Asianet Suvarna News Asianet Suvarna News

ಕಾವೇರಿ, ಕೃಷ್ಣಾ ಸೇರಿ 12 ನದಿ ನೀರು ಕುಡಿಯುವಂತಿಲ್ಲ: ಏನಿದು ಆಘಾತಕಾರಿ ಸಂಗತಿ!

ಕಾವೇರಿ, ಕೃಷ್ಣಾ ಸೇರಿದಂತೆ ರಾಜ್ಯದ ನದಿಗಳ ನೀರನ್ನು ಕುಡಿಯುವುದಕ್ಕೂ ಮುನ್ನ ಯೋಚಿಸುವ ಸ್ಥಿತಿ ಎದುರಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 12 ನದಿಗಳ ವಿವಿಧ ಭಾಗಗಳ ನೀರು ಸಂಗ್ರಹಿಸಿ ನಡೆಸಿದ ಪರೀಕ್ಷೆಯ ವರದಿ ಪರಿಗಣಿಸಿದರೆ ಈ ಸ್ಥಿತಿಯಿರುವುದಂತೂ ದಿಟ. 

12 rivers including Cauveri and Krishna are not drinkable gvd
Author
First Published Feb 10, 2024, 8:03 AM IST

ಗಿರೀಶ್ ಗರಗ

ಬೆಂಗಳೂರು (ಫೆ.10): ಕಾವೇರಿ, ಕೃಷ್ಣಾ ಸೇರಿದಂತೆ ರಾಜ್ಯದ ನದಿಗಳ ನೀರನ್ನು ಕುಡಿಯುವುದಕ್ಕೂ ಮುನ್ನ ಯೋಚಿಸುವ ಸ್ಥಿತಿ ಎದುರಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 12 ನದಿಗಳ ವಿವಿಧ ಭಾಗಗಳ ನೀರು ಸಂಗ್ರಹಿಸಿ ನಡೆಸಿದ ಪರೀಕ್ಷೆಯ ವರದಿ ಪರಿಗಣಿಸಿದರೆ ಈ ಸ್ಥಿತಿಯಿರುವುದಂತೂ ದಿಟ. ಏಕೆಂದರೆ, ವರದಿಯಲ್ಲಿ ಬೆಚ್ಚಿ ಬೀಳಿಸುವಂತಹ ಅಂಶ ಪತ್ತೆಯಾಗಿದ್ದು, ಆ ನದಿಗಳ ನೀರನ್ನು ನೇರವಾಗಿ ಕುಡಿದರೆ ಗಂಟಲು, ಕಣ್ಣು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಅಪಾಯ ಎದುರಾಗುವುದು ಖಚಿತವಂತೆ! ಹಾಗಂತ, ಇಡೀ ನದಿಗಳ ನೀರೇ ಅಪಾಯಕಾರಿಯಂತೇನಲ್ಲ. ಮಂಡಳಿಯು ಈ 12 ನದಿಗಳ ನಿರ್ದಿಷ್ಟ ತಾಣಗಳಲ್ಲಿನ ನೀರು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಆ ನೀರು ನಿಜಕ್ಕೂ ಆತಂಕ ಹುಟ್ಟಿಸುವಷ್ಟು ಕಲುಷಿತವಾಗಿರುವುದು ಗೋಚರಿಸಿದೆ. 

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ ನದಿಗಳ ನೀರಿನ ಗುಣಮಟ್ಟದ ಕುರಿತಂತೆ ಕಾಲಕಾಲಕ್ಕೆ ಪರೀಕ್ಷೆ ನಡೆಸುತ್ತದೆ. ಅದಕ್ಕಾಗಿಯೇ ಸ್ಥಾಪಿಸಲಾಗಿರುವ ಮೇಲ್ವಿಚಾರಣಾ ಘಟಕ (ಮಾನಿಟ ರಿಂಗ್ ಸ್ಟೇಷನ್)ಗಳಲ್ಲಿ ನೀರು ಸಂಗ್ರಹಿಸಿ ಅವುಗಳನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಅದರಂತೆ ಕಳೆದ ನವೆಂಬರ್‌ನಲ್ಲಿ ನಡೆಸಲಾದ ಪರೀಕ್ಷೆಯ ವರದಿಯಂತೆ ರಾಜ್ಯದ 12 ನದಿಗಳಲ್ಲಿನ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಎಂಬ ವರದಿ ಬಂದಿದೆ. ಅದರಲ್ಲೂ ಲಕ್ಷ್ಮಣತೀರ್ಥ, ಅರ್ಕಾವತಿ, ಕಬಿನಿ, ಶಿಂಷಾ ನದಿಗಳ ನೀರು ಶುದ್ದೀಕರಿಸಿದ ನಂತರವೂ ಕುಡಿಯಲು ಹಾಗೂ ಬಳಕೆಗೆ ಯೋಗ್ಯವಲ್ಲ ಎಂದು ಉಳಿದಂತೆ ನೇತ್ರಾವತಿ ನದಿ ನೀರನ್ನು ಶುದ್ದೀಕರಿಸಿ ಬಳಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. 

ಬೊಮ್ಮಾಯಿಯದು ದೇಶ ಕಂಡ ಅತಿಭ್ರಷ್ಟ ಸರ್ಕಾರ: ಸಚಿವ ರಾಮಲಿಂಗಾರೆಡ್ಡಿ

ಆರೋಗ್ಯ ಸಂಬಂಧಿ ಸಮಸ್ಯೆ: ನೀರನಲ್ಲಿನ ಡಿಒ, ಜೀವರಾಸಾಯನಿಕ ಆಮ್ಲಜನಕ, ಬ್ಯಾಕ್ಟಿರಿಯಾಗ ಳಾದ ಫೆಕಲ್ ಕೋಲಿಫಾರ್ಮ್ (ಎಫ್‌ಸಿ), ಟೋಟಲ್ ಕೋಲಿಫಾರ್ಮ್ (ಟಿಸಿ) ಪ್ರಮಾಣವನ್ನು ಪರೀಕ್ಷೆಗೊಳಪಡಿಸಲಾಗಿದೆ. ಅದರಲ್ಲಿ ಟೋಟಲ್ ಕೋಲಿಫಾರ್ಮ್ ಪ್ರಮಾಣ 100 ಎಂಎಲ್ ನೀರಿನಲ್ಲಿ 10 ಯುನಿಟ್‌ಗಿಂತ ಕಡಿಮೆಯಿರಬೇಕು. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಪರೀಕ್ಷಾ ವರದಿಯಲ್ಲಿರುವಂತೆ ಗಾಣಗಾಪುರ ಗ್ರಾಮದ ಬಳಿಯಲ್ಲಿ ಸಂಗ್ರಹಿಸಲಾದ ಭೀಮಾ ನದಿಯ ನೀರಿನಲ್ಲಿ 2.80 ಲಕ್ಷಯುನಿಟ್ ಇದೆ. 38 ಪರೀಕ್ಷಾ ಘಟಕಗಳಲ್ಲಿಯೂ ಟಿಸಿ ಪ್ರಮಾಣ ಭಾರೀ ಹೆಚ್ಚಳವಿದ್ದು ಆನೀರನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅದರಲ್ಲೂ ದೃಷ್ಟಿ ದೋಷ, ಗಂಟಲು, ಉಸಿರಾಟದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. 

ಯಾವ ನದಿಯೂ ಎ ವರ್ಗದಲ್ಲಿಲ್ಲ: ರಾಜ್ಯದ ನದಿಗಳನೀರಿನ ಗುಣಮಟ್ಟವನ್ನಾಧರಿಸಿ 'ಎ'ನಿಂದ 'ಇವರೆಗೆ 5 ವರ್ಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಎ ವರ್ಗದ ನೀರು ನೇರವಾಗಿ ಕುಡಿ ಯಲು ಯೋಗ್ಯವಾದಂತಹದ್ದಾಗಿದೆ. ಉಳಿದಂತೆ ಬಿ ವರ್ಗದ ನೀರನ್ನು ಸ್ನಾನ ಸೇರಿ ಇನ್ನಿತರ ಗೃಹ ಬಳಕೆಗೆ ಉಪಯೋಗಿಸಬಹುದಾಗಿದೆ. ಸಿ ವರ್ಗದ ನೀರನ್ನು ಶುದ್ದೀಕರಿಸಿ, ಎಚ್ಚರಿಕೆಯಿಂದ ಕುಡಿಯಲು ಬಳಕೆ ಮಾಡಬಹುದು. ಡಿ ವರ್ಗದ ನೀರನ್ನು ಮೀನು ಸಾಕಣೆಗೆ ಬಳಸಬಹುದು. ಇ ವರ್ಗದ ನೀರನ್ನು ಕೃಷಿ, ಕೈಗಾರಿಕೆಗಳಿಗೆ ಬಳಸಬಹುದಾಗಿದೆ. ಆದರೆ, ಎವರ್ಗದ ನಂತರದ ಎಲ್ಲ ನೀರನ್ನು ಎಚ್ಚರಿಕೆಯಿಂದ ಬಳಸಬೇಕು. ಆದರೆ, ರಾಜ್ಯದ 12 ನದಿಗಳಲ್ಲಿ ಯಾವ ನದಿಯ ನೀರೂ ಎ ವರ್ಗದ ಗುಣಮಟ್ಟದಲ್ಲಿಲ್ಲ.

ಜಲಚರಗಳಿಗೆ ಹೆಚ್ಚಿನ ಆಪತ್ತು: ಸಾಮಾನ್ಯವಾಗಿ ಶುದ್ಧ ನೀರಿನಲ್ಲಿ ಡಿಸಾಲ್‌ ಆಕ್ಸಿಜನ್ (ಕರಗಿದ ಆಮ್ಲಜನಕ, ಡಿಒ) ಪ್ರಮಾಣ 6 ಮಿಲಿ ಗ್ರಾಂಗಿಂತ ಕಡಿಮೆಯಿರಬೇಕು. ಇಲ್ಲದಿದ್ದರೆ, ನೀರಿನಲ್ಲಿ ಜಲಚರಗಳು ಬದುಕುವುದು ಕಷ್ಟ. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ 8 ಕಡೆ ಮಾತ್ರ ಡಿಒ ಪ್ರಮಾಣ 6 ಎಂಜಿಗಿಂತ ಕಡಿಮೆಯಿದೆ. ಉಳಿದ 30 ಕಡೆ ಡಿಒ ಪ್ರಮಾಣ 6 ಎಂಜಿಗಿಂತ ಹೆಚ್ಚಿದೆ. ಇದರಿಂದಾಗಿ ಬಹುತೇಕ ಕಡೆಗಳಲ್ಲಿ ಮೀನು ಸೇರಿದಂತೆ ಮತ್ತಿತರ ಜಲಚರಗಳು ಬದಕುವುದು ಕಷ್ಟ ಎನ್ನುವ ಪರಿಸ್ಥಿತಿಯಿದೆ.

ಯಾವ್ಯಾವ ನದಿ ನೀರು ಕುಡಿಯಲು ಯೋಗ್ಯವಲ್ಲ?
1. ಅರ್ಕಾವತಿ  | 2. ಲಕ್ಷ್ಮಣತೀರ್ಥ | 3. ತುಂಗಭದ್ರಾ | 4. ಭದ್ರಾ 5. ಕಾವೇರಿ | 6. ಕಬಿನಿ | 7. ಕಾಗಿನಿ | 8. ಕೃಷ್ಣಾ 9.ಶಿಂಷಾ | 10. ಭೀಮಾ |11. ನೇತ್ರಾವತಿ 12. ತುಂಗಾ

12 ನದಿಗಳ ಎಲ್ಲಾ ಕಡೆ ನೀರು ಅಯೋಗ್ಯವಲ್ಲ: ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಪರೀಕ್ಷೆಯ ಪ್ರಕಾರ ಎಲ್ಲಾ 12 ನದಿಗಳ ಎಲ್ಲಾ ಕಡೆಯ ನೀರೂ ಕುಡಿಯಲು ಯೋಗ್ಯವಲ್ಲ ಎಂದು ಅರ್ಥವಲ್ಲ. ಮ೦ಡಳಿಯು ಈ 12 ನದಿಗಳ ನಿರ್ದಿಷ್ಟ ತಾಣಗಳಲ್ಲಿನ ನೀರು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಅಲ್ಲಿನ ನೀರು ಆತಂಕ ಹುಟ್ಟಿ ಸುವಷ್ಟು ಕಲುಷಿತವಾಗಿರುವುದು ಗೋಚರಿಸಿದೆ.

ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ಸ್ತ್ರೀ ಸಂಘಗಳಿಂದ ಹಣ ಸುಲಿಗೆ?: ಅಸಲಿಗೆ ಆಗಿದ್ದೇನು?

ರಾಜ್ಯದಲ್ಲಿ 'ಎ' ವರ್ಗದ ಒಂದೂ ನದಿಯಿಲ್ಲ: ರಾಜ್ಯದ ನದಿಗಳ ನೀರಿನ ಗುಣಮಟ್ಟವನ್ನಾಧರಿಸಿ 'ಎ'ನಿಂದ 'ಇ'ವರೆಗೆ 5 ವರ್ಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿಎ ವರ್ಗದ ನದಿಯ ನೀರು ಮಾತ್ರ ನೇರವಾಗಿ ಕುಡಿಯಲು ಯೋಗ್ಯವಾದಂತಹ ದ್ದಾಗಿದೆ. ದುರದೃಷ್ಟವಶಾತ್ ರಾಜ್ಯದಲ್ಲಿ ಈ ವರ್ಗಕ್ಕೆ ಸೇರಿದ ಒಂದೂ ನದಿಯಿಲ್ಲ.

Follow Us:
Download App:
  • android
  • ios