ರಾಜ್ಯದಲ್ಲಿ ಗುರುವಾರ 195 ಮಂದಿಗೆ ಸೋಂಕು ತಗುಲಿದ್ದು, 233 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. 2763 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4.1 ರಷ್ಟು ದಾಖಲಾಗಿದೆ.

ಬೆಂಗಳೂರು (ಅ.28): ರಾಜ್ಯದಲ್ಲಿ ಗುರುವಾರ 195 ಮಂದಿಗೆ ಸೋಂಕು ತಗುಲಿದ್ದು, 233 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. 2763 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4.1 ರಷ್ಟು ದಾಖಲಾಗಿದೆ. ಬುಧವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಎರಡು ಸಾವಿರ ಕಡಿಮೆ ನಡೆದಿವೆ. ಆದರೂ, ಹೊಸ ಪ್ರಕರಣಗಳು 113 ಏರಿಕೆಯಾಗಿವೆ (ಬುಧವಾರ 82 ಪ್ರಕರಣ, ಸಾವು ಶೂನ್ಯ).

ಎರಡು ದಿನಗಳಿಂದ 100 ಆಸುಪಾಸಿನಲ್ಲಿದ್ದ ಪ್ರಕರಣಗಳು ಸದ್ಯ 195ಕ್ಕೆ ತಲುಪಿವೆ. ಅಲ್ಲದೆ, ಪಾಸಿಟಿವಿಟಿ ದರ ಕೂಡ ಹೆಚ್ಚಿದೆ. ಇತ್ತ ಸಕ್ರಿಯ ಸೋಂಕು ಪ್ರಕರಣಗಳು ಎರಡು ಸಾವಿರಕ್ಕಿಂತ ಕಡಿಮೆಯಾಗಿದ್ದು, ಸದ್ಯ 1915 ಸಕ್ರಿಯ ಸೋಂಕಿತರಿದ್ದಾರೆ. ಈ ಪೈಕಿ 25 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ಐಸಿಯು, 5 ಮಂದಿ ಆಕ್ಸಿಜನ್‌, 10 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 1890 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೋನಾ ಹೊಸ ತಳಿ: ಕರ್ನಾಟಕದಲ್ಲಿ ಕಟ್ಟೆಚ್ಚರ

ಬೆಂಗಳೂರಿನಲ್ಲಿ 173 ಕೇಸ್‌: ಗುರುವಾರ ಬೆಂಗಳೂರಿನಲ್ಲಿ 173 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ 8 ಜಿಲ್ಲೆಗಳಲ್ಲಿ ಬೆರಳೆಣಿಕೆ, 21 ಜಿಲ್ಲೆಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ 1706 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 11 ಮಂದಿ ಆಸ್ಪತ್ರೆಯಲ್ಲಿ, ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 154 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 26 ಮಂದಿ ಮೊದಲ ಡೋಸ್‌, 20 ಮಂದಿ ಎರಡನೇ ಡೋಸ್‌ ಮತ್ತು 180 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 1323 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 1142 ಆರ್‌ಟಿಪಿಸಿಆರ್‌ ಹಾಗೂ 181 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Corona Crisis: ಕರ್ನಾಟಕದಲ್ಲಿ 82 ಮಂದಿಗೆ ಕೊರೋನಾ: ಒಂದೂ ಸಾವಿಲ್ಲ

1112 ಕೋವಿಡ್‌ ಕೇಸು, 1 ಸಾವು: ದೇಶ​ದಲ್ಲಿ ದಾಖ​ಲಾದ ಕೋವಿಡ್‌ ಪ್ರಕ​ರ​ಣ​ಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾ​ಯ​ವಾದ 24 ಗಂಟೆ​ಗ​ಳಲ್ಲಿ ಒಟ್ಟು 1,112 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ 1 ಸೋಂಕಿ​ತ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕ​ರ​ಣ​ಗಳ ಸಂಖ್ಯೆ 20,821ಕ್ಕೆ ಇಳಿ​ಕೆ​ಯಾ​ಗಿದೆ. ದೈನಂದಿನ ಪಾಸಿ​ಟಿ​ವಿಟಿ ದರವು ಶೇ.0.77ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ.1.06ರಷ್ಟಿದೆ. ಇದೇ ವೇಳೆ ಚೇತರಿಕೆ ದರ ಶೇ.98.77ರಷ್ಟಿದೆ. ದೇಶ​ದಲ್ಲಿ ಈವರೆಗೆ ಒಟ್ಟು 4.46 ಕೋಟಿ ಕೋವಿಡ್‌ ಪ್ರಕ​ರ​ಣ​ಗಳು ಹಾಗೂ 5.28 ಲಕ್ಷ ಸಾವು ದಾಖ​ಲಾ​ಗಿದೆ. ದೇಶದಲ್ಲಿ ಈವರೆಗೆ 219.57 ಕೋಟಿ ಡೋಸ್‌ ಲಸಿ​ಕೆ​ಗಳನ್ನು ವಿತ​ರಿಸಲಾಗಿದೆ.