ಶಾಸಕರಿಗೆ ಸಂಕ್ರಾಂತಿ ಗಿಫ್ಟ್‌: ತಲಾ 10 ಕೋಟಿ ಅನುದಾನ, ಸಿದ್ದು ಘೋಷಣೆ

ಇತ್ತೀಚೆಗೆ ಬೆಳಗಾವಿ ವಿಧಾನಸಭೆ ಅಧಿವೇಶನ ದಲ್ಲಿ ಶಾಸಕರು 'ಗ್ಯಾರಂಟಿ ಯೋಜನೆ ಸೇರಿ ವಿವಿಧ ಕಾರಣಗಳಿಂದ ತಮ್ಮ ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ.

10 crore grant released to all MLAs in Karnataka Says CM Siddaramaiah

ಬೆಂಗಳೂರು(ಜ.14): ಬಿಜೆಪಿ, ಜೆಡಿಎಸ್ ಶಾಸಕರು ಸೇರಿ ಎಲ್ಲಾ ಶಾಸಕರಿಗೂ ತಲಾ ₹10 ಕೋಟಿ ಅನುದಾನ ಬಿಡು ಗಡೆಗೆ ಸಹಿ ಹಾಕಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. 

ಇತ್ತೀಚೆಗೆ ಬೆಳಗಾವಿ ವಿಧಾನಸಭೆ ಅಧಿವೇಶನ ದಲ್ಲಿ ಶಾಸಕರು 'ಗ್ಯಾರಂಟಿ ಯೋಜನೆ ಸೇರಿ ವಿವಿಧ ಕಾರಣಗಳಿಂದ ತಮ್ಮ ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ.

ಬಿಜೆಪಿಗಿಂತ ಕಾಂಗ್ರೆಸ್ ಅವಧಿಯಲ್ಲಿ ಕಡಿಮೆ ಹಣ ವೆಚ್ಚ: ಅಶೋಕ್ ಟೀಕೆ

ಸೋಮವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅನುದಾನ ಕೊರತೆ ಬಗ್ಗೆ ಪ್ರಸ್ತಾಪಮಾಡಿದರು. ಆಗಮಾತನಾಡಿದಸಿದ್ದರಾಮಯ್ಯ, 'ಭಾನುವಾರವಷ್ಟೇ ಕಡತಕ್ಕೆ ಸಹಿ ಹಾಕಿದ್ದೇನೆ. ಕಾಂಗ್ರೆಸ್ ಶಾಸಕರು ಮಾತ್ರವಲ್ಲ ಎಲ್ಲಾ ಶಾಸಕರಿಗೂ ತಲಾ 10 ಕೋಟಿ ರು. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ' ಎಂದು ಹೇಳಿದರು. ಮತ್ತೆ ಅಸಮಾಧಾನ: ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದಕೆಲ ಶಾಸಕರು, 10 ಕೋಟಿ ರು. ಅನುದಾನದಿಂದ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಆಗುವುದಿಲ್ಲ. ಹೆಚ್ಚುವರಿ ಅನುದಾನಬಿಡುಗಡೆ ಮಾಡಬೇಕು ಎಂದು ಬೇಡಿಕೆ ಇಟ್ಟರು. ಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ, ಸದ್ಯಕ್ಕೆ 10 ಕೋಟಿ ರು. ಅನುದಾನ ಬಳಕೆ ಮಾಡಿ.ಹೆಚ್ಚುವರಿ ಅನುದಾನಬೇಕಿರುವವರು ಫೆಬ್ರವರಿ ತಿಂಗಳಲ್ಲಿ ಪ್ರಸ್ತಾವನೆ ಸಲ್ಲಿಸಿ. 2025-26ನೇ ಸಾಲಿನ ಆಯವ್ಯಯದಲ್ಲಿ ಅನುದಾನಕ್ಕೆ ಅವಕಾಶ ಮಾಡಿಕೊಡಿತುತ್ತೇನೆ ಎಂದು ಭರವಸೆ ನೀಡಿದರು ಎಂದು ತಿಳಿದುಬಂದಿದೆ.

ಬಜೆಟಲ್ಲಿ ಇನ್ನಷ್ಟು ಅನುದಾನ ಭರವಸೆ 

• ಪಕ್ಷಭೇದವಿಲ್ಲದೇ ಎಲ್ಲ ಶಾಸಕರಿಗೆ ₹10 ಕೋಟಿ: ಸಿದ್ದರಾಮಯ್ಯ 
• 10 ಕೋಟಿ ರು. ಅನುದಾನ ಯಾವುದಕ್ಕೂ ಸಾಲಲ್ಲ • ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕೆಲವು ಶಾಸಕರ ಆಕ್ಷೇಪ 
• ಫೆಬ್ರವರಿಯಲ್ಲಿ ಹೆಚ್ಚುವರಿ ನಿಧಿಗೆ ಪ್ರಸ್ತಾವನೆ ಸಲ್ಲಿಕೆಗೆ ಸಿಎಂ ಸೂಚನೆ 
• ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಘೋಷಣೆ ಮಾಡುವ ಸುಳಿವು

ಹಣ ವೆಚ್ಚ ಮಾಡದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಟಿ!

ಬೆಂಗಳೂರು:  ಸಮಾಜ ಕಲ್ಯಾಣ ಇಲಾಖೆ ಹಾಗೂ ಇಲಾಖೆಯಡಿ ಬರುವ ವಿವಿಧ ನಿಗಮಗಳಲ್ಲಿ ಕೋಟಿ ಕೋಟಿ ಅನುದಾನ ಇದ್ದರೂ ಖರ್ಚು ಮಾಡದ ಅಧಿಕಾರಿಗಳಿಗೆ ಚಳಿ ಬಿಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ಕೂಡಲೇ ನೋಟಿಸ್ ನೀಡಿ, ಉತ್ತರ ಸಮರ್ಪಕವಾಗಿಲ್ಲದಿದ್ದರೆ ತಕ್ಷಣ ಅಮಾನತು ಮಾಡಿ ಎಂದು ಮುಖ್ಯ ಕಾರ್ಯದರ್ಶಿಗೆ ಖಡಕ್ ಸೂಚನೆ ನೀಡಿದ್ದರು. 
ಗೃಹ ಕಚೇರಿ ಕೃಷ್ಣಾದಲ್ಲಿ ಕಳೆದ ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ್ದ ಅವರು ಅಧಿಕಾರಿಗಳು ಕೈಯಲ್ಲಿ ಸರ್ಕಾರದ ಅನುದಾನ ಇದ್ದರೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದಿರುವುದು, ನಿಗಮಗಳ ಯೋಜನೆಗಳಿಗೆ ಹಣ ಬಳಸದೆ ಇಟ್ಟುಕೊಂಡಿರುವುದು, ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನೂ ಅನುಷ್ಠಾನಗೊಳಿಸದೆ ಕೈಕಟ್ಟಿ ಕೂತಿರುವುದನ್ನು ಕಂಡು ಸಿಡಿಮಿಡಿಗೊಂಡಿದ್ದರು. 

ಫಲಾನುಭವಿಗಳಿಗೆ ಕೊಡಲು ಕೊಟ್ಟ ಹಣ ಇಟ್ಟುಕೊಂಡು ಕೂರುವುದಕ್ಕಾ ನೀವು ಇರೋದು? ವರ್ಷದ ಕೊನೇ ತಿಂಗಳಲ್ಲೇ ಖರ್ಚು ಮಾಡುವ ಅಸಹ್ಯ ಅಭ್ಯಾಸ ಬೆಳೆಸಿಕೊಂಡಿದ್ದೀರಿ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಾರ್ಚ್ ಅಂತ್ಯದವರೆಗೆ ಕಾಯದೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನ ಸಮರ್ಪಕವಾಗಿ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು. 

Tumakuru: ನಗರಾಭಿವೃದ್ಧಿಗಾಗಿ 200 ಕೋಟಿ ರು. ಅನುದಾನ: ಸಚಿವ ಪರಮೇಶ್ವರ್‌

ಇಲಾಖೆಯ 739 ಕೋಟಿ ಉಳಿಕೆ: 

2024-25ನೇ ಸಾಲಿನ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಮೀಸಲಿಟ್ಟಿದ್ದ ₹5,377 ಕೋಟಿ ಅನುದಾನದ ಪೈಕಿ ಈವರೆಗೆ 3,631 ಕೋಟಿ ಬಿಡುಗಡೆಯಾಗಿದೆ. ₹2.892 ಕೋಟಿ ಮಾತ್ರ ವೆಚ್ಚ ಮಾಡಲಾಗಿದೆ. ಇನ್ನೂ 2739 ಕೋಟಿ ಹಾಗೇ ಉಳಿದಿದೆ. ಅಂಬೇಡ್ಕರ್ ನಿಗಮದಲ್ಲಿ 1900 ಕೋಟಿ, ಭೋವಿ ನಿಗಮದಲ್ಲಿ 107 ಕೋಟಿ ಸೇರಿ ಎಲ್ಲ ನಿಗಮಗಳಲ್ಲೂ ನೂರಾರು ಕೋಟಿ ಹಣ ಯಾಕೆ ಖರ್ಚು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. 

ಸೆಪ್ಟೆಂಬರ್ ಒಳಗೆ ವಿದ್ಯಾರ್ಥಿವೇತನ: 

ಇನ್ನು ಮುಂದೆ ಪ್ರತಿ ವರ್ಷ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಸೆಪ್ಟೆಂಬರ್ ಅಂತ್ಯದೊಳಗೆ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ನವೆಂಬರ್ ಅಂತ್ಯದ ಒಳಗಾಗಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಆಧಾರ್ ಮತ್ತಿತರರ ಕಾರಣಗಳಿಂದ ವಿದ್ಯಾರ್ಥಿ ವೇತನದಲ್ಲಿ ಏಳಂಬವಾಗಬಾರದು ಎಂದು ಸೂಚಿಸಿದ್ದರು. 

Latest Videos
Follow Us:
Download App:
  • android
  • ios