ಕರ್ನಾಟಕದಲ್ಲಿ 1694 ಕೋವಿಸ್ ಕೇಸ್, 1 ಸಾವು
ಶನಿವಾರ 1,694 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, 1741 ಮಂದಿ ಗುಣಮುಖರಾಗಿದ್ದಾರೆ. ರಾಯಚೂರಿನಲ್ಲಿ 70 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ.
ಬೆಂಗಳೂರು(ಆ.07): ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆಗಳು ತಗ್ಗಿದ ಹಿನ್ನೆಲೆ ಹೊಸ ಪ್ರಕರಣಗಳು ಕೂಡ ಒಂದಿಷ್ಟುಇಳಿಕೆಯಾಗಿವೆ. ಶನಿವಾರ 1,694 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, 1741 ಮಂದಿ ಗುಣಮುಖರಾಗಿದ್ದಾರೆ. ರಾಯಚೂರಿನಲ್ಲಿ 70 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ. 28 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.6ರಷ್ಟುದಾಖಲಾಗಿದೆ. ಶುಕ್ರವಾರಕ್ಕೆ ಹೋಲಿದರೆ ಸೋಂಕು ಪರೀಕ್ಷೆಗಳು ಐದು ಸಾವಿರ ಕಡಿಮೆ ನಡೆಸಲಾಗಿದೆ. ಹೀಗಾಗಿ, ಹೊಸ ಪ್ರಕರಣಗಳು 348 ಇಳಿಕೆಯಾಗಿವೆ.( ಶುಕ್ರವಾರ 2,042 ಕೇಸ್, ಸಾವು ಎರಡು)
ಪರೀಕ್ಷೆಗಳು 33 ಸಾವಿರಕ್ಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಪ್ರಸಕ್ತ ವಾರ ಎರಡು ಬಾರಿ ಕೊರೋನಾ ಸೋಂಕು ಪ್ರಕರಣಗಳು ಎರಡು ಸಾವಿರ ಗಡಿ ದಾಟಿದ್ದವು. ಪರೀಕ್ಷೆ ತಗ್ಗಿದ ಹಿನ್ನೆಲೆ ಹೊಸ ಪ್ರಕರಣಗಳು ಕೂಡ ತಗ್ಗಿವೆ. ಶನಿವಾರ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 1,105 ಪತ್ತೆಯಾಗಿವೆ. ಉಳಿದಂತೆ ಅತಿ ಹೆಚ್ಚು ಧಾರವಾಡ 98, ಬೆಳಗಾವಿ 80, ಬಳ್ಳಾರಿ ಮತ್ತು ಮೈಸೂರು ತಲಾ 48, ಶಿವಮೊಗ್ಗ ಮತ್ತು ಉತ್ತರಕನ್ನಡ ತಲಾ 32 ಮಂದಿಗೆ ಸೋಂಕು ತಗುಲಿದೆ. 10 ಜಿಲ್ಲೆಗಳಲ್ಲಿ ಬೆರಳೆಣಿಕೆ, ಚಿತ್ರದುರ್ಗದಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.
ಸ್ವಯಂ ಪ್ರೇರಣೆಯಿಂದ ಕೊವಿಡ್ ಸುರಕ್ಷತಾ ಕ್ರಮ ಅನುಸರಿಸಿ ; ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 11,355ಕ್ಕೆ ಹೆಚ್ಚಿವೆ. ಈ ಪೈಕಿ 55 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಂದಿ ಐಸಿಯು, 6 ಮಂದಿ ಆಕ್ಸಿಜನ್, 44 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 11,300 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.