Asianet Suvarna News Asianet Suvarna News

ರಾಜ್ಯದ 14 ರೈಲ್ವೆ ಸ್ಟೇಷನಲ್ಲಿ ಸೋಂಕಿತರಿಗೆ ಟ್ರೀಟ್‌ಮೆಂಟ್‌: ಎಲ್ಲೆಲ್ಲಿ?

ರಾಜ್ಯದ 14 ರೈಲ್ವೆ ಸ್ಟೇಷನಲ್ಲಿ ಸೋಂಕಿತರಿಗೆ ಟ್ರೀಟ್‌ಮೆಂಟ್‌| ಲಘು ರೋಗ ಲಕ್ಷಣ, ಶಂಕಿತರಿಗೆ ಬೋಗಿಗಳಲ್ಲಿ ಚಿಕಿತ್ಸೆ|  ಆಸ್ಪತ್ರೆಗಳ ಮೇಲೆ ಒತ್ತಡ ಕಡಿತಕ್ಕೆ ಕೇಂದ್ರದ ಯೋಜನೆ

14 Railway stations  of karnataka to provide coronavirus treatment
Author
Bangalore, First Published May 7, 2020, 7:15 AM IST

ನವದೆಹಲಿ(ಮೇ.07): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಗೊಂಡು 50000ದ ಗಡಿ ದಾಟಿದ ಬೆನ್ನಲ್ಲೇ, ಸೋಂಕಿತರ ಚಿಕಿತ್ಸೆಗೆಂದು ಬಳಕೆ ಮಾಡಲು ಸಿದ್ಧಪಡಿಸಲಾಗಿದ್ದ ರೈಲ್ವೆ ಬೋಗಿಗಳನ್ನು ಮೊದಲ ಬಾರಿಗೆ ಬಳಕೆ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಇಂಥ ಬೋಗಿಗಳನ್ನು ನಿಯೋಜಿಸಲು ದೇಶಾದ್ಯಂತ 215 ರೈಲ್ವೆ ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಕರ್ನಾಟಕದ 14 ನಿಲ್ದಾಣಗಳು ಸೇರಿವೆ. ಆದರೆ ಎಂದಿನಿಂದ ಈ ಬೋಗಿಗಳನ್ನು ಬಳಸಲಾಗುವುದು ಎಂಬುದರ ಕುರಿತು ಅದು ಯಾವುದೇ ಮಾಹಿತಿ ನೀಡಿಲ್ಲ.

ಶಂಕಿತರು/ಸೋಂಕಿತರ ಸೂಕ್ತ ನಿರ್ವಹಣೆ ಮಾರ್ಗಸೂಚಿ ದಾಖಲೆಗಳ ಹೆಸರಿನಲ್ಲಿ ಆರೋಗ್ಯ ಸಚಿವಾಲಯ ಬುಧವಾರ ಕೆಲ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರಲ್ಲಿ ಎಲ್ಲೆಲ್ಲಿ, ಯಾವ್ಯಾವ ಸ್ವರೂಪದಲ್ಲಿ ರೈಲ್ವೆ ಬೋಗಿಗಳನ್ನು ಬಳಸಬೇಕು, ಅದರ ನಿರ್ವಹಣೆ ಹೇಗಿರಬೇಕು ಎಂಬೆಲ್ಲಾ ಮಾಹಿತಿಗಳನ್ನು ಅದರಲ್ಲಿ ನೀಡಲಾಗಿದೆ.

ರಾಜ್ಯದ 75% ಸೋಂಕಿತರಿಗೆ ಕೊರೋನಾ ಲಕ್ಷಣವೇ ಇಲ್ಲ!

ಆರೋಗ್ಯ ಸಚಿವಾಲಯದ ಯೋಜನೆ ಅನ್ವಯ, ಶಂಕಿತರು ಮತ್ತು ಅತ್ಯಂತ ಸಣ್ಣ ಪ್ರಮಾಣದಲ್ಲಿ ಸೋಂಕು ಇರುವುದು ಖಚಿತವಾದ ವ್ಯಕ್ತಿಗಳನ್ನು ಇಂಥ ರೈಲ್ವೆ ಬೋಗಿಗಳಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುವುದು. ಶಂಕಿತರಿಗೆ ಮತ್ತು ಸೋಂಕಿತರಿಗೆ ಪ್ರತ್ಯೇಕ ಬೋಗಿಗಳನ್ನು ಒದಗಿಸಲಾಗುವುದು. ಒಂದು ವೇಳೆ ಅಲ್ಲಿ ರೋಗಿಯ ಆರೋಗ್ಯ ಹದಗೆಟ್ಟಲ್ಲಿ ಅವರನ್ನು ಸಮೀಪದ ಸೂಚಿತ ಕೊರೋನಾ ಆಸ್ಪತ್ರೆಗೆ ರವಾನಿಸಿ, ಹೆಚ್ಚಿನ ಚಿಕಿತ್ಸೆ ಕಲ್ಪಿಸಲಾಗುವುದು. ಇದರಿಂದಾಗಿ ಹಾಲಿ ನಿಯೋಜಿತ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಸರ್ಕಾರ ಇದೆ.

ಇಂಥ ಬೋಗಿಗಳ ನಿಯೋಜನೆಗೆ ಪ್ರತಿ ರಾಜ್ಯಕ್ಕೂ ವಿಶೇಷ ನೋಡಲ್‌ ಅಧಿಕಾರಿಗಳ ನಿಯೋಜಿಸಲಾಗುವುದು. ಬೋಗಿಗಳನ್ನು ನಿಲ್ದಾಣಗಳ ನಿಯೋಜಿತ ಪ್ರದೇಶದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ನಿಯೋಜಿಸಲಾಗುವುದು. ಬಳಿಕ ಅದನ್ನು ಸ್ಥಳಿಯ ಜಿಲ್ಲಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗುವುದು. ಇಂಥ ಬೋಗಿಗಳ ಭದ್ರತೆಯನ್ನು ರೈಲ್ವೆ ರಕ್ಷಣಾ ಪಡೆ ವಹಿಸಿಕೊಳ್ಳಲಿದೆ.

ರಾಜ್ಯದಲ್ಲಿ ನಿನ್ನೆ 20 ಜನಕ್ಕೆ ಸೋಂಕು, ಒಂದೂ ಸಾವಿಲ್ಲ!

ಕೇಂದ್ರ ಸರ್ಕಾರದ ಸೂಚನೆ ಅನ್ವಯ ಈಗಾಗಲೇ ದೇಶಾದ್ಯಂತ 20000 ಬೋಗಿಗಳನ್ನು ಮಾರ್ಪಡಿಸುವ ಕೆಲಸ ನಡೆದಿದ್ದು, ಇವುಗಳಲ್ಲಿ 3.2 ಲಕ್ಷ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಸೌಲಭ್ಯ ಕಲ್ಪಿಸಲಾಗುವುದು. ಈ ರೈಲಿನ ಬೋಗಿಗಳಲ್ಲಿ ರೋಗಿಗಳ ಜೊತೆಗೆ ವೈದ್ಯರಿಗೂ ಉಳಿದುಕೊಳ್ಳುವ ವ್ಯವಸ್ಥೆ ಇರುತ್ತದೆ.

Follow Us:
Download App:
  • android
  • ios