ಬೆಂಗಳೂರು :  ಸ್ಯಾಂಡಲ್ ವುಡ್ ನಿರ್ಮಾಪಕ ಶೈಲೆಂದ್ರ ಬಾಬುಗೆ ಕೋಟಿ ಕೋಟಿ ವಂಚನೆ ಮಾಡಲಾಗಿದೆ. 

ಬಿ.ಎಚ್.ಬಸವರಾಜು ಎನ್ನುವ ವ್ಯಕ್ತಿ ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬುಗೆ ವಂಚನೆ ಮಾಡಿದ್ದಾರೆ. ಆಸ್ತಿ ಖರೀದಿ ಮಾಡಬೇಕು ಎಂದು ಬಾಬು ಬಳಿ ಬಸವರಾಜು 2 ಕೋಟಿ ರು. ಸಾಲ ಪಡೆದಿದ್ದರು. ಬಳಿಕ ಕೊಟ್ಟ ಹಣವನ್ನು ಮರಳಿ ಕೇಳಿದರೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. 

ಹಣ ವಾಪಸು ಕೇಳಿದರೆ ನಿನ್ನನ್ನು ಮುಗಿಸುವುದಾಗಿ ಬಸವರಾಜು ಸಹಚರರು ಬೆದರಿಕೆ ಹಾಕಿದ್ದಾರೆ. 

ಈ ಹಿನ್ನಲೆಯಲ್ಲಿ ಶೈಲೇಂದ್ರ ಬಾಬು ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಐಪಿಸಿ 506, 420  ಹಾಗೂ 34 ರ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.