Corona Crisis: ರಾಜ್ಯದಲ್ಲಿ 7 ವಾರ ಬಳಿಕ 1500ಕ್ಕೆ ತಗ್ಗಿದ ಕೊರೋನಾ ಕೇಸ್‌

*  ಸದ್ಯ 31 ಸಾವಿರ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ
*  ಪಾಸಿಟಿವಿಟಿ ದರ ಶೇ.2.2 ರಷ್ಟು ದಾಖಲು
*  ಬೆಳಗಾವಿಯಲ್ಲಿ ಕೊರೋನಾಗೆ 2 ವರ್ಷದ ಮಗು ಬಲಿ

1568 New Coronavirus Cases on Feb 14th in Karnataka grg

ಬೆಂಗಳೂರು(ಫೆ.15):  ರಾಜ್ಯದಲ್ಲಿ(Karnataka) ಏಳು ವಾರಗಳ ಬಳಿಕ ಕೊರೋನಾ(Coronavirus) ಸೋಂಕಿನ ಹೊಸ ಪ್ರಕರಣಗಳು ಒಂದೂವರೆ ಸಾವಿರಕ್ಕೆ ಇಳಿಕೆಯಾಗಿದ್ದು, ಪಾಸಿಟಿವಿಟಿ ದರ(Positivity Rate) ಶೇ.2ಕ್ಕೆ ಕುಸಿದಿದೆ. ಅದರಲ್ಲೂ ರಾಜಧಾನಿಯಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ.

ಸೋಮವಾರ 1,568 ಮಂದಿ ಸೋಂಕಿತರಾಗಿದ್ದು, 25 ಸೋಂಕಿತರು ಸಾವಿಗೀಡಾಗಿದ್ದಾರೆ(Death). 6,025 ಮಂದಿ ಗುಣಮುಖರಾಗಿದ್ದಾರೆ. ಸದ್ಯ 31 ಸಾವಿರ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 69000 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.2.2 ರಷ್ಟು ದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಪರೀಕ್ಷೆಗಳು 33 ಸಾವಿರ ಕಡಿಮೆಯಾಗಿದ್ದು, ಹೀಗಾಗಿ, ಹೊಸ ಸೋಂಕಿತರ 804 ಇಳಿಕೆಯಾಗಿವೆ(ಭಾನುವಾರ 2372 ಪ್ರಕರಣ). ಬೆಂಗಳೂರಿನಲ್ಲಿ(Bengaluru) 754 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 305 ಕಡಿಮೆಯಾಗಿವೆ (ಭಾನುವಾರ 1059).

Corbevax Vaccine: 12-18 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್‌ ಲಸಿಕೆ: ಅನುಮತಿ ಕೋರಿಕೆ

ಸೋಂಕಿತರ ಸಾವು ಕಡಿಮೆಯಾಗುತ್ತಿದ್ದು, ಸೋಮವಾರ ಬೆಳಗಾವಿಯಲ್ಲಿ(Belagavi) 2 ವರ್ಷ ಮಗು(Child) ಸಾವಿಗೀಡಾಗಿದೆ. ಉಳಿದಂತೆ ನಾಲ್ವರು ವಯಸ್ಕರು, 20 ಮಂದಿ 60 ವರ್ಷ ಮೇಲ್ಪಟ್ಟವರಿದ್ದಾರೆ. ಅತಿ ಹೆಚ್ಚು ಬೆಂಗಳೂರಿನಲ್ಲಿ 5, ಬೆಳಗಾವಿ, ಬೀದರ್‌, ಧಾರವಾಡ, ತುಮಕೂರು ಹಾಗೂ ಉಡುಪಿ ತಲಾ ಇಬ್ಬರು, ಎಂಟು ಜಿಲ್ಲೆಗಳಲ್ಲಿ ಒಬ್ಬ ಸೋಂಕಿತರ ಸಾವು ವರದಿಯಾಗಿದೆ.

ಬೆಂಗಳೂರು ಹೊರತು ಪಡಿಸಿದರೆ ಯಾವ ಜಿಲ್ಲೆಯಲ್ಲೂ 100ರ ಗಡಿದಾಟಿಲ್ಲ. ಬೆಳಗಾವಿ, ಮೈಸೂರು, ಬೆಳಗಾವಿ, ಶಿವಮೊಗ್ಗದಲ್ಲಿ 50ಕ್ಕೂ ಹೆಚ್ಚು ಮಂದಿಗೆ, ಬೆಂಗಳೂರು ಗ್ರಾಮಾಂತರ, ಬೀದರ್‌, ಗದಗದಲ್ಲಿ ಬೆರಳೆಣಿಕೆಯಷ್ಟುಮಂದಿಗೆ ಸೋಂಕು ತಗುಲಿದೆ.

ಕೋವಿಡ್‌ ಮತ್ತಷ್ಟು ಇಳಿಕೆ: 34113 ಹೊಸ ಕೇಸ್‌!

ನವದೆಹಲಿ: ದೇಶದಲ್ಲಿ (India) ಕೊರೋನಾ ಪ್ರಕರಣಗಳ (Corona Cases) ಸಂಖ್ಯೆ ಮತ್ತಷ್ಟುಇಳಿಮುಖವಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 34,113 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು 42 ದಿನದ ಕನಿಷ್ಠ. ಇದೇ ಅವಧಿಯಲ್ಲಿ 346 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದು 27 ದಿನದ ಕನಿಷ್ಠ.

ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 4.78 ಲಕ್ಷಕ್ಕೆ ಕುಸಿದಿದೆ. ಇದು 37 ದಿನಗಳ ಕನಿಷ್ಠ. ಚೇತರಿಕೆ ಪ್ರಮಾಣ ಶೇ.97.68ಕ್ಕೆ ಏರಿಕೆಯಾಗಿದೆ. ದೈನಂದಿನ ಸೋಂಕಿನ ಪ್ರಮಾಣ ಶೇ.3.19ರಷ್ಟಿದೆ. ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.26 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 5,09,011ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 4.16 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ ದೇಶಾದ್ಯಂತ 172.95 ಕೋಟಿ ಡೋಸ್‌ ಲಸಿಕೆ (Covid Vaccine) ವಿತರಣೆ ಮಾಡಲಾಗಿದೆ.

Covid Crisis: 50 ಸಾವಿರಕ್ಕಿಂತ ಕೆಳಗಿಳಿದ ಕೋವಿಡ್‌ ಕೇಸು: 40 ದಿನಗಳ ಕನಿಷ್ಠ

ಮಾಸ್ಕ್‌ ಕಡ್ಡಾಯ ನಿಯಮ ರದ್ದತಿಗೆ ಮಹಾರಾಷ್ಟ್ರ ಚಿಂತನೆ: 

ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ಮತ್ತಷ್ಟು ತಗ್ಗಿದೆ. ಪಾಸಿಟಿವಿಟಿ ದರ(Positivity Rate)  ಶೇ.5ಕ್ಕಿಂತ ಕೆಳಕ್ಕಿಳಿದು, ಶೇ.3.47ರಷ್ಟು ದಾಖಲಾಗಿದೆ. ಶುಕ್ರವಾರ 58,077 ಕೋವಿಡ್‌ ಕೇಸ್‌ಗಳು ದೃಢಪಟ್ಟಿವೆ. ಕರ್ನಾಟಕದಲ್ಲೂ(Karnataka) ಪಾಸಿಟಿವಿಟಿ ದರ ಶೇ.3.47ಕ್ಕೆ ಇಳಿದಿದ್ದು, 3976 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಕೋವಿಡ್‌(Covid-19) ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೂರದ ಸ್ವೀಡನ್‌ ಸರ್ಕಾರ(Government of Sweden) ಸೋಂಕು ಪತ್ತೆ ಪರೀಕ್ಷೆಯನ್ನೇ ಕೈಬಿಟ್ಟಿದ್ದರೆ ಇತ್ತ ಮಹಾರಾಷ್ಟ್ರ ಸರ್ಕಾರ(Government of Maharashtra)  ರಾಜ್ಯದಲ್ಲಿ ಮಾಸ್ಕ್‌(Mask) ಧರಿಸುವುದನ್ನು ಕಡ್ಡಾಯ ಎಂಬ ನಿಯಮ ಕೈಬಿಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಒಂದು ವೇಳೆ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ, ಅದು ಇಂಥ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ. 
 

Latest Videos
Follow Us:
Download App:
  • android
  • ios