Asianet Suvarna News Asianet Suvarna News

ಬೆಂಗಳೂರು ಕಂಬಳಕ್ಕೆ ಸರ್ಕಾರದಿಂದ 1 ಕೋಟಿ ಸಹಾಯಧನ: ಡಿ.ಕೆ.ಶಿವಕುಮಾರ್

ರಾಜಧಾನಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಕಂಬಳ ಓಟದ ಸ್ಪರ್ಧೆಗೆ ಅಗತ್ಯ ಸಹಾಯಧನ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. 

1 crore subsidy from the government for Bengaluru Kambala Says DK Shivakumar gvd
Author
First Published Oct 12, 2023, 4:00 AM IST

ಬೆಂಗಳೂರು (ಅ.12): ರಾಜಧಾನಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಕಂಬಳ ಓಟದ ಸ್ಪರ್ಧೆಗೆ ಅಗತ್ಯ ಸಹಾಯಧನ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಬುಧವಾರ 'ಬೆಂಗಳೂರು ಕಂಬಳ- ನಮ್ಮ ಕಂಬಳದ ಕರೆಪೂಜೆ' ನೆರವೇರಿಸಿ ಮಾತನಾಡಿದ ಅವರು 'ನಾಡಿನ ಹೆಮ್ಮೆಯ ಇತಿಹಾಸ, ದೇಶೀಯ ಹಾಗೂ ಐತಿಹಾಸಿಕವಾದ ಕಂಬಳಕ್ಕೆ ಹೆಚ್ಚಿನ ಸಹಕಾರ ನೀಡಲಾಗುವುದು. 20 ಕಂಬಳಗಳಿಗೆ ತಲಾ 5 ಲಕ್ಷ ರು.ನಂತೆ 1 ಕೋಟಿ ಸಹಾಯಧನ ನೀಡಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಜತೆ ಚರ್ಚೆ ನಡೆಸಲಾಗುವುದು' ಎಂದು ಹೇಳಿದರು.

"ನಮ್ಮ ಸಂಸ್ಕೃತಿಯೇ ಈ ದೇಶದ ದೊಡ್ಡ ಆಸ್ತಿ. ದಕ್ಷಿಣ ಕನ್ನಡ ಜಿಲ್ಲೆ ಶ್ರೀಮಂತ ಜನಪದ ಆಚರಣೆಗಳನ್ನು ಹೊಂದಿದೆ. ಕಂಬಳ ಈ ಬಾರಿ ಬೆಂಗಳೂರಿನಲ್ಲಿ ನಡೆಯುವ ಕಾರಣ ಎರಡೂ ಜಿಲ್ಲೆಗಳ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಈ ಐತಿಹಾಸಿಕ ಕಂಬಳ ಆಯೋಜನೆ ಮಾಡುತ್ತಿರುವುದಕ್ಕೆ ನಮ್ಮ ಸಹಕಾರ ಎಂದಿಗೂ ಇರುತ್ತದೆ. ದೇವರು ವರ, ಶಾಪ ಎರಡೂ ನೀಡದೆ ಅವಕಾಶ ನೀಡುತ್ತಾನೆ. ಈ ಅವಕಾಶ ಬಳಸಿಕೊಳ್ಳಿ" ಎಂದು ತಿಳಿಸಿದರು.

ಮದುವೆಯಾಗುವ ಹುಡುಗ ಅದಿತಿ ಗಂಡನ ಥರ ಇರಬೇಕು: ನಾನು ರಶ್ಮಿಕಾ ಬಿಂಬ ಎಂದ ಸೋನು ಗೌಡ!

ತುಳು ಕೂಟಕ್ಕೆ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ನವೆಂಬರ್ 24, 25 ಮತ್ತು 26ರಂದು ಕಂಬಳ ನಡೆಯಲಿದೆ. ಅದಕ್ಕಾಗಿ ಕಂಬಳ ಓಟಕ್ಕೆ ಕೆರೆಯನ್ನು ಸಿದ್ಧಪಡಿಸುವ ಕಾರ್ಯ ಆರಂಭಿಸಲಾಗಿದೆ. ಕಾರ್ಯಕ್ರಮದಲ್ಲಿ ಸಂಸದ ಸದಾನಂದಗೌಡ, ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಾಸಕರಾದ ಅಶೋಕ್ ಕುಮಾರ್ ರೈ, ಎನ್‌.ಎ. ಹ್ಯಾರಿಸ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ನಮ್ಮ ಸ್ವತ್ತು’ ಮನೆಬಾಗಿಲಿಗೆ ಆಸ್ತಿ ದಾಖಲಾತಿ: ಬ್ರ್ಯಾಂಡ್‌ ಬೆಂಗಳೂರು ಮೂಲಕ ‘ನಮ್ಮ ಸ್ವತ್ತು’ ಯೋಜನೆಯಡಿ ಮನೆಬಾಗಿಲಿಗೆ ಆಸ್ತಿ ದಾಖಲಾತಿ, ಮೊಬೈಲ್‌ನಲ್ಲೇ ಸಾರ್ವಜನಿಕರಿಗೆ ಮನೆ ನಿರ್ಮಾಣದ ನಕ್ಷೆ ಮಂಜೂರಾತಿ, ರಸ್ತೆ ಕಾಮಗಾರಿಯ ಅವ್ಯವಹಾರ ತಡೆಯಲು ಕ್ಯೂಆರ್‌ಕೋಡ್ ಅಳವಡಿಕೆ, ನಾಗರಿಕರ ನೇತೃತ್ವದಲ್ಲಿ ವಾರ್ಡ್ ಸಮಿತಿ ರಚಿಸಿ ಪಾರ್ಕ್ ಮತ್ತು ಕ್ರೀಡಾಂಗಣ ನಿರ್ವಹಣೆ, ಕಟ್ಟುನಿಟ್ಟಿನ ತೆರಿಗೆ ಸಂಗ್ರಹ ಸಂಬಂಧ ಹೊಸ ತಂಡ ರಚನೆ ಸೇರಿದಂತೆ ಹತ್ತು ಹಲವು ಸುಧಾರಣಾ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಜ್ಞಾನಜ್ಯೊತಿ ಸಭಾಂಗಣದಲ್ಲಿ  ಬ್ರ್ಯಾಂಡ್ ಬೆಂಗಳೂರು ಕುರಿತು ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬ್ರಾಂಡ್ ಬೆಂಗಳೂರಿಗಾಗಿ ಸಾರ್ವಜನಿಕರಿಂದ 70 ಸಾವಿರ ಸಲಹೆಗಳು ಬಂದಿವೆ. ಬೆಂಗಳೂರು ಯೋಜನಾ ಬದ್ಧ ನಗರವಲ್ಲ. ಇದನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕನುಗುಣವಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಹಣಕಾಸಿನ ಲಭ್ಯತೆ ಆಧರಿಸಿ ಯೋಜನೆ ಜಾರಿಗೊಳಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿ, ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾರ್ಯಾನುಷ್ಠಾನ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ಸರಿಯಾದ ದಾಖಲೆಗಳಿಲ್ಲ: ಬೆಂಗಳೂರಿನಲ್ಲಿ ಯಾರ ಆಸ್ತಿಗೂ ಸರಿಯಾದ ದಾಖಲೆಗಳಿಲ್ಲ. ಕೆಲವರ ದಾಖಲೆಗಳು ಸರಿ ಇದ್ದರೂ, ಯಾರ ಖಾತೆಗೆ ಯಾರದೋ ಹೆಸರು, ಇನ್‌ನ್ಯಾರೊ ಪರಭಾರೆ ಮಾಡುವುದು ಕಂಡುಬರುತ್ತಿದೆ. ಆಸ್ತಿ ದಾಖಲೆ ಸರಿಪಡಿಸಲು ಜನರು ಕಚೇರಿ ಅಲೆದಾಟ ನಡೆಸಬೇಕಾಗಿದೆ. ಜತೆಗೆ ಭ್ರಷ್ಟಾಚಾರ ತಪ್ಪಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಇನ್ನು ಮುಂದೆ ‘ನಮ್ಮ ಸ್ವತ್ತು’ಯೋಜನೆ ಮೂಲಕ ಜನರ ಮನೆಬಾಗಿಲಿಗೆ ಆಸ್ತಿ ದಾಖಲಾತಿ ತಲುಪಿಸುವ ಕೆಲಸ ನಡೆಯಲಿದೆ ಎಂದು ಹೇಳಿದರು.

ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆ: ಶಾಸಕ ಯತ್ನಾಳ್‌

ನಗರದ ರಸ್ತೆ ಕಾಮಗಾರಿ ಹೆಸರಿನಲ್ಲಿ ಭಾರೀ ಅವ್ಯವಹಾರ ನಡೆಯುತ್ತಿವೆ. ಒಂದೇ ರಸ್ತೆಗೆ ಎರಡೂ ದಿಕ್ಕಿನಿಂದಲೂ ಬೇರೆ ಬೇರೆ ಗುತ್ತಿಗೆದಾರರು ಕಾಮಗಾರಿಗಳ ಬಿಲ್ ಪಡೆದಿ ರುವ ಉದಾಹರಣೆಗಳಿವೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ರಸ್ತೆ ಅಭಿವೃದ್ಧಿಗೆ ಯಾವ ಮೂಲದಿಂದ ಹಣ ಖರ್ಚು ಮಾಡಲಾಗಿದೆ. ಪಾಲಿಕೆ, ಸಂಸದರು, ಶಾಸಕರು ಯಾವ ನಿಯಮವನ್ನು ಬಳಸಲಾಗಿದೆ ಎಂಬ ಲೆಕ್ಕಾಚಾರ ಕರಾರುವಕ್ಕಾಗಿ ಇರಬೇಕು. ಕಾಮಗಾರಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ. ಗುತ್ತಿಗೆದಾರರು ಯಾರು ಎಂಬೆಲ್ಲಾ ವಿವರ ಗಳನ್ನು ಒಳಗೊಂಡ ಕ್ಯೂಆರ್ ಕೋಡ್ ಅನ್ನು ಪ್ರತಿಯೊಂದು ರಸ್ತೆಗೂ ಹಾಕುವ ಕೆಲಸ ಮಾಡಲಾಗುವುದು ಎಂದರು.

Follow Us:
Download App:
  • android
  • ios