ಕೋವಿಡ್ ಹೆಲ್ತ್ ಬುಲೆಟಿನ್ ಹೈಲೈಟ್ಸ್: ಯಾವ ಜಿಲ್ಲೆಯಲ್ಲಿ ಎಷ್ಟು ಕೊರೋನಾ ಕೇಸ್?
* ಕರ್ನಾಟಕದ ಇಂದಿನ ಇಂದು (ಆ.22) ಕೊರೋನಾ ಅಂಕಿ-ಸಂಖ್ಯೆ
* ಕರ್ನಾಟಕ ಆರೋಗ್ಯ ಇಲಾಖೆಯಿಂದ ಕೋವಿಡ್ ಹೆಲ್ತ್ ಬುಲೆಟಿನ್
* ಯಾವ ಜಿಲ್ಲೆಯಲ್ಲಿ ಎಷ್ಟು ಕೊರೋನಾ ಕೇಸ್?
ಬೆಂಗಳೂರು, (ಆ.22): ಕರ್ನಾಟಕದಲ್ಲಿ ಇಂದು (ಆ.22) 1189 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 22 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. 1456 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಈವರೆಗೆ 29,38,616 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 28,80,889 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 37,145 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಸದ್ಯ, 20,556 ಸಕ್ರಿಯ ಪ್ರಕರಣಗಳು ಇವೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಹೊರಡಿಸಿದೆ.
ಗಡಿ ಜಿಲ್ಲೆಯಲ್ಲಿ ಸಿಎಂ ಖುದ್ದು ಕೋವಿಡ್ ಪರಿಶೀಲನೆ
ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಮೂಲಕ ಬೆಂಗಳೂರನ್ನು ದಕ್ಷಿಣ ಕನ್ನಡ ಹಿಮದಿಕ್ಕಿದೆ. ಹಾಗಾದ್ರೆ ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು ಪ್ರಕಟಗಳು ಪತ್ತೆಯಾಗಿವ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು?
ದಕ್ಷಿಣ ಕನ್ನಡ 286, ಬೆಂಗಳೂರು ನಗರ 267, ಉಡುಪಿ 132, ಮೈಸೂರು 79, ಹಾಸನ 75, ಕೊಡಗು 55, ಚಿಕ್ಕಮಗಳೂರು 50, ಉತ್ತರ ಕನ್ನಡ 40, ತುಮಕೂರು 39, ಬೆಳಗಾವಿ 34, ಶಿವಮೊಗ್ಗ 24, ದಾವಣಗೆರೆ, ಮಂಡ್ಯ 19, ಬೆಂಗಳೂರು ಗ್ರಾಮಾಂತರ 12, ಚಿತ್ರದುರ್ಗ 10, ಚಾಮರಾಜನಗರ, ಕೋಲಾರ 8, ರಾಮನಗರ, ಬಳ್ಳಾರಿ 5, ಬಾಗಲಕೋಟೆ, ಧಾರವಾಡ 4, ಬೀದರ್, ಯಾದಗಿರಿ 3, ಗದಗ, ವಿಜಯಪುರ 2, ಹಾವೇರಿ, ಚಿಕ್ಕಬಳ್ಳಾಪುರ, ರಾಯಚೂರು, ಕೊಪ್ಪಳ 1.