Asianet Suvarna News Asianet Suvarna News

ರಾಹುಲ್‌ಗಾಂಧಿ ಯಾತ್ರೆಗೆ 1 ವರ್ಷ ಹಿನ್ನೆಲೆ; ನಾಡಿದ್ದು ಕಾಂಗ್ರೆಸ್‌ ಮತ್ತೆ ಪಾದಯಾತ್ರೆ

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ನಡೆಸಿದ ‘ಭಾರತ್‌ ಜೋಡೋ’ ಯಾತ್ರೆ ಆರಂಭವಾಗಿ ಸೆ.7ಕ್ಕೆ ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯಾ ಜಿಲ್ಲೆ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ.

1 year of Rahul Gandhis Bharat Jodo Yatra Congress again Padayatra rav
Author
First Published Sep 5, 2023, 7:27 AM IST

ಬೆಂಗಳೂರು (ಸೆ.5) :  ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ನಡೆಸಿದ ‘ಭಾರತ್‌ ಜೋಡೋ’ ಯಾತ್ರೆ ಆರಂಭವಾಗಿ ಸೆ.7ಕ್ಕೆ ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯಾ ಜಿಲ್ಲೆ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(KPCC President DK Shivakumar) ಅವರು, ಭಾರತ್‌ ಜೋಡೋ ಯಾತ್ರೆ(Bharat jodo yatre) ಆರಂಭವಾಗಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಒಂದು ಗಂಟೆ ಪಾದಯಾತ್ರೆ ಮಾಡಲು ಯೋಜಿಸಲಾಗಿದೆ. ಸೆ.7ರಂದು ಸಂಜೆ 5ರಿಂದ 6 ಗಂಟೆಯವರೆಗೆ ಪಾದಯಾತ್ರೆ ಮಾಡಲಾಗುವುದು. ಆಯಾ ಜಿಲ್ಲೆಯ ಕಾಂಗ್ರೆಸ್‌ ಅಧ್ಯಕ್ಷರು ಮತ್ತು ಮುಖಂಡರು ಪಾದಯಾತ್ರೆಯ ಮಾರ್ಗ ನಿರ್ಧರಿಸಲಿದ್ದಾರೆ ಎಂದು ಹೇಳಿದರು.

ದೇಶದ ಎಲ್ಲಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ, ಸೆ.7 ರಂದು ವರ್ಷಾಚರಣೆ ಆಚರಿಸಲು ಪ್ಲಾನ್

ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು ರಾಮನಗರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಸೆ.7ರಂದು ರಾಮನಗರದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಸೆ.7ರಂದೇ ಸಚಿವ ಸಂಪುಟ ಸಭೆಯಿದೆ. ಕ್ಯಾಬಿನೆಟ್‌ ಸಭೆ ಬಳಿಕ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಸಂಜೆಯ ವೇಳೆ ನಡೆಯುವ ಪಾದಯಾತ್ರೆಗಳಲ್ಲಿ ಪಾಲ್ಗೊಳ್ಳಲಿದಾರೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕಾಗಿ ಪಾದಯಾತ್ರೆ ಮಾಡುವುದಿಲ್ಲ ಎಂದು ವಿವರಿಸಿದರು. 

ರಾಹುಲ್‌ ಗಾಂಧಿಯಿಂದ ಮತ್ತೊಂದು ಭಾರತ್‌ ಜೋಡೋ ಯಾತ್ರೆ: ಈಸ್ಟ್‌ ಟು ವೆಸ್ಟ್‌ ಶೀಘ್ರ ಆರಂಭ

Follow Us:
Download App:
  • android
  • ios