ಖಾಲಿಯಿರುವ 13,000 ಚಾಲಕ, ನಿರ್ವಾಹಕರ ನೇಮಕಕ್ಕೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿಯಿರುವ 13 ಸಾವಿರ ಚಾಲಕ/ನಿರ್ವಾಹಕರನ್ನು ನೇಮಕ ಮಾಡಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ತುಮಕೂರು (ಆ.24): ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿಯಿರುವ 13 ಸಾವಿರ ಚಾಲಕ/ನಿರ್ವಾಹಕರನ್ನು ನೇಮಕ ಮಾಡಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 39,817 ಚ.ಮೀ. ಅಳತೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಮಗಾರಿ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಉತ್ತರ ಕರ್ನಾಟಕದ ಎಲ್ಲಾ ಬಸ್ಸುಗಳು ತುಮಕೂರು ನಗರದ ಮೂಲಕವಾಗಿಯೇ ಸಂಚರಿಸುವುದರಿಂದ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸುಮಾರು 4.17 ಎಕರೆ ಪ್ರದೇಶದಲ್ಲಿ 111.46 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಬಸ್ ನಿಲ್ದಾಣ 2024ರ ಜನವರಿ ಮಾಹೆಯ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿದೆ. ಪ್ರಸ್ತುತ ಶೇಕಡಾ 78.10ರಷ್ಟುಕಾಮಗಾರಿ ಪೂರ್ಣಗೊಂಡಿದ್ದು, 74.38 ಕೋಟಿ ರು.. ಖರ್ಚಾಗಿದೆ. ಒಟ್ಟಾರೆ 9754.49 ಚ.ಮೀ. ಅಳತೆಯಲ್ಲಿ ಬೇಸ್‌ಮೆಂಟ್, 6292.331 ಚ.ಮೀ. ಅಳತೆಯಲ್ಲಿ ಲೋಯರ್ ಗ್ರೌಂಡ್ ಫೆಲೕರ್, 5066.08 ಚ.ಮೀ. ಅಳತೆಯಲ್ಲಿ ಅಪ್ಪರ್ ಗ್ರೌಂಡ್ ಫೆä್ಲೕರ್, 3629.16 ಚ.ಮೀ. ಅಳತೆಯಲ್ಲಿ ಮೊದಲ/ಎರಡನೇ/ಮೂರನೇ ಮಹಡಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಕನ್ನಡ ಶಾಲೆಯಿಂದ ಚಂದ್ರಯಾನದವರೆಗೆ: ಗದಗ ಮೂಲದ ವಿಜ್ಞಾನಿ ಸುಧೀಂದ್ರ ಬಿಂದಗಿ ರೋಚಕ ಜರ್ನಿ
ನಗರದ ಈ ನೂತನ ಬಸ್ ನಿಲ್ದಾಣದಲ್ಲಿ ಲೋಯರ್ ಗ್ರೌಂಡ್ ಫೆಲೕರ್‌ನಲ್ಲಿ 30 ಹಾಗೂ ಅಪ್ಪರ್ ಗ್ರೌಂಡ್ ಫೆಲೕರ್‌ನಲ್ಲಿ 35 ಸೇರಿದಂತೆ ಒಟ್ಟು 65 ಬಸ್‌ಗಳು ನಿಲ್ಲಲು ಅವಕಾಶ ಕಲ್ಪಿಸಲಾಗಿದೆ. ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆಯಲ್ಲದೇ, ಮೇಲ್ಮಹಡಿಗಳಲ್ಲಿ ಕೆಎಸ್‌ಆರ್‌ಟಿಸಿ ಆಡಳಿತ ಕಚೇರಿ, ಶಾಪಿಂಗ್ ಮಾಲ್, ಕುಡಿಯುವ ನೀರು, ಶೌಚಾಲಯ, ಲಿಫ್‌್ಟ, ಮಳೆನೀರು ಕೊಯ್ಲು, ಮೆಡಿಕಲ್ ಸೆಂಟರ್, ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್, ಕ್ಲಾಕ್ ರೂಂ, ಫೈರ್ ಸೇಫ್ಟಿ, ಮಹಿಳೆಯರಿಗಾಗಿ ರೆಸ್ಟ್ ರೂಂ, ಬೇಬಿ ಕೇರ್ ಕೊಠಡಿಗಳ ಸೌಕರ್ಯವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ರದೇಶವನ್ನು ಮುಂದಿನ ಯೋಜನೆಗಳಿಗಾಗಿ ಕಾಯ್ದಿರಿಸುಲಾಗುವುದು. ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಯಾವುದೇ ಅನುದಾನದ ಕೊರತೆ ಇಲ್ಲ ಎಂದು ತಿಳಿಸಿದರು.
ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳಲು ಬಸ್ಸುಗಳಿಗಾಗಿ ಪರದಾಡಬೇಕಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು, ಕೊರೋನಾ ಸಂದರ್ಭದಲ್ಲಿ ಬಸ್ಸುಗಳ ಕಾರ್ಯಾಚರಣೆ ಸಂಖ್ಯೆ ಕಡಿಮೆಯಾಗಿದ್ದರಿಂದ ಈ ಪರಿಸ್ಥಿತಿ ಉಂಟಾಗಿದೆ. ಈ ಹಿಂದೆ 2016ರಲ್ಲಿ ಸಾರಿಗೆ ಸಚಿವರಾಗಿದ್ದಾಗ ಚಾಲಕ/ನಿರ್ವಾಹಕರನ್ನು ನೇಮಕಾತಿ ಮಾಡಲಾಗಿತ್ತು. ನಂತರ 7 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಈ ನಿಟ್ಟಿನಲ್ಲಿ ಹೊಸ ನೇಮಕಾತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೇ 5000 ಹೊಸ ಬಸ್ಸುಗಳ ಖರೀದಿಗೆ ಮುಖ್ಯಮಂತ್ರಿಗಳು 500 ಕೋಟಿ ರು.ಗಳ ಅನುದಾನ ಒದಗಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರ ಶಾಸಕ ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಕೆಎಸ್‌ಆರ್‌ಟಿಸಿ ಎಂ.ಡಿ. ಅನ್ಬುಕುಮಾರ್ ಹಾಗೂ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಉಪಸ್ಥಿತರಿದ್ದರು.
ಕಾಂಗ್ರೆಸ್‌ನ 5 ಗ್ಯಾರಂಟಿಗಳು ಐದೂ ವರ್ಷ ಇರುತ್ತೆ: ಸಂಸದ ಡಿ.ಕೆ.ಸುರೇಶ್
ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ 15 ವರ್ಷ ಪೂರ್ಣಗೊಂಡ ಸರ್ಕಾರಿ ವಾಹನ ಸೇರಿದಂತೆ ಎಲ್ಲಾ ವಾಹನಗಳನ್ನು ನೋಂದಣಿ ಮಾಡಲು ಅವಕಾಶವಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಪ್ರಾದೇಶಿಕ ಸಾರಿಗೆ ಇಲಾಖೆಯ ಎಲ್ಲಾ ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
-ರಾಮಲಿಂಗಾರೆಡ್ಡಿ ಸಾರಿಗೆ ಸಚಿವ