Asianet Suvarna News Asianet Suvarna News

ಕರ್ನಾಟಕದಲ್ಲಿ ಮತ್ತೆ ಕೊರೋನಾ ಕೇಸ್‌ ಹೆಚ್ಚಳ: ಇಲ್ಲಿದೆ ಸೆ.15ರ ಅಂಕಿ-ಸಂಖ್ಯೆ

* ಕರ್ನಾಟಕದಲ್ಲಿ ಕೊರೋನಾ ಏರಿಕೆ
* ಹೊಸದಾಗಿ 1116 ಪಾಸಿಟಿವ್ ಕೇಸ್‌ ಪತ್ತೆ
* ಪಾಸಿಟಿವಿಟಿ ದರ ಶೇಕಡ 0.65

1116 New Coronavirus Cases and  8 deaths In Karnataka On Sept 15th rbj
Author
Bengaluru, First Published Sep 15, 2021, 8:06 PM IST
  • Facebook
  • Twitter
  • Whatsapp

ಬೆಂಗಳೂರು, (ಸೆ.15): ರಾಜ್ಯದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸಾವಿರಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದ ಕೊರೋನಾ ಕೇಸ್‌, ಇಂದು ಇಂದು (ಸೆ.15) ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.

ಹೌದು..ಹೊಸದಾಗಿ 1116 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು,. 8 ಜನ ಸೋಂಕಿತರು ಮೃತಪಟ್ಟಿದ್ದಾರೆ. 970 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಆದ್ರೂ ಎಚ್ಚರದಿಂದ ಇರೋಣ

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,64,083 ಕ್ಕೆ ಏರಿಕೆಯಾಗಿದೆ. ಇದುವರೆಗೆ 29,10,626 ಜನ ಗುಣಮುಖರಾಗಿದ್ದು, 37,537 ಜನ ಸೋಂಕಿತರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ 15,892 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 0.65 ರಷ್ಟು ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 462 ಜನರಿಗೆ ಸೋಂಕು ತಗುಲಿದ್ದು, 5 ಜನ ಸೋಂಕಿತರು ಮೃತಪಟ್ಟಿದ್ದಾರೆ. ಇನ್ನು 265 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ 7328 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಸೋಂಕಿತರ ಸಂಖ್ಯೆ
ಬಾಗಲಕೋಟೆ 0, ಬಳ್ಳಾರಿ 4, ಬೀದರ್ 0, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 5, ಧಾರವಾಡ 4, ಗದಗ 0, ಹಾವೇರಿ 1, ಕಲಬುರಗಿ 1, ಕೊಪ್ಪಳ 1, ರಾಯಚೂರು 0, ರಾಮನಗರ 0, ವಿಜಯಪುರ 0, ಯಾದಗಿರಿ 0, ಬೆಂಗಳೂರು ನಗರ 462, ಚಿಕ್ಕಮಗಳೂರು 50, ದಕ್ಷಿಣಕನ್ನಡ 102, ಹಾಸನ 81, ಕೊಡಗು 67, ಮೈಸೂರು 76, ತುಮಕೂರು 60, ಉಡುಪಿ 89 

Follow Us:
Download App:
  • android
  • ios