ್ಯಾಂಕ್‌ ಖಾತೆಗೆ ಜಮೆ ಮಾಡಲು ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ.