Asianet Suvarna News Asianet Suvarna News

ಸ್ವಯಂ ಪ್ರೇರಣೆಯಿಂದ ಕೊವಿಡ್ ಸುರಕ್ಷತಾ ಕ್ರಮ ಅನುಸರಿಸಿ ; ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಸ್ವಯಂ ಪ್ರೇರಣೆಯಿಂದ ಕೊವಿಡ್ ಸುರಕ್ಷತಾ ಕ್ರಮ ಅನುಸರಿಸಿ. ಕೊವಿಡ್ ಹೆಚ್ಚಳವಾಗುತ್ತಿದೆ  ಮುಂಜಾಗೃತೆ ವಹಿಸಲು ಮುನ್ನೆಚ್ಚರಿಕೆ ಲಸಿಕೆ ಪಡೆಯಿರಿ : ಜಿಲ್ಲಾಧಿಕಾರಿ ಮನವಿ

Selfmotivated to follow covid safety measures DC gurudatt hegde rav
Author
Bangalore, First Published Jul 29, 2022, 4:30 PM IST | Last Updated Jul 29, 2022, 4:30 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಜು.29):  ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಮತ್ತೇ ಕೊವಿಡ್-19 ನಿಧಾನವಾಗಿ ಎರುಗತ್ತಿಯಲ್ಲಿ ಸಾಗುತ್ತಿದೆ. ಜುಲೈ 28ಕ್ಕೆ 148 ಸಕ್ರೀಯ ಕೊವಿಡ್ ಪ್ರಕರಣಗಳಿದ್ದು 06 ಜನರು ತೀವ್ರನಿಗಾ(ICU)ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜುಲೈ ತಿಂಗಳಲ್ಲಿ ಒಟ್ಟು 03 ಜನ ಕೊವಿಡ್ ಕಾರಣದಿಂದ ಮರಣ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಕೊವಿಡ್ ಪ್ರಕರಣ(Covid Case)ಗಳ ಹೆಚ್ಚಳದ ಹಿನ್ನೆಲೆಯಲ್ಲಿ ಸಾರ್ವಜನಿಕರ ಜಾಗೃತಿಗಾಗಿ ಪ್ರಕಟಣೆ ನೀಡಿರುವ ಅವರು ಜನರು ಸ್ವಯಂ ಪ್ರೇರಣೆಯಿಂದ ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಮಾಸ್ಕ ಕಡ್ಡಾಯವಾಗಿ ಧರಿಸಬೇಕು. ಜನಜಂಗುಳಿ ಇರುವ ಸ್ಥಳಗಳಿಂದ ಸಾಧ್ಯವಾದಷ್ಟು ದೂರವಿರಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಕೊವಿಡ್ ರೋಗ ನಿರೋಧಕ ಲಸಿಕೆಗಳನ್ನು ಮತ್ತು ಮುನ್ನೆಚ್ಚರಿಕಾ ಡೊಸ್‍ನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 

ಮಂಕಿಪಾಕ್ಸ್ ಅಲರ್ಟ್‌; ಪುರುಷ ಸಲಿಂಗಕಾಮಿಗಳು ಲೈಂಗಿಕ ಸಂಬಂಧ ಮಿತಿಗೊಳಿಸಿ, WHO ವಾರ್ನಿಂಗ್‌

ಜೂನ್ ತಿಂಗಳಲ್ಲಿ 17,040 ಕೊವಿಡ್ ಪತ್ತೆಗಾಗಿ ಸ್ಯಾಂಪಲ್ ಪರೀಕ್ಷೆ(Sample Test)ಗೆ ಒಳಪಡಿಸಲಾಗಿತ್ತು. ಇದಲ್ಲಿ ಪಾಸಿಟಿವ್ 70 ಪ್ರಕರಣಗಳು ಬಂದಿವೆ. 51 ಜನ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು ಯಾವುದೇ ಕೋವಿಡ್ ಸಾವು ಸಂಭವಿಸಿಲ್ಲ ಆದರೆ ಜುಲೈ 28 ರವರೆಗೆ 15,377 ಸ್ಯಾಂಪಲ್‍ಗಳ ಕೋವಿಡ್ ಪರೀಕ್ಷೆ ಮಾಡಲಾಗಿದ್ದು ಇದರಲ್ಲಿ 478 ಜನರಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು ಪತ್ರೆ ಆಗಿವೆ. 349 ಜನ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಮೂರು ಜನ ಮರಣ ಹೊಂದಿದ್ದಾರೆ. ಮತ್ತು 6 ಜನ ತೀವ್ರ ನಿಗಾ (ಐಸಿಯು) ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಜುಲೈ 28 ರವರೆಗೆ ಜಿಲ್ಲೆಯಲ್ಲಿ 148 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 15 ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು 133 ಜನ ಹೊಮ್ ಐಸೋಲೇಶನ್‍ದಲ್ಲಿದ್ದಾರೆ. ಕಳೆದ ಒಂದು ವಾರದ ಕೋವಿಡ್ ಪಾಜಿಟಿವಿಟಿ ದರ 5.56% ಆಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

 ಕೊವಿಡ್ ಪರೀಕ್ಷಾ ಸ್ಥಳಗಳು : ಜಿಲ್ಲಾ ಆಸ್ಪತ್ರೆ, ಕಿಮ್ಸ್(KIMS), ಎಸ್‍ಡಿಎಂ ಆಸ್ಪತ್ರೆ(SDM Hospital) ಮತ್ತು ಎಲ್ಲಾ ತಾಲೂಕಾ ಆಸ್ಪತ್ರೆ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಅವಳಿ ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಕೋವಿಡ್ ಲಕ್ಷಣಗಳಿರುವ ಜನರ ಸ್ಯಾಬ್ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಕೋವಿಡ್ ಲಸಿಕಾಕರಣ: 18 ವರ್ಷ ಮೇಲ್ಪಟ್ಟವರು: ಜಿಲ್ಲೆಯಲ್ಲಿ ಕೋವಿಡ್ ರೋಗ ನಿರೋಧಕ ಲಸಿಕಾಕರಣ ಪ್ರಗತಿ ಉತ್ತಮವಾಗಿದೆ. ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 14,44,000 ಜನರಿಗೆ ಲಿಸಿಕೆ ನೀಡುವ ಗುರಿಹೊಂದಲಾಗಿತ್ತು. ಅದರಂತೆ ಜುಲೈ 27 ರವರೆಗೆ 15,07,901 ಜನರಿಗೆ ಪ್ರಥಮ ಡೊಸ್ ಲಸಿಕೆ ನೀಡಿ, ಶೇ. 104.43 ರಷ್ಟು ಪ್ರಗತಿ ಆಗಿದೆ. ಮತ್ತು 15,11,071 ಜನರಿಗೆ ಎರಡನೇ ಡೊಸ್ ಲಸಿಕೆ ನೀಡಿ ಶೇ.104.64 ರಷ್ಟು ಪ್ರಗತಿ ಸಾಧಿಸಲಾಗಿದೆ.

ಕೋವಿಡ್‌-19 ಚಿಕಿತ್ಸೆಗೆ ಇನ್ಮುಂದೆ ಕೋಳಿ ಮೊಟ್ಟೆ ಬಳಸ್ಬೋದು!

12 ರಿಂದ 14 ವರ್ಷದ ಮಕ್ಕಳ ಲಸಿಕಾಕರಣ: ಜಿಲ್ಲೆಯಲ್ಲಿರುವ 12 ರಿಂದ 14 ವರ್ಷದ ಸುಮಾರು 60,020 ಮಕ್ಕಳಿಗೆ ಕಾರ್ಬೆವ್ಯಾಕ್ಸ್ (Corbevax) ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಈಗಾಗಲೇ 71,102 ಮಕ್ಕಳಿಗೆ ಮೊದಲ ಡೊಸ್ ಲಿಸಿಕೆ ನೀಡಿ, ಶೇ.118.46 ರಷ್ಟು ಗುರಿ ಸಾಧಿಸಲಾಗಿದೆ. ಮತ್ತು 51,092 ಮಕ್ಕಳಿಗೆ ಎರಡನೇಯ ಡೊಸ್ ಲಸಿಕೆ ನೀಡಿ ಶೇ. 85.12 ರಷ್ಟು ಗುರಿ ಸಾಧಿಸಲಾಗಿದ್ದು, ಲಸಿಕಾಕರಣ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

15 ರಿಂದ 17 ವರ್ಷದ ಮಕ್ಕಳು: 15 ರಿಂದ 17 ವರ್ಷ ವಯೋಮಾನದ ಸುಮಾರು 95,774 ಮಕ್ಕಳಿಗೆ ಕೋವಿಡ್ ರೋಗ ನಿರೋಧಕ ಕಾರ್ಬೆವ್ಯಾಕ್ಸ್ (Corbevax) ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಇದರಲ್ಲಿ 83,625 ಮಕ್ಕಳಿಗೆ ಮೊದಲ ಡೊಸ್ ನೀಡಿ, ಶೇ.87.31 ರಷ್ಟು ಹಾಗೂ 75,914 ಮಕ್ಕಳಿಗೆ ಎರಡನೇ ಡೊಸ್ ನೀಡಿ, ಶೇ. 79.26 ರಷ್ಟು ಪ್ರಗತಿ ಸಾಧಿಸಲಾಗಿದೆ.

ಶಾಲೆಗಳಿಗೆ ರಜೆ ಹಾಗೂ ಇತರ ಕಾರಣಗಳಿಂದ ಮಕ್ಕಳ ಲಸಿಕಾಕರಣದಲ್ಲಿ ಸ್ವಲ್ಪಮಟ್ಟಿಗೆ ಕುಂಠಿತವಾಗಿತ್ತು. ಈಗ ಪ್ರತಿ ಶಾಲೆಗೆ ಒರ್ವ ಶಿಕ್ಷಕನನ್ನು ನೊಡೆಲ್ ಅಧಿಕಾರಿಯಾಗಿ ನೇಮಿಸಿ, ಅವರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ ಪಿಡಿಓ ಅವರೊಂದಿಗೆ ಸಮನ್ವಯ ಸಾಧಿಸಿ, ಆರೋಗ್ಯ ಇಲಾಖೆಯಿಂದ ಪ್ರತಿ ಮಗುವಿಗೆ ಲಸಿಕೆ ನೀಡುವಂತೆ ಕ್ರಮ ವಹಿಸಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ (ಬೂಸ್ಟರ್ ಡೊಸ್) ಲಸಿಕೆಯನ್ನು ತಪ್ಪದೆ ಪಡೆಯಿರಿ: ಕೋವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ಲಸಿಕೆ ಪಡೆದಿರುವ 18 ವರ್ಷ ಮೇಲ್ಪಟ ಎಲ್ಲರೂ ಕಡ್ಡಾಯವಾಗಿ ಬೂಸ್ಟರ್ ಡೊಸ್ ಪಡೆಯಬೇಕು ಕೋವ್ಯಾಕ್ಸಿನ್ ಅಥವಾ ಕೋವಿಶಿಲ್ಡ್ ಲಸಿಕೆ ಎರಡೂ ಡೊಸ್ ಪಡೆದು, ಆರು ತಿಂಗಳಾಗಿದ್ದರೆ ಮಾತ್ರ ಬೂಸ್ಟರ್ ಡೊಸ್ ಪಡೆಯಲು ಅರ್ಹರಾಗಿರುತ್ತಾರೆ. ಮುನ್ನೆಚ್ಚರಿಕೆ ಡೊಸ್ ಪಡೆಯಲು ಮೊದಲು ಮತ್ತು ಎರಡನೇ ಡೊಸ್ ಲಸಿಕೆ ಪಡೆಯುವಾಗ ನೊಂದಾಯಿಸಿದ್ದ ಮೊಬೈಲ್ ಸಂಖ್ಯೆ ಹೇಳಿದರೆ ಸಾಕು. ಮತ್ತು ಜಿಲ್ಲಾ ಆಸ್ಪತ್ರೆ, ಕಿಮ್ಸ್, ರೈಲ್ವೆ ಆಸ್ಪತ್ರೆ ಸೇರಿದಂತೆ ನಗರ ಮತ್ತು ಗ್ರಾಮೀಣ ಭಾಗದ ಎಲ್ಲ ಹಂತದ ಸರಕಾರಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ (ಬೂಸ್ಟರ್) ಡೊಸ್‍ನ್ನು ಉಚಿತವಾಗಿ ನೀಡಲಾಗುತ್ತಿದೆ. 

ಜಿಲ್ಲೆಯ 18 ವರ್ಷ ಮೇಲ್ಪಟ್ಟ ಸುಮಾರು 12,37,432 ಜನರಿಗೆ ಮುನ್ನೆಚ್ಚರಿಕೆ ಡೊಸ್ ನೀಡುವ ಗುರಿ ಹೊಂದಲಾಗಿದೆ. ಜುಲೈ 27ರ ವರೆಗೆ 1,48,942 ಜನರಿಗೆ ಲಸಿಕೆ ನೀಡಿ ಶೇ. 12.04 ರಷ್ಟು ಮಾತ್ರ ಪ್ರಗತಿ ಆಗಿದೆ. ಇದಕ್ಕೆ ಸಾರ್ವಜನಿಕರ ಉದಾಸೀನತೆಯೂ ಕಾರಣವಾಗಿದೆ. ಕೋವಿಡ್ ಹೋಗಿದೆ ಎಂಬ ಮನೋಭಾವದಿಂದ ಮುನ್ನೆಚರಿಕೆ ಡೊಸ್ ಪಡೆಯುವದನ್ನು ನಿರ್ಲಕ್ಷಿಸುತ್ತಿದ್ದಾರೆ. ಇವುಗಳಿಂದಾಗಿ ಕೋವಿಡ್ ಹೆಚ್ಚಳವಾಗಿದೆ. ಮುಂಜಾಗೃತ ಕ್ರಮಗಳನ್ನು ಅನುಸರಿಸುವದರೊಂದಿಗೆ ಕಡ್ಡಾಯವಾಗಿ ಲಸಿಕೆಯನ್ನು ಪ್ರತಿಯೊಬ್ಬರು ಪಡೆಯಬೇಕು. ಮಾಸ್ಕ್ ಧರಿಸಿ ಸಂಚರಿಸಬೇಕು. ಪರಸ್ಪರ ಸಾಮಾಜಿಕ ಅಂತರ ಕಾಪಾಡಲು ಪ್ರಯತ್ನಿಸಬೇಕು. ಸಾರ್ವಜನಿಕರು ಸಹಕಾರ ನೀಡಿದರೆ ಕೊವಿಡ್ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಲಸಿಕೆ ದಾಸ್ತಾನು: ಜುಲೈ 29ಕ್ಕೆ ಅನ್ವಯಿಸಿದಂತೆ ಜಿಲ್ಲೆಯಲ್ಲಿ 29,630 ಡೊಸ್ ಕೋವ್ಯಾಕ್ಸಿನ್, 13,220 ಕೋವಿಶೀಲ್ಡ್ ಮತ್ತು 3,680 ಕಾರ್ಬೆವ್ಯಾಕ್ಸ್ ಲಸಿಕೆಯ ದಾಸ್ತಾನು ಇದೆ. ಸಾರ್ವಜನಿಕರು ಅಗತ್ಯ ಲಸಿಕೆಯನ್ನು ಪಡೆಯುವ ಮೂಲಕ ಆರೋಗ್ಯ ಸುರಕ್ಷತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ...

Latest Videos
Follow Us:
Download App:
  • android
  • ios